ರಾಜ್ಯ ಸರ್ಕಾರದಿಂದ 'ಖಾಸಗಿ ಚಾಲಕ'ರಿಗೆ ಬಂಪರ್ ಆಫರ್ : 10 ದಿನ ಕೆಲಸ ಮಾಡಿದ್ರೂ ಸಿಗುತ್ತೆ 3 ತಿಂಗಳ ಸಂಬಳ..!
ಬೆಂಗಳೂರು : ಸಾರಿಗೆ ನೌಕರರ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿದ್ದು, ಈ ಹಿನ್ನೆಲೆ ನಾಳೆಯಿಂದ ಖಾಸಗಿ ವಾಹನಗಳ ಓಡಾಟ ನಡೆಸುವ ಮೂಲಕ ಸಾರ್ವಜನಿಕ ಸೇವೆ ಒದಗಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಇದರ ಜೊತೆಗೆ ರಾಜ್ಯ ಸರ್ಕಾರ ಖಾಸಗಿ ಬಂಪರ್ ಆಫರ್ ನೀಡಲು ಚಿಂತನೆ ನಡೆಸಲಾಗಿದ್ದು, ಖಾಸಗಿ ಚಾಲಕರಿಗೆ ತಿಂಗಳಿಗೆ 18 ಸಾವಿರ ಸಂಬಳದಂತೆ, ಮೂರು ತಿಂಗಳವರೆಗೆ 54 ಸಾವಿರ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಖಾಸಗಿ ಚಾಲಕರು ಹತ್ತು ದಿನಗಳ ಕಾಲ ಕೆಲಸ ಮಾಡಿದ್ರೂ ಸಾಕು ಸಂಪೂರ್ಣ 3 ತಿಂಗಳ ವೇತನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಆಕಸ್ಮಾತ್.ಸಾರಿಗೆ ನೌಕರರು ಪ್ರತಿಭಟನೆ ಕೈ ಬಿಡದೇ ಇದ್ರೆ, ಅವರನ್ನು ಕೆಲಸದಿಂದ ವಜಾಗೊಳಿಸಿ ಖಾಸಗಿ ಚಾಲಕರನ್ನೇ ನಿಗಮದ ಚಾಲಕರಾಗಿ ನೇಮಿಸಲು ಸರ್ಕಾರ ಚಿಂತಿಸಿದೆ ಎನ್ನಲಾಗಿದೆ. ನಾಳೆ ರಾತ್ರಿ ಒಳಗೆ ಈ ಬಗ್ಗೆ ಸರ್ಕಾರ ಅಂತಿಮ ಮಾಡಲಿದೆ. ಒಟ್ಟಿನಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿದ್ದು, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮುಷ್ಕರದಿಂದ ಬಹಳ ತೊಂದರೆ ಅನುಭವಿಸುವಂತಾಗಿದೆ.
0 التعليقات: