Saturday, 12 December 2020

ಕೋವಿಡ್ ಆಸ್ಪತ್ರೆಯಲ್ಲಿ 1 ಗಂಟೆ ವಿದ್ಯುತ್ ಸ್ಥಗಿತವಾಗಿ ಮೂವರು ರೋಗಿಗಳು ಸಾವು


ಕೋವಿಡ್ ಆಸ್ಪತ್ರೆಯಲ್ಲಿ 1 ಗಂಟೆ ವಿದ್ಯುತ್ ಸ್ಥಗಿತವಾಗಿ ಮೂವರು ರೋಗಿಗಳು ಸಾವು


ಭೋಪಾಲ್: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಭೋಪಾಲ್ ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದು ಗಂಟೆ ವಿದ್ಯುತ್ ಕಡಿತ ಆದ ನಂತರ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಸಂಜೆ 6 ಗಂಟೆಗೆ ವಿದ್ಯುತ್ ಕಡಿತವಾದ ನಂತರ ಬ್ಯಾಕಪ್ ಜನರೇಟರ್ ಕಾರ್ಯನಿರ್ವಹಿಸಲಿಲ್ಲ. ಸಂಜೆ 7 ಗಂಟೆಗೆ ವಿದ್ಯುತ್ ಬಂದಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಹಮೀದಿಯಾ ಆಸ್ಪತ್ರೆಯಲ್ಲಿನ ಕೋವಿಡ್-19 ಚಿಕಿತ್ಸಾ ಘಟಕದಲ್ಲಿ ತುರ್ತು ಆರೈಕೆಯಲ್ಲಿದ್ದ ಮೂವರು ರೋಗಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿ ವಿದ್ಯುತ್ ಸ್ಥಗಿತವಾಗಿ ಯಾವ ರೋಗಿಯೂ ಮೃತಪಟ್ಟಿಲ್ಲವೆಂದು ತಿಳಿಸಿದೆ.

ಘಟನೆಯ ನಂತರ ಜನರೇಟರ್ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಘಟನೆಯ ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ, ವೈದ್ಯಕೀಯ ಡೀನ್ ಗೆ ನೋಟಿಸ್ ಜಾರಿ ಮಾಡಲಾಗಿದೆ.

ಆಮ್ಲಜನಕ ಸಪೋರ್ಟ್ ಹೊಂದಿರುವ 319 ಹಾಸಿಗೆಗಳು ಕೋವಿಡ್ ಸೆಂಟರ್ ನಲ್ಲಿ ಇದ್ದು, 150 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ನೀಡಿರುವ ಮಾಹಿತಿಯಂತೆ, ಆಸ್ಪತ್ರೆಯಲ್ಲಿ ನಡೆದ ಘಟನೆ ಗಂಭೀರವಾಗಿ ಪರಿಗಣಿಸಲಾಗಿದೆ. ಜನರೇಟರ್ ನಿರ್ವಹಣೆಗೆ ಅನುದಾನ ನೀಡಲಾಗಿದ್ದರೂ ಕೂಡ ವಿದ್ಯುತ್ ಕಡಿತದ ನಂತರ 10 ನಿಮಿಷ ಕೆಲ ಕಾರ್ಯನಿರ್ವಹಿಸಿದ ಜನರೇಟರ್ ಮತ್ತೆ ಕೆಟ್ಟು ನಿಂತಿದೆ. ಒಂದು ಗಂಟೆಯೊಳಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಘಟನೆಯ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ ಎಂದು ಹೇಳಲಾಗಿದೆ.SHARE THIS

Author:

0 التعليقات: