ಹೊಸ ವರ್ಷಕ್ಕೆ ಗ್ರಾಹಕರಿಗೆ ಬಿಗ್ ಶಾಕ್ : ಜನವರಿಯಿಂದ ಟೀವಿ, ಫ್ರಿಜ್ ಬೆಲೆ ಶೇ.10 ರಷ್ಟು ಏರಿಕೆ!
ನವದೆಹಲಿ : ಹೊಸ ವರ್ಷಕ್ಕೆ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಜನವರಿಯಿಂದ ಟೀವಿ, ರೆಫ್ರಿಜರೇಟರ್ ನಂತಹ ಗೃಹೋಪಯೋಗಿ ವಸ್ತುಗಳ ಬೆಲೆ ಶೇ. 10ರವರೆಗೆ ಏರಿಕೆಯಾಗಲಿದೆ.
ಟೀವಿ, ರೆಫ್ರಿಜರೇಟರ್ ಸೇರಿದಂತೆ ಹಲವು ವಸ್ತುಗಳ ಉತ್ಪಾದನೆಗೆ ಪ್ರಮುಖವಾಗಿ ಬಳಸುವ ತಾಮ್ರ, ಅಲ್ಯುಮಿನಿಯಂ ದರ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಜನವರಿಯಿಂದ ಶೇ. 10 ರಷ್ಟು ಏರಿಕೆಯಾಗಲಿದೆ.
ಇನ್ನು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪ್ಲಾಸ್ಟಿಕ್ ದರವೂ ಏರಿಕೆಯಾಗಿದೆ. ಮತ್ತೊಂದಡೆ ಕಚ್ಚಾತೈಲದ ದರ ಏರಿಕೆಯ ಪರಿಣಾಮ ಸಾಗಣೆ ವೆಚ್ಚವೂ ಏರಿಕೆಯಾಗಿದೆ. ಹೀಗಾಗಿ ಹೊಸ ವರ್ಷದಲ್ಲಿ ದರ ಏರಿಸಲು ಎಲ್ ಜಿ, ಪ್ಯಾನಸೋನಿಕ್, ಥಾಮ್ಸನ್ ಸೇರಿ ಹಲವು ಕಂಪನಿಗಳು ದರ ಏರಿಕೆಗೆ ಮುಂದಾಗಿವೆ.
0 التعليقات: