100 ದಿನದಲ್ಲಿ 10,000 ಕೋಟಿ ರೂಪಾಯಿ ಪ್ರಾಜೆಕ್ಟ್ !
ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ತರಾತುರಿಯಲ್ಲಿ ಮಹತ್ವದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಪಿಣರಾಯಿ ವಿಜಯನ್ ಸರ್ಕಾರ ಇಂದು 100 ದಿನಗಳಲ್ಲಿ 10,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಪೂರೈಸುವುದಾಗಿ ಘೋಷಿಸಿದೆ.
ಜನವರಿ ಸೇರಿ ಮುಂದಿನ ನಾಲ್ಕು ತಿಂಗಳ ಅವಧಿಗೆ ಉಚಿತ ರೇಷನ್ ಕಿಟ್ಗಳ ಹಂಚಿಕೆ ಮುಂದುವರಿಸುವುದಾಗಿಯೂ ಘೋಷಿಸಿರುವ ಪಿಣರಾಯಿ ಸರ್ಕಾರ, ವೆಲ್ಫೇರ್ ಪೆನ್ಶನ್ ಅನ್ನು ಉನ್ನತೀಕರಿಸಿದೆ. ಈ ಘೋಷಣೆಯನ್ನು ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎಡರಂಗ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದ 600 ಆಶ್ವಾಸನೆಗಳ ಪೈಕಿ 570 ಅನ್ನು ಪೂರೈಸಿದೆ. 2016ರಿಂದೀಚೆಗೆ ಇದುವರೆಗೆ ಪ್ರಣಾಳಿಕೆಯ ಭರವಸೆಯಲ್ಲದೇ ಇತರೆ ನೂರಾರು ಕಾಮಗಾರಿ, ಯೋಜನೆಗಳನ್ನೂ ಸರ್ಕಾರ ಪೂರ್ಣಗೊಳಿಸಿದೆ ಎಂದು ಹೇಳಿದರು.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ್ದ 100 ದಿನಗಳಲ್ಲಿ ಪೂರೈಸುವ ಯೋಜನೆಗಳ ಬಹುದೊಡ್ಡ ಯಶ ಕಂಡಿದೆ. ಅದರಿಂದ ಪ್ರೇರಿತರಾಗಿ ಈಗ ಎರಡನೇ ಹಂತದ 100 ದಿನಗಳ ಯೋಜನೆಯನ್ನು ಘೋಷಿಸಲಾಗಿದೆ. 10,000 ಕೋಟಿ ರೂಪಾಯಿ ಪ್ರಾಜೆಕ್ಟ್ ಪೈಕಿ 5,700 ಕೋಟಿ ರೂಪಾಯಿ ವೆಚ್ಚದ 5,526 ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಅಥವಾ ಉದ್ಘಾಟಿಸಲಾಗುವುದು. ಇದಲ್ಲದೇ 4,300 ಕೋಟಿ ರೂಪಾಯಿ ಮೌಲ್ಯದ 646 ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ವಿಜಯನ್ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)
0 التعليقات: