Thursday, 31 December 2020

 ಬ್ರಿಟನ್ ನಿಂದ ಬಂದಿರುವ 33 ಜನರಲ್ಲಿ ಕೊರೊನಾ ದೃಢ

ಬ್ರಿಟನ್ ನಿಂದ ಬಂದಿರುವ 33 ಜನರಲ್ಲಿ ಕೊರೊನಾ ದೃಢ


 ಬ್ರಿಟನ್ ನಿಂದ ಬಂದಿರುವ 33 ಜನರಲ್ಲಿ ಕೊರೊನಾ ದೃಢ

ಬೆಂಗಳೂರು: ಬ್ರಿಟನ್ ನಿಂದ ಆಗಮಿಸಿರುವ 33 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 70 ಜನರ ಬಗ್ಗೆ ಇನ್ನೂ ಮಾಹಿತಿ ಸಿಗುತ್ತಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ರೂಪಾಂತರ ಕೊರೊನಾ ವೇಗವಾಗಿ ಹರಡುತ್ತಿದ್ದು, ಬ್ರಿಟನ್ ನಿಂದ ಬಂದಿರುವ 33 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅವರ ಸಂಪರ್ಕದಲ್ಲಿದ್ದ 5 ಜನರಿಗೂ ಸೋಂಕು ಹರಡಿದ್ದು, ಒಟ್ಟು 38 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದರು.

ಇದೇ ವೇಳೆ ಕೇಂದ್ರದ ಸೂಚನೆ ಹಿನ್ನೆಲೆಯಲ್ಲಿ ನಾಳೆಯಿಂದ 5 ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಡ್ರೈರನ್ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

 ಗ್ರಾ.ಪಂ. ಚುನಾವಣೆ : ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ನಡೆಗೆ ಆಯೋಗ ಆಕ್ಷೇಪ

ಗ್ರಾ.ಪಂ. ಚುನಾವಣೆ : ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ನಡೆಗೆ ಆಯೋಗ ಆಕ್ಷೇಪ


 ಗ್ರಾ.ಪಂ. ಚುನಾವಣೆ : ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ನಡೆಗೆ ಆಯೋಗ ಆಕ್ಷೇಪ

ಬೆಂಗಳೂರು,ಜ.1- ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ರಾಜಕೀಯ ಪಕ್ಷಗಳು ಬಿಂಬಿಸಿಕೊಳ್ಳುತ್ತಿರುವುದಕ್ಕೆ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷ ರಹಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ರಾಜಕೀಯ ಹಿನ್ನೆಲೆಯಲ್ಲಿ ಸ್ಪರ್ಧೆ ಮಾಡಿರುವುದಿಲ್ಲ.

ಆದರೂ ಎಲ್ಲಾ ರಾಜಕೀಯ ಪಕ್ಷಗಳು ನಾವೇ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸುತ್ತಿದ್ದೇವೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ. ನಮ್ಮ ಬೆಂಬಲಿತ ಅಭ್ಯರ್ಥಿಗಳೇ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಕಡೆ ಗೆಲುವು ಸಾಧಿಸಿದ್ದಾರೆ ಎನ್ನುವುದಕ್ಕೆ ರಾಜಕೀಯ ಪಕ್ಷಗಳ ಬಳಿ ಯಾವ ಆಧಾರವಿದೆ. ರಾಜಕೀಯ ಪಕ್ಷಗಳ ಚಿಹ್ನೆಯಿಂದ ಸ್ಪರ್ಧಿಸದಿರುವಾಗ ಅದನ್ನು ನಮ್ಮ ಪಕ್ಷದ ಚಿಹ್ನೆ ಹೇಳಲು ಯಾವ ಆಧಾರವಿದೆ ಎಂದು ಚುನಾವಣಾ ಆಯೋಗ ಮೂಲಭೂತ ಪ್ರಶ್ನೆ ಎತ್ತಿದೆ.

ಮೊದಲಿನಿಂದಲೂ ಈ ಚುನಾವಣೆಯು ರಾಜಕೀಯ ರಹಿತವಾಗಿದೆ. ಆದರೂ ಪ್ರಚಾರದ ವೇಳೆಯೂ ಅಭ್ಯರ್ಥಿಗಳ ಪರವಾಗಿ ಜನಪ್ರತಿನಿಧಿಗಳು ಪ್ರಚಾರ ಮಾಡುವುದಕ್ಕೆ ತಾವು ಸೂಚನೆ ಕೊಟ್ಟಿದ್ದೇವು. ಇದೀಗ ಫಲಿತಾಂಶ ಹೊರಬಿದ್ದ ನಂತರ ನಮ್ಮ ಪಕ್ಷವೆ ಹೆಚ್ಚು ಗೆದ್ದಿದೆ ಎಂದು ಹೇಳುತ್ತಿರುವುದು ಚುನಾವಣಾ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ಅಸಮಾಧಾನ ಹೊರಹಾಕಿದೆ.

ಮಾಧ್ಯಮಗಳಿಗೂ ಕೂಡ ನಾವು ಗೆದ್ದ ಅಭ್ಯರ್ಥಿಗಳನ್ನು ರಾಜಕೀಯ ಪಕ್ಷಗಳ ಜೊತೆ ಬಿಂಬಿಸಬಾರದೆಂದು ನಿರ್ದೇಶನ ನೀಡಿದ್ದೆವು. ಆದರೆ ಪ್ರಜಾಪ್ರಭುತ್ವದ 4ನೇ ರಂಗ ಎನಿಸಿದ ಮಾಧ್ಯಮಗಳು ಕೂಡ, ಇಂತಹ ರಾಜಕೀಯ ಪಕ್ಷಗಳು ಮುನ್ನಡೆ ಸಾಧಿಸಿವೆ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ. ಕಳೆದ ಎರಡು ದಿನಗಳಿಂದ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಗಮನಿಸುತ್ತಿದ್ದೇವೆ.

ಸೂಕ್ಷ್ಮವಾಗಿ ಆಲಿಸುತ್ತಿದ್ದೇವೆ. ನಿಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿರುವುದಕ್ಕೆ ಪುರಾವೆಗಳು ಇಲ್ಲದಿರುವಾಗ ಈ ರೀತಿ ಹೇಳಿಕೆಗಳು ಕೊಡುವುದು ಸರಿಯಲ್ಲ. ಚುನಾವಣಾ ಮಾರ್ಗಸೂಚಿಗಳಿರುವುದು ಏತಕ್ಕೆ ಎಂದು ಪ್ರಶ್ನಿಸಿದೆ. ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ ಮತ್ತು ಪುರಸಭೆಗಳಿಗೆ ಚುನಾವಣೆ ನಡೆದಾಗ ನಿರ್ಧಿಷ್ಟ ರಾಜಕೀಯ ಪಕ್ಷದ ಹಿನ್ನೆಲೆಯಲ್ಲಿ ಸ್ಪರ್ಧೆ ಮಾಡಿರುತ್ತಾರೆ.

ಆದರೆ ಇದು ಪಕ್ಷ ರಹಿತ ಚುನಾವಣೆ ಎಂದು ಹೇಳಿದ್ದರೂ ನಮ್ಮ ಪಕ್ಷ ಗೆದ್ದಿದೆ, ಅವರು ಸೋತಿದ್ದಾರೆ, ಮತ್ತೊಬ್ಬರಿಗೆ, ಹಿನ್ನಡೆ, ನಮ್ಮದು ಮುನ್ನಡೆ ಎಂದು ಬಿಂಬಿಸುವುದು ಯಾವುದೇ ರಾಜಕೀಯ ಪಕ್ಷಗಳಿಗೆ ಶೋಭೆಯಲ್ಲ. ಚುನಾವಣಾ ಆಯೋಗ ಹೊರಡಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಮನವಿ ಮಾಡಿದೆ. ನಿನ್ನೆ ಗ್ರಾಪಂ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪಕ್ಷದ ಬೆಂಬಲಿತ ಶೇ.60ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಹೇಳಿಕೊಂಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿಗಿಂತ ಕಾಂಗ್ರೆಸ್ ಶೇ.65ರಷ್ಟು ಗೆದ್ದಿದೆ ಎಂದು ಹೇಳಿದ್ದರು. ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದ ಜೆಡಿಎಸ್ ನಮ್ಮ ಪಕ್ಷವೂ ಕೂಡ ನಿರೀಕ್ಷೆಗಿಂತ ಹೆಚ್ಚಿನ ಫಲಿತಾಂಶ ಬಂದಿದೆ ಎಂದು ಹೇಳಿತ್ತು. ಹೀಗೆ ರಾಜಕೀಯ ಪಕ್ಷಗಳು ಸೋಲುಗೆಲುವು, ಲಾಭನಷ್ಟದ ಲೆಕ್ಕಾಚಾರ ಹಾಕುತ್ತಿರುವುದಕ್ಕೆ ಆಯೋಗ ಅಸಮಾಧಾನ ಹೊರಹಾಕಿದೆ.

 ತುರ್ತು ಬಳಕೆಗೆ WHO ಮಾನ್ಯತೆ ಪಡೆದ ಮೊದಲ ಕೊರೋನಾ ಲಸಿಕೆ ಫೈಜರ್-ಬಯೋಎನ್ ಟೆಕ್

ತುರ್ತು ಬಳಕೆಗೆ WHO ಮಾನ್ಯತೆ ಪಡೆದ ಮೊದಲ ಕೊರೋನಾ ಲಸಿಕೆ ಫೈಜರ್-ಬಯೋಎನ್ ಟೆಕ್


ತುರ್ತು ಬಳಕೆಗೆ WHO ಮಾನ್ಯತೆ ಪಡೆದ ಮೊದಲ ಕೊರೋನಾ ಲಸಿಕೆ ಫೈಜರ್-ಬಯೋಎನ್ ಟೆಕ್


ಲಂಡನ್ : ಫೈಜರ್-ಬಯೋಎನ್ ಟೆಕ್ ಕೋವಿಡ್-19 ಲಸಿಕೆಯು ಕೊರೋನಾ ವೈರಸ್ ಆರಂಭವಾದ ನಂತರ ತುರ್ತು ಬಳಕೆಗೆ WHO ಮಾನ್ಯತೆಯನ್ನು ಪಡೆದ ಮೊದಲ ಲಸಿಕೆಯಾಗಿದೆ.

ಫಿಜರ್-ಬಯೋಎನ್ ಟೆಕ್ ಕೋವಿಡ್-19 ಲಸಿಕೆಯ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟವನ್ನು ಮೆರಿಡಿಯನ್ನರೊ೦ದಿಗೆ ಜಾಗತಿಕ ಮಟ್ಟದ ನಿಯಂತ್ರಕ ತಜ್ಞರು ಪರಿಶೀಲಿಸಿದರು. ಲಸಿಕೆಯು ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸಂಭಾವ್ಯ ಅಪಾಯಗಳನ್ನು ಎದುರಿಸಲು ಅದನ್ನು ಬಳಸುವುದರಿಂದ ಆಗುವ ಪ್ರಯೋಜನಗಳನ್ನು ಪೂರೈಸಿತು ಎಂದು ವಿಶ್ವಸಂಸ್ಥೆ ಕಂಡುಕೊಂಡಿದೆ.

ಫೈಜರ್ ಲಸಿಕೆಯನ್ನು -60°C ನಿಂದ -90°C ವರೆಗೆ ಶೇಖರಿಸಬೇಕಾಗಿರುವುದರಿಂದ, ಅಲ್ಟ್ರಾ-ಕೋಲ್ಡ್ ಚೈನ್ ಸಲಕರಣೆಗಳು ಲಭ್ಯವಿಲ್ಲದ ಸೆಟ್ಟಿಂಗ್ ಗಳಲ್ಲಿ ನಿಯೋಜಿಸುವುದು ಹೆಚ್ಚು ಸವಾಲಿನ ಕೆಲಸವಾಗಿದೆ.


 ಹವಾಮಾನ ಇಲಾಖೆಯಿಂದ ವಿಶೇಷ ಸೂಚನೆ : ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಹವಾಮಾನ ಇಲಾಖೆಯಿಂದ ವಿಶೇಷ ಸೂಚನೆ : ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ


ಹವಾಮಾನ ಇಲಾಖೆಯಿಂದ ವಿಶೇಷ ಸೂಚನೆ : ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ, ಹಾಸನ, ತುಮಕೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.




 3 ಲಕ್ಷ ಮೌಲ್ಯದ ಸ್ಫೋಟಕ ಜಪ್ತಿ; ಆರೋಪಿ ಬಂಧನ

3 ಲಕ್ಷ ಮೌಲ್ಯದ ಸ್ಫೋಟಕ ಜಪ್ತಿ; ಆರೋಪಿ ಬಂಧನ


3 ಲಕ್ಷ ಮೌಲ್ಯದ ಸ್ಫೋಟಕ ಜಪ್ತಿ; ಆರೋಪಿ ಬಂಧನ


ಬೆಂಗಳೂರು: ಅಪಾಯಕಾರಿ ಸ್ಫೋಟಕಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಶಿವಕುಮಾರ್ (35) ಎಂಬುವರನ್ನು ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು ಬಂಧಿಸಿದ್ದಾರೆ.


'ಚಿಂತಾಮಣಿ ತಾಲ್ಲೂಕಿನ ಕೈವಾರ ಬಳಿಯ ಸಂತೆಕಲ್ಲಹಳ್ಳಿ ನಿವಾಸಿಯಾದ ಶಿವಕುಮಾರ್, ಬೆಂಗಳೂರು ಕೆ.ಆರ್.ಪುರ ಬಳಿಯ ಭಟ್ಟರಹಳ್ಳಿ ಸಮೀಪದಲ್ಲಿ ನಿಂತುಕೊಂಡು ಸ್ಪೋಟಕ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಅವರನ್ನು ಸೆರೆ ಹಿಡಿಯಲಾಗಿದೆ' ಎಂದು ಐಎಸ್‌ಡಿ ಮೂಲಗಳು ತಿಳಿಸಿವೆ.


'ಆರೋಪಿ ಬಳಿ ₹3 ಲಕ್ಷ ಮೌಲ್ಯದ ಸ್ಫೋಟಕ ಸಿಕ್ಕಿದೆ. ಹೆಚ್ಚಿನ ಹಣ ಸಂಪಾದನೆಗಾಗಿ ಆರೋಪಿ, ಅಕ್ರಮವಾಗಿ ಸ್ಫೋಟಕ ಮಾರುತ್ತಿದ್ದರು. ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ನಡೆಸುತ್ತಿದ್ದ ಕೆಲವರು, ಇವರ ಬಳಿ ಸ್ಫೋಟಕ ಖರೀದಿ ಮಾಡುತ್ತಿದ್ದ ಮಾಹಿತಿ ಇದೆ. ಹಲವರು ಆರೋಪಿ ಬಳಿ ಸ್ಫೋಟಕ ಖರೀದಿದ್ದ ಸಂಗತಿ ಗೊತ್ತಾಗಿದೆ. ಅವರ ಉದ್ದೇಶವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ' ಎಂದೂ ಮೂಲಗಳು ಹೇಳಿವೆ.


ಮನೆಯಲ್ಲೇ ಸ್ಫೋಟಕ ಸಂಗ್ರಹ: 'ಭಟ್ಟರಹಳ್ಳಿ ಬಳಿ ಸಿಕ್ಕಿಬಿದ್ದಿದ್ದ ಆರೋಪಿ ಶಿವಕುಮಾರ್ ಬಳಿ 40 ಜೆಲಿಟಿನ್ ಕಡ್ಡಿ, 100 ಡಿಟೊನೇಟರ್ ಪತ್ತೆಯಾಗಿತ್ತು. ಹೆಚ್ಚಿನ ವಿಚಾರಣೆ ನಡೆಸಿದಾಗ, ಮನೆಯಲ್ಲಿ ಸ್ಫೋಟಕ ಸಂಗ್ರಹಿಸಿರುವುದಾಗಿ ಆರೋಪಿ ಹೇಳಿದ್ದರು. ಮನೆಗೆ ಹೋಗಿ ನೋಡಿದಾಗ ಮತ್ತಷ್ಟು ಸ್ಫೋಟಕ ಲಭ್ಯವಾಯಿತು' ಎಂದು ಐಎಸ್‌ಡಿ ಮೂಲಗಳು ತಿಳಿಸಿವೆ.


'25 ಚೀಲ ಅಮೋನಿಯಂ ನೈಟ್ರೇಟ್, 1,710 ಜೆಲಿಟಿನ್ ಕಡ್ಡಿಗಳು, 3,000 ಡಿಟೊನೇಟರ್, 150 ಸೇಫ್ಟಿ ಪ್ಯೂಸ್ ಮತ್ತು ಬ್ಲಾಕ್ ಪೌಡರ್ ಹಾಗೂ 50 ಸಣ್ಣ ಗಾತ್ರದ ತಂತಿಗಳು ಮನೆಯಲ್ಲಿ ಸಿಕ್ಕಿವೆ. ಸ್ಫೋಟಕಗಳ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದೂ ಮೂಲಗಳು ಹೇಳಿವೆ.


 ಬಿಜೆಪಿಗೆ ಪಕ್ಷದ ಶಾಸಕನಿಂದಲೇ ಬಿಗ್ ಶಾಕ್.! ಕೃಷಿ ಕಾಯ್ದೆಗೆ ವಿರೋಧ

ಬಿಜೆಪಿಗೆ ಪಕ್ಷದ ಶಾಸಕನಿಂದಲೇ ಬಿಗ್ ಶಾಕ್.! ಕೃಷಿ ಕಾಯ್ದೆಗೆ ವಿರೋಧ


ಬಿಜೆಪಿಗೆ ಪಕ್ಷದ ಶಾಸಕನಿಂದಲೇ ಬಿಗ್ ಶಾಕ್.! ಕೃಷಿ ಕಾಯ್ದೆಗೆ ವಿರೋಧ


ತಿರುವನಂತಪುರಂ: ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ಹೋರಾಟ ಕೈಗೊಂಡಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಲಾಗಿದ್ದು, ಬಿಜೆಪಿ ಶಾಸಕ ಕೂಡ ಸರ್ಕಾರದ ಗೊತ್ತುವಳಿಗೆ ಬೆಂಬಲ ಸೂಚಿಸಿದ್ದಾರೆ.

ಆಡಳಿತಾರೂಢ ಎಲ್.ಡಿ.ಎಫ್. ಮತ್ತು ವಿರೋಧ ಪಕ್ಷ ಯುಡಿಎಫ್ ಸದಸ್ಯರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ. ಇದಕ್ಕೆ ಕೇರಳ ಬಿಜೆಪಿಯ ಏಕೈಕ ಶಾಸಕ ರಾಜಗೋಪಾಲ್ ಅವರು ಕೂಡ ಬೆಂಬಲ ನೀಡಿದ್ದಾರೆ.

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಗೋಪಾಲ್ ಅವರು, ರೈತರಿಗೆ ವಿರುದ್ಧವಾಗಿರುವ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು ಎನ್ನುವ ಸರ್ಕಾರದ ಗೊತ್ತುವಳಿಯನ್ನು ಬೆಂಬಲಿಸುತ್ತೇನೆ. ಗೊತ್ತುವಳಿಯ ಕೆಲವು ಅಂಶಗಳಿಗೆ ನಾನು ವಿರುದ್ಧವಾಗಿದ್ದರೂ ಬೆಂಬಲ ನೀಡಿರುವುದು ಪ್ರಜಾಸತ್ತಾತ್ಮಕ ಮನೋಭಾವದ ಸಂಕೇತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಮ್ಮತದ ಅಭಿಪ್ರಾಯದ ಅನುಸಾರ ಹೋಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


 ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವರ್ಗಾವಣೆ

ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವರ್ಗಾವಣೆ


ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವರ್ಗಾವಣೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅವರಿಗೆ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಶಶಿ ಕುಮಾರ್ ಅವರನ್ನು ನಿಯುಕ್ತಿಗೊಳಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.

2020ರ ಜುಲೈ 29ಕ್ಕೆ ಮಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದ ವಿಕಾಸ್ ಕುಮಾರ್ ಅವರಿಗೆ ಕೇವಲ 6 ತಿಂಗಳಲ್ಲಿ ವರ್ಗಾವಣೆ ಆಗಿದೆ. ವಿಕಾಸ್ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ನಿಯುಕ್ತಿಗೊಳಿಸಲಾಗಿದೆ.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಆಗಿದ್ದ ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಬಂದಾರು ಅವರನ್ನು ಭಟ್ಕಳ ಉಪವಿಭಾಗದ ಎಎಸ್ಪಿ ಆಗಿ ನಿಯುಕ್ತಿಗೊಳಿಸಲಾಗಿದೆ.


  ಸರ್ಕಾರಿ ಆಸ್ಪತ್ರೆಗಳಿಗೆ 36,433 ವೆಂಟಿಲೇಟರ್‌ ಪೂರೈಕೆ: ಕೇಂದ್ರ ಆರೋಗ್ಯ ಸಚಿವಾಲಯ

ಸರ್ಕಾರಿ ಆಸ್ಪತ್ರೆಗಳಿಗೆ 36,433 ವೆಂಟಿಲೇಟರ್‌ ಪೂರೈಕೆ: ಕೇಂದ್ರ ಆರೋಗ್ಯ ಸಚಿವಾಲಯ


ಸರ್ಕಾರಿ ಆಸ್ಪತ್ರೆಗಳಿಗೆ 36,433 ವೆಂಟಿಲೇಟರ್‌ ಪೂರೈಕೆ: ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ, ಡಿಸೆಂಬರ್ 31: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಜೊತೆಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ದೇಶದ ಸರ್ಕಾರಿ ಆಸ್ಪತ್ರೆಗಳಿಗೆ 36,433 ವೆಂಟಿಲೇಟರ್‌ಗಳನ್ನು ತಲುಪಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಈ ವೆಂಟಿಲೇಟರ್‌ಗಳ ದೇಶಿಯ ಉದ್ಯಮಗಳಲ್ಲಿನ ತಯಾರಿಕೆಯಿಂದಾಗಿ ಈಗ ಸರಾಸರಿ ವೆಚ್ಚವು 2-10 ಲಕ್ಷ ರೂ. ತಲುಪಿದೆ ಎನ್ನಲಾಗಿದೆ. ಕೋವಿಡ್ ಪೂರ್ವದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 16,000 ವೆಂಟಿಲೇಟರ್‌ಗಳನ್ನು ಮಾತ್ರ ಹೊಂದಿವೆ ಎಂದು ಸಚಿವಾಲಯವು ತಿಳಿಸಿದೆ.

ಆದರೆ 12 ತಿಂಗಳೊಳಗೆ 36,433 'ಮೇಕ್ ಇನ್ ಇಂಡಿಯಾ' ವೆಂಟಿಲೇಟರ್‌ಗಳನ್ನು ಎಲ್ಲಾ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಸರಬರಾಜು ಮಾಡಲಾಗಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
ಜೊತೆಗೆ ವೆಂಟಿಲೇಟರ್‌ಗಳ ಮೇಲಿನ ಎಲ್ಲಾ ರಫ್ತು ನಿರ್ಬಂಧಗಳನ್ನು ಈಗ ತೆಗೆದುಹಾಕಲಾಗಿದೆ ಮತ್ತು 'ಮೇಕ್ ಇನ್ ಇಂಡಿಯಾ' ವೆಂಟಿಲೇಟರ್‌ಗಳನ್ನು ರಫ್ತು ಮಾಡಲಾಗುತ್ತಿದೆ. ಈ ವರ್ಷ ದೇಶದ ವೈದ್ಯಕೀಯ ಸರಬರಾಜು ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.

ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ವಿಷಯದಲ್ಲಿ ಭಾರತವು ಇದೀಗ ವಿಶ್ವದಲ್ಲೇ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ. ದಿನಕ್ಕೆ 10 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದನ್ನು ಹಲವಾರು ದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

 ಸರ್ಕಾರಿ ಆಸ್ಪತ್ರೆಗಳಿಗೆ 36,433 ವೆಂಟಿಲೇಟರ್‌ ಪೂರೈಕೆ: ಕೇಂದ್ರ ಆರೋಗ್ಯ ಸಚಿವಾಲಯ

ಸರ್ಕಾರಿ ಆಸ್ಪತ್ರೆಗಳಿಗೆ 36,433 ವೆಂಟಿಲೇಟರ್‌ ಪೂರೈಕೆ: ಕೇಂದ್ರ ಆರೋಗ್ಯ ಸಚಿವಾಲಯ


ಸರ್ಕಾರಿ ಆಸ್ಪತ್ರೆಗಳಿಗೆ 36,433 ವೆಂಟಿಲೇಟರ್‌ ಪೂರೈಕೆ: ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ, ಡಿಸೆಂಬರ್ 31: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಜೊತೆಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ದೇಶದ ಸರ್ಕಾರಿ ಆಸ್ಪತ್ರೆಗಳಿಗೆ 36,433 ವೆಂಟಿಲೇಟರ್‌ಗಳನ್ನು ತಲುಪಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಈ ವೆಂಟಿಲೇಟರ್‌ಗಳ ದೇಶಿಯ ಉದ್ಯಮಗಳಲ್ಲಿನ ತಯಾರಿಕೆಯಿಂದಾಗಿ ಈಗ ಸರಾಸರಿ ವೆಚ್ಚವು 2-10 ಲಕ್ಷ ರೂ. ತಲುಪಿದೆ ಎನ್ನಲಾಗಿದೆ. ಕೋವಿಡ್ ಪೂರ್ವದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 16,000 ವೆಂಟಿಲೇಟರ್‌ಗಳನ್ನು ಮಾತ್ರ ಹೊಂದಿವೆ ಎಂದು ಸಚಿವಾಲಯವು ತಿಳಿಸಿದೆ.

ಆದರೆ 12 ತಿಂಗಳೊಳಗೆ 36,433 'ಮೇಕ್ ಇನ್ ಇಂಡಿಯಾ' ವೆಂಟಿಲೇಟರ್‌ಗಳನ್ನು ಎಲ್ಲಾ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಸರಬರಾಜು ಮಾಡಲಾಗಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ಜೊತೆಗೆ ವೆಂಟಿಲೇಟರ್‌ಗಳ ಮೇಲಿನ ಎಲ್ಲಾ ರಫ್ತು ನಿರ್ಬಂಧಗಳನ್ನು ಈಗ ತೆಗೆದುಹಾಕಲಾಗಿದೆ ಮತ್ತು 'ಮೇಕ್ ಇನ್ ಇಂಡಿಯಾ' ವೆಂಟಿಲೇಟರ್‌ಗಳನ್ನು ರಫ್ತು ಮಾಡಲಾಗುತ್ತಿದೆ. ಈ ವರ್ಷ ದೇಶದ ವೈದ್ಯಕೀಯ ಸರಬರಾಜು ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.

ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ವಿಷಯದಲ್ಲಿ ಭಾರತವು ಇದೀಗ ವಿಶ್ವದಲ್ಲೇ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ. ದಿನಕ್ಕೆ 10 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದನ್ನು ಹಲವಾರು ದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.


 ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್ ಗೆಲುವು: ತಾಕತ್ತಿದ್ದರೆ ಬಿಜೆಪಿ ವಿಧಾನಸಭೆ ವಿಸರ್ಜಿಸಲಿ- ಸಿದ್ದರಾಮಯ್ಯ

ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್ ಗೆಲುವು: ತಾಕತ್ತಿದ್ದರೆ ಬಿಜೆಪಿ ವಿಧಾನಸಭೆ ವಿಸರ್ಜಿಸಲಿ- ಸಿದ್ದರಾಮಯ್ಯ


ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್ ಗೆಲುವು: ತಾಕತ್ತಿದ್ದರೆ ಬಿಜೆಪಿ ವಿಧಾನಸಭೆ ವಿಸರ್ಜಿಸಲಿ- ಸಿದ್ದರಾಮಯ್ಯ

ಬೆಂಗಳೂರು: ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದಾಗಿ ಹೇಳಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಆಡಳಿತಾರೂಢ ಬಿಜೆಪಿ ವಿಧಾನಸಭೆಯನ್ನು ವಿಸರ್ಜಿಸಿ, ಚುನಾವಣೆಯನ್ನು ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹೆಚ್ಚಿನ ಕಾಲ ಇರಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ, ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯಡಿಯೂರಪ್ಪ ಹಗಲು ಗನಸು ಕಾಣುತ್ತಿದ್ದಾರೆ. ಒಂದು ವೇಳೆ ನಾಳೆಯೇ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಗೆಲುವು ಸಾಧಿಸಿ, ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿರುವುದಾಗಿ ಹಲವು ಬಾರಿ ಹೇಳಿಕೆ ನೀಡಿದ್ದೇನೆ. ತನ್ನ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇಕಡಾ 60 ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿರುವುದಾಗಿ ಮುಖ್ಯಮಂತ್ರಿ ಹೇಳಿಕೊಳ್ಳುತ್ತಿದ್ದಾರೆ, ಲಭ್ಯವಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಸುಮಾರು 3,800 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದಾಗಿ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಆದರೆ, ಈ ಚುನಾವಣೆಯಲ್ಲಿ ಅನೇಕ ಕಡೆಗಳಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇರಲಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕ ಕಡೆಗಳಲ್ಲಿ ಗೆಲುವು ಸಾಧಿಸಿದೆ ಎಂದು ವಿಪಕ್ಷ ನಾಯಕ ನುಡಿದರು.

ಯುಡಿಯೂರಪ್ಪ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದ್ದು, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಆಡಳಿತ ವ್ಯವಸ್ಥೆ ಕುಸಿದಿದೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.


ಮೇ 4ರಿಂದ ಜೂನ್ 10ರವರೆಗೆ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ; ಜುಲೈ 15ಕ್ಕೆ ಫಲಿತಾಂಶ: ಕೇಂದ್ರ ಶಿಕ್ಷಣ ಸಚಿವಾಲಯ

ಮೇ 4ರಿಂದ ಜೂನ್ 10ರವರೆಗೆ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ; ಜುಲೈ 15ಕ್ಕೆ ಫಲಿತಾಂಶ: ಕೇಂದ್ರ ಶಿಕ್ಷಣ ಸಚಿವಾಲಯ


ಮೇ 4ರಿಂದ ಜೂನ್ 10ರವರೆಗೆ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ; ಜುಲೈ 15ಕ್ಕೆ ಫಲಿತಾಂಶ: ಕೇಂದ್ರ ಶಿಕ್ಷಣ ಸಚಿವಾಲಯ

ನವದೆಹಲಿ: ಸಿಬಿಎಸ್‌ಇ ಬೋರ್ಡ್‌ನ 10ನೇ ಮತ್ತು 12ನೇ ತರಗತಿ ಪರೀಕ್ಷೆಗಳು 2021ರ ಮೇ 4ರಿಂದ ಆರಂಭವಾಗಿಲಿದ್ದು ಜೂನ್‌ 10ರ ವರೆಗೂ ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಹೇಳಿದ್ದಾರೆ.

ಗುರುವಾರ ಮಾತನಾಡಿದ ಅವರು, ಜೂನ್‌ 10ರ ವರೆಗೂ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗಳ ಫಲಿತಾಂಶ ಜುಲೈ 15ರಂದು ಪ್ರಕಟವಾಗಲಿದೆ. ಶಾಲೆಗಳು ಹತ್ತು ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಯೋಗ, ಪ್ರಾಜೆಕ್ಟ್‌ ಹಾಗೂ ಇಂಟರ್‌ನಲ್‌ ಅಸೆಸ್ಮೆಂಟ್‌ಗಳನ್ನು ಮಾರ್ಚ್‌ 1ರಿಂದ ನಡೆಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಸಿಬಿಎಸ್‌ಇ ಶೀಘ್ರದಲ್ಲಿಯೇ ಹೊರಡಿಸಲಿದೆ ಎಂದು ಹೇಳಿದರು.

ದೇಶದಲ್ಲಿ ಕೊರೊನಾ ವೈರಸ್ ಸ್ಫೋಟವಾದ ಹಿನ್ನೆಲೆಯಲ್ಲಿ, ಶಿಕ್ಷಣ ಸಚಿವಾಲಯ ಈ ಹಿಂದೆ ಸಿಬಿಎಸ್ ಇ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿತ್ತು. ಸಾಮಾನ್ಯವಾಗಿ ಜನವರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತವೆ ಮತ್ತು ಪ್ರತಿ ವರ್ಷ ಫೆಬ್ರವರಿತಿಂಗಳಲ್ಲಿ ಸಿದ್ಧಾಂತ ಪರೀಕ್ಷೆಗಳು ಆರಂಭವಾಗಿ ಮಾರ್ಚ್ ನಲ್ಲಿ ಮುಕ್ತಾಯವಾಗುತ್ತವೆ.

ಸಿಬಿಎಸ್ ಇ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಆಫ್ ಲೈನ್ ನಲ್ಲಿ ನಡೆಸಲಾಗುತ್ತದೆ. ದೇಶದಲ್ಲಿ ಕೋವಿಡ್‌-19 ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಪಠ್ಯಕ್ರಮವನ್ನ ಸಹ ಕಡಿಮೆ ಮಾಡಲಾಗಿದೆ. ವೈರಸ್ ಹರಡುವಿಕೆಯನ್ನ ಕಡಿಮೆ ಮಾಡಲು ಮಾರ್ಚ್ ನಿಂದ ಭಾರತದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

ಇನ್ನು ಈಗಾಗಲೇ ಕೆಲ ಶಾಲೆಗಳು ಸಿಬಿಎಸ್‌ಇ ಬೋರ್ಡ್ ಪೂರ್ವಭಾವಿ ಸಿದ್ಧತಾ ಪರೀಕ್ಷೆಗಳನ್ನು ಆನ್ ಲೈನ್ ನಲ್ಲಿ ನಡೆಸಿದ್ದು, ಇದರಿಂದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಗೆ ಸಿದ್ಧತೆ ನಡೆಸಲು ನೆರವಾಗಿತ್ತು.


 ಏಷ್ಯಾದ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿದ ಮುಖೇಶ್​ ಅಂಬಾನಿ!

ಏಷ್ಯಾದ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿದ ಮುಖೇಶ್​ ಅಂಬಾನಿ!


 ಏಷ್ಯಾದ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿದ ಮುಖೇಶ್​ ಅಂಬಾನಿ!

ರಿಲಯನ್ಸ್ ಇಂಡಸ್ಟ್ರೀಸ್​ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಏಷ್ಯಾದ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಭಾರತೀಯ ಕೋಟ್ಯಾಧಿಪತಿ​​​ ಮುಖೇಶ್​ ಅಂಬಾನಿಯನ್ನ ಚೀನಾದ ಪ್ರತಿಷ್ಠಿತ ​ ವಾಟರ್​ ಕಂಪನಿ ಮಾಲೀಕ ಜೊಂಗ್​ ಶನ್​ಶಾನ್​ ಹಿಂದಿಕ್ಕಿದ್ದಾರೆ.

ಈ ವರ್ಷ ಲೋನ್ ವೂಲ್ಫ್​ ಖ್ಯಾತಿಯ ಶನ್​ಶಾನ್​ ಆಸ್ತಿಯ ನಿವ್ವಳ ಮೌಲ್ಯವು 70.9 ಶತಕೋಟಿ ಮೌಲ್ಯದಿಂದ 77.8 ಶತಕೋಟಿಗೆ ಏರಿಕೆ ಕಂಡಿದೆ. ಈ ಮೂಲಕ ಶನ್​ಶಾನ್​ ಇಡೀ ವಿಶ್ವದಲ್ಲಿ 11ನೇ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನೂ ಅಲಂಕರಿಸಿದ್ದಾರೆ. ಅಲ್ಲದೆ ಇವರ ಆಸ್ತಿ ಗಳಿಕೆ ಇತಿಹಾಸದಲ್ಲೇ ಅತ್ಯಂತ ವೇಗವಾದ ಸಂಪತ್ತು ಕ್ರೋಢೀಕರಣಗಳಲ್ಲಿ ಒಂದಾಗಿದೆ.

66 ವರ್ಷದ ಶನ್​ಶಾನ್​ ತನ್ನ ಸ್ವಂತ ಉದ್ಯಮ ಆರಂಭಿಸುವ ಮೊದಲು ಪತ್ರಿಕೆ ವರದಿಗಾರ, ಔಷಧ ತಯಾರಕ ಹಾಗೂ ಪಾನೀಯ ಮಾರಾಟದ ಏಜೆಂಟ್​ ಆಗಿ ಕೆಲಸ ಮಾಡಿದ್ದರು. ಶನ್​ಶಾನ್​ ಮಾಲೀಕತ್ವದ ​ ವಾಟರ್​ ಬಾಟಲ್​ ಚೀನಾದ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ರೆಸ್ಟಾರೆಂಟ್​ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಕಂಪನಿಯು ಚಹಾ, ಜ್ಯೂಸ್​ ಹಾಗೂ ರುಚಿ ರುಚಿಯಾದ ವಿಟಮಿನ್​ ಪಾನೀಯಗಳನ್ನೂ ಮಾರಾಟ ಮಾಡುತ್ತೆ. ಬ್ಲೂಮ್​ ಬರ್ಗ್ ಸೂಚ್ಯಂಕ ನೀಡಿರುವ ವರದಿ ಪ್ರಕಾರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಂಪತ್ತು ಹೆಚ್ಚಳ ಮಾಡಿಕೊಂಡ ಮೊದಲ ವ್ಯಕ್ತಿ ಶನ್​ಶಾನ್​ ಎಂದು ಹೇಳಿದೆ.

 ರಸ್ತೆಗಳಿಗೆ ಮುಸ್ಲಿಂ ನಾಯಕರ ಹೆಸರಿಡುವುದಕ್ಕೆ ಅನಂತಕುಮಾರ್ ಹೆಗಡೆ ವಿರೋಧ

ರಸ್ತೆಗಳಿಗೆ ಮುಸ್ಲಿಂ ನಾಯಕರ ಹೆಸರಿಡುವುದಕ್ಕೆ ಅನಂತಕುಮಾರ್ ಹೆಗಡೆ ವಿರೋಧ


 ರಸ್ತೆಗಳಿಗೆ ಮುಸ್ಲಿಂ ನಾಯಕರ ಹೆಸರಿಡುವುದಕ್ಕೆ ಅನಂತಕುಮಾರ್ ಹೆಗಡೆ ವಿರೋಧ

ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನಿಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ -ಬಿಬಿಎಂಪಿ ತೀರ್ಮಾನಕ್ಕೆ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನಿಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ )ತೀರ್ಮಾನಕ್ಕೆ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಸಮಾಜ ಸೇವಕರ ಹೆಸರಿಡಬೇಕೆನ್ನುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈಗ ಸಮಾಜ ಸೇವಕರ ಹೆಸರಿನಲ್ಲಿ ಮುಸ್ಲಿಮರ ಹೆಸರುಗಳನ್ನು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಒಂದು ಕೋಮಿನ ತುಷ್ಟೀಕರಣಕ್ಕೆ ಮುಂದಾಗಲಾಗಿದೆ ಎಂದು ಬಿಬಿಎಂಪಿ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಅನಂತಕುಮಾರ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕಾಗಿ ಹೋರಾಡಿದ ವೀರ ಸೈನಿಕರು, ರಾಷ್ಟ್ರದ ಮಹಾನ್ ವ್ಯಕ್ತಿಗಳ ಹೆಸರನ್ನು ಇಡಬಹುದು. ಆದರೆ, ಮುಸ್ಲಿಮರ ಹೆಸರನ್ನು ಇಡುವುದಕ್ಕೆ ನನ್ನ ತೀವ್ರ ವಿರೋಧವಿದೆ ಎಂದು ಅನಂತಕುಮಾರ ಹೆಗಡೆ ಹೇಳಿದ್ದಾರೆ.

ಒಂದೊಮ್ಮೆ ರಾಜ್ಯದ ಇತರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳೂ ಇದೇ ರೀತಿಯ ನಿರ್ಣಯ ತೆಗೆದುಕೊಂಡಲ್ಲಿ ಪರಿಸ್ಥಿತಿ ಊಹೆಗೂ ನಿಲುಕದಂತಿರುತ್ತದೆ. ಇದು ಕೋಮುಸಾಮರಸ್ಯ ಕೆಡುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅನಂತಕುಮಾರ ಹೆಗಡೆ ಪತ್ರದಲ್ಲಿ ತಿಳಿಸಿದ್ದಾರೆ.

 ರಾಜ್ಯದ ಪಶುಸಂಗೋಪನಾ ಸಚಿವರ ತವರು ಜಿಲ್ಲೆಯಲ್ಲಿ ಪಶುಗಳ ಮಾರಣಹೋಮ!

ರಾಜ್ಯದ ಪಶುಸಂಗೋಪನಾ ಸಚಿವರ ತವರು ಜಿಲ್ಲೆಯಲ್ಲಿ ಪಶುಗಳ ಮಾರಣಹೋಮ!


 ರಾಜ್ಯದ ಪಶುಸಂಗೋಪನಾ ಸಚಿವರ ತವರು ಜಿಲ್ಲೆಯಲ್ಲಿ ಪಶುಗಳ ಮಾರಣಹೋಮ!

ಬೀದರ್: ರಾಜ್ಯದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರ ತವರು ಜಿಲ್ಲೆ ಬೀದರ್​ನಲ್ಲಿ ಇಂದು ಬೆಳಗ್ಗೆ 15 ರಿಂದ 20 ಜರ್ಸಿ ಆಕಳುಗಳ ಶವ ಪತ್ತೆಯಾಗಿದ್ದು, ಅನೇಕ ಸಂದೇಹಗಳನ್ನು ಹುಟ್ಟುಹಾಕಿದೆ. ಬೀದರ್ ತಾಲೂಕಿನ ಸಿಂದೋಲ್ ಗ್ರಾಮದ ಸೇತುವೆಯೊಂದರ ಕೆಳಗೆ ಈ ಶವಗಳು ಪತ್ತೆಯಾಗಿವೆ.

ಆಕಳುಗಳಿಗೆ ಬಹುತೇಕ ವಿಷಪ್ರಾಶನ ಮಾಡಿರಬಹುದು. ಅದಿಲ್ಲದೇ ಹೋದರೆ, ನೆರೆ ರಾಜ್ಯಕ್ಕೆ ಗೋವುಗಳನ್ನು ಸಾಗಿಸುವಾಗ ಮೃತಪಟ್ಟ ಗೋವುಗಳನ್ನು ಇಲ್ಲಿ ಎಸೆದು ಹೋಗಿರಬಹುದು. ಅದೂ ಅಲ್ಲದೇ ಹೋದರೆ ತೆಲಂಗಾಣದಿಂದ ದುಷ್ಕರ್ಮಿಗಳು ಈ ಗೋವುಗಳ ಶವವನ್ನು ಇಲ್ಲಿ ತಂದು ಎಸೆದು ಹೋಗಿದ್ದಿರಲೂ ಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಳ್ಳದಲ್ಲಿ ಹಸುಗಳ ಶವ ಪತ್ತೆಯಾದ ಕಾರಣ ಆ ನೀರು ಬಳಸುವ ಗ್ರಾಮಸ್ಥರಲ್ಲೂ ಆತಂಕ ಸೃಷ್ಟಿಯಾಗಿದೆ. ರೋಗ ಭೀತಿಯೂ ಹರಡಿದೆ. ಸ್ಥಳಕ್ಕೆ ಮನ್ನಳ್ಳಿ ಪೊಲೀಸರು ಭೇಟಿ ನೀಡಿದ್ದು, ಗೋವುಗಳ ಶವ ವಿಲೇವಾರಿಗೆ ಕ್ರಮ ತೆಗೆದುಕೊಂಡು, ತನಿಖೆ ನಡೆಸಿದ್ದಾರೆ.

 ಜಗತ್ತಿನ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿದ್ಧರಾಗಿ: ದೇಶವಾಸಿಗಳಿಗೆ ಪ್ರಧಾನಿ ಕರೆ

ಜಗತ್ತಿನ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿದ್ಧರಾಗಿ: ದೇಶವಾಸಿಗಳಿಗೆ ಪ್ರಧಾನಿ ಕರೆ


 ಜಗತ್ತಿನ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿದ್ಧರಾಗಿ: ದೇಶವಾಸಿಗಳಿಗೆ ಪ್ರಧಾನಿ ಕರೆ

ನವದೆಹಲಿ: ಕಾಲಚಕ್ರದಲ್ಲಿ 2020 ಕಳೆದು ಹೋಗಿ 2021ಕ್ಕೆ ಕಾಲಿರಿಸುತ್ತಿರುವ ಹೊತ್ತಲ್ಲಿ ಜಗತ್ತಿನ ಬೃಹತ್ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿದ್ಧರಾಗಿ. ಯಾವುದೇ ವದಂತಿಗಳಿಗೆ ಕಿವಿಗೊಡದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಅವರು ಇಂದು ಗುಜರಾತಿನ ಏಮ್ಸ್​ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಮುಂದಿನ ವರ್ಷ ನಾವು ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ನಡೆಸುವುದಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ. ಆರೋಗ್ಯವೇ ಸಂಪತ್ತು. 2020ನೇ ಇಸವಿ ಇದನ್ನು ನಮಗೆ ಚೆನ್ನಾಗಿ ಅರ್ಥಮಾಡಿಸಿಕೊಟ್ಟಿತು. ಇದೊಂದು ವರ್ಷ ಪೂರ್ಣ ಸವಾಲಿನದ್ದೇ ವರ್ಷವಾಗಿತ್ತು. ಇವೆಲ್ಲದರ ನಡುವೆ ಜಾಗತಿಕ ಆರೋಗ್ಯದ ಕೇಂದ್ರ ಸ್ಥಾನವಾಗಿ ಭಾರತ ಮುನ್ನೆಲೆಗೆ ಬಂತು. 2021ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭಾರತದ ಪಾತ್ರವನ್ನು ನಾವು ಇನ್ನಷ್ಟು ಬಲಪಡಿಸಬೇಕು. 2020ರಲ್ಲಿ ನಾನು ಹೇಳಿದ್ದೆ - ದವಾಯಿ ನಹಿ ತೋ ಧಿಲಾಯಿ ನಹಿ. ಈಗ ನಾನು ಹೇಳ್ತಾ ಇದ್ದೇನೆ 2021ರ ನಮ್ಮ ಮಂತ್ರ ದವಾಯಿ ಭೀ ಔರ್ ಕಡಾಯಿ ಭೀ.

ನಮ್ಮ ದೇಶದಲ್ಲಿ ವದಂತಿಗಳು ಬಹುಬೇಗನೆ ಹರಡುತ್ತವೆ. ವಿಭಿನ್ನ ಜನರು ತಮ್ಮ ಸ್ವಾರ್ಥಕ್ಕೋಸ್ಕರ ಅಥವಾ ಬೇಜವಾಬ್ದಾರಿ ನಡವಳಿಕೆ ಕಾರಣ ಹಲವಾರು ವದಂತಿಗಳನ್ನು ಹರಡಬಹುದು. ಲಸಿಕಾ ಅಭಿಯಾನ ಶುರುವಾಗುತ್ತಿದ್ದಂತೆ ಇಂತಹ ರೂಮರ್​ಗಳ ಸಂಖ್ಯೆ ಹೆಚ್ಚಾಗಬಹುದು. ಈಗಾಗಲೇ ಕೆಲವು ಹುಟ್ಟಿಕೊಂಡಿವೆ. ದೇಶವಾಸಿಗಳಲ್ಲಿ ನನ್ನ ಮನವಿ ಇಷ್ಟೆ - ಕಣ್ಣಿಗೆ ಕಾಣದ ಶತ್ರುವಾಗಿರುವ ಕೋವಿಡ್ 19 ವಿರುದ್ಧ ನಾವೆಲ್ಲರೂ ಹೋರಾಡೋಣ. ವದಂತಿಗಳನ್ನು ಪರಿಶೀಲಿಸದೆ ನಂಬೋದಕ್ಕೆ ಹೋಗಬೇಡಿ ಮತ್ತು ಫಾರ್ವರ್ಡ್​ ಅಥವಾ ಹರಡುವುದಕ್ಕೂ ಹೋಗಬೇಡಿ. ಅರಿವುಳ್ಳವರಾಗಿ ವರ್ತಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು. 

Wednesday, 30 December 2020

 ಮುಳೂರು, ಮರ್ಕಝ್: 9 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿ ಮತ್ತು ಕಲಿಸಿದ ಉಸ್ತಾದರಿಗೂ ಉಡುಪಿ  ಮುಸ್ಲಿಂ ಜಮಾಅತಿನಿಂದ ಸನ್ಮಾನ ಕಾರ್ಯಕ್ರಮ

ಮುಳೂರು, ಮರ್ಕಝ್: 9 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿ ಮತ್ತು ಕಲಿಸಿದ ಉಸ್ತಾದರಿಗೂ ಉಡುಪಿ ಮುಸ್ಲಿಂ ಜಮಾಅತಿನಿಂದ ಸನ್ಮಾನ ಕಾರ್ಯಕ್ರಮ


 ಮುಳೂರು, ಮರ್ಕಝ್: 9 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿ ಮತ್ತು ಕಲಿಸಿದ ಉಸ್ತಾದರಿಗೂ ಉಡುಪಿ  ಮುಸ್ಲಿಂ ಜಮಾಅತಿನಿಂದ ಸನ್ಮಾನ ಕಾರ್ಯಕ್ರಮ

ಮುಳೂರು,ಮರ್ಕಝ್: ಇತ್ತೀಚೆಗೆ ವಾರ್ತಾ ಮಾಧ್ಯಮಗಳಲ್ಲಿ ಪ್ರಮುಕ ಸುದ್ದಿಯಾದ, ಕೇವಲ 9 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿ ಕೇವಲ 9 ಗಂಟೆಯ ಅವಧಿಯಲ್ಲಿ (ಕುರ್ಆನ್ ನೋಡದೆ ) ಪೂರ್ತಿ ಕುರ್ಆನ್ ಪಠಿಸಿದ 15 ವರ್ಷದ, ಮೂಳೂರಿನ DKSC ಅಧಿನದ ಅಲ್-ಇಹ್ಸಾನ್ ಸುನ್ನೀ ಸೆಂಟರ್ ವಿದ್ಯಾರ್ಥಿ ಮುಹಮ್ಮದ್ ಮುಝ್ಝಮ್ಮಿಲ್ ಬೋಳಿಯಾರ್ ರವರನ್ನು ಹಾಗೂ ತನ್ನ ಗುರು ಹಾಫಿಲ್ ಹಾರಿಸ್ ಸಅದಿ ಉಸ್ತಾದ್ ಕಬಕ ರವರನ್ನು ಕರ್ನಾಟಕ ಮುಸ್ಲಿಂ ಜಮಾಅತ್, ಉಡುಪಿ ಜಿಲ್ಲಾ ಸಮಿತಿಯು ಸಂಸ್ಥೆಗೆ ಬೇಟಿ ನೀಡಿ ಸನ್ಮಾನಿಸಿತು. 

ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ BSF ರಫೀಕ್ ಗಂಗೊಳ್ಳಿ, ಕಾರ್ಯಧ್ಯಕ್ಷ  ಸುಬ್ಹಾನ್ ಅಹ್ಮದ್ ಹೊನ್ನಾಳ, ಜಿಲ್ಲಾ ಸದಸ್ಯರಾದ ಅಬ್ದುಲ್ ಹಮೀದ್ ಅದ್ದು ಹಾಗೂ ಶಾಬಾನ್ ಹಂಗ್ಲೂರು ಸುನ್ನೀ ಸೆಂಟರಿಗೆ ಬೇಟಿ ನೀಡಿ ಹಾಫಿಲ್ ಮುಝಮ್ಮಿಲ್ ಹಾಗೂ ಈ ವಿದ್ಯಾರ್ಥಿಗೆ ಕುರ್ಆನ್ ಕಳಿಸಿದ ಉಸ್ತಾದ್ ಹಾಫಿಲ್ ಹಾರಿಸ್ ಸಅದಿ ಉಸ್ತಾದ್ ಕಬಕ ರವರಿಗೆ ಶಾಲು ಹೊದಿಸಿ ಫಲಕ ನೀಡಿ ಗೌರವಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತಿನ ಉಡುಪಿ ಸಮಿತಿಯ ಜಿಲ್ಲಾಧ್ಯಕ್ಷರಾದ ಜನಾಬ್ BSF ರಫೀಕ್ ಗಂಗೊಳ್ಳಿ ರವರು ಮಾತನಾಡಿ ಇಂತಹ ಪ್ರತಿಭೆಗಳನ್ನು ತಯಾರು ಮಾಡಿ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತಿರುವ ಅಲ್ ಇಹ್ಸಾನ್ ಸುನ್ನೀ ಸೆಂಟರ್ ವಿದ್ಯಾ ಸಂಸ್ಥೆಯನ್ನು ಅಭಿನಂದಿಸಿದರು ಹಾಗೂ ಮುಝಮ್ಮಿಲ್ ಗೆ ಶುಭಹಾರೈಸಿ ಅವರ ಕುಟುಂಬದ ಆರ್ಥಿಕ ತೊಂದರೆಗಳನ್ನು ನಿವಾರಿಸುವಲ್ಲಿ  ಮುಸ್ಲಿಂ ಜಮಾಅತ್ ಆಸರೆಯಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.

ಸಂಸ್ಥೆಯ ಮ್ಯಾನೇಜರ್ UK ಮುಸ್ತಫಾ ಸಅದಿ ಉಸ್ತಾದ್ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ DKSC ಯ ಕಾರ್ಯಕ್ಷೇತ್ರ ಮತ್ತು ಸೇವೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಅಲ್ ಇಹ್ಸಾನ್ ಸುನ್ನೀ ಸೆಂಟರ್ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ,  ಎಜು ಪ್ಲಾನೆಟ್ ಪ್ರಿನ್ಸಿಪಾಲ್ ಸ್ವಾಬಿರ್ ಸಅದಿ, ಸಹಾಯಕ ಮ್ಯಾನೇಜರ್ ಸಿದ್ದೀಕ್ ಸಅದಿ, ಹಿಫುಲ್ ಹಾಗು ದಾವಾ ವಿಭಾಗದ ಉಸ್ತಾದರು, ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಹಾಜರಿದ್ದರು.








 ದೇಸಿ ನಿರ್ಮಿತ ಆಕಾಶ್ ಕ್ಷಿಪಣಿ ರಫ್ತು ಮಾಡಲು ಸಂಪುಟ ಅನುಮೋದನೆ

ದೇಸಿ ನಿರ್ಮಿತ ಆಕಾಶ್ ಕ್ಷಿಪಣಿ ರಫ್ತು ಮಾಡಲು ಸಂಪುಟ ಅನುಮೋದನೆ


ದೇಸಿ ನಿರ್ಮಿತ ಆಕಾಶ್ ಕ್ಷಿಪಣಿ ರಫ್ತು ಮಾಡಲು ಸಂಪುಟ ಅನುಮೋದನೆ

ನವದೆಹಲಿ: ಆತ್ಮ ನಿರ್ಭರ ಭಾರತ್ ಯೋಜನೆ ಅಡಿಯಲ್ಲಿ ದೇಶೀಯ ಆಕಾಶ್ ಕ್ಷಿಪಣಿ ರಫ್ತು ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಇದು 5 ಬಿಲಿಯನ್ ರಕ್ಷಣಾ ರಫ್ತು ಗುರಿಯನ್ನು ಸಾಧಿಸಲು ಮತ್ತು ವಿದೇಶಗಳೊಂದಿಗೆ ಸ್ನೇಹಪರ ಕಾರ್ಯತಂತ್ರದ ಸಂಬಂಧವನ್ನು ಸುಧಾರಿಸಲು ಉದ್ದೇಶಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆತ್ಮ ನಿರ್ಭರ ಭಾರತ್ ಅಡಿಯಲ್ಲಿ, ಭಾರತವು ವಿವಿಧ ರೀತಿಯ ರಕ್ಷಣಾ ವೇದಿಕೆಗಳು ಮತ್ತು ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯದಲ್ಲಿ ಬೆಳೆಯುತ್ತಿದೆ ಎಂದರು.



 3.5 ಡಿಗ್ರಿಗೆ ಕುಸಿದ ದೆಹಲಿಯ ಕನಿಷ್ಠ ತಾಪಮಾನ, ಇಂದು ಮತ್ತಷ್ಟು ಕುಸಿತ ಸಾಧ್ಯತೆ

3.5 ಡಿಗ್ರಿಗೆ ಕುಸಿದ ದೆಹಲಿಯ ಕನಿಷ್ಠ ತಾಪಮಾನ, ಇಂದು ಮತ್ತಷ್ಟು ಕುಸಿತ ಸಾಧ್ಯತೆ


3.5 ಡಿಗ್ರಿಗೆ ಕುಸಿದ ದೆಹಲಿಯ ಕನಿಷ್ಠ ತಾಪಮಾನ, ಇಂದು ಮತ್ತಷ್ಟು ಕುಸಿತ ಸಾಧ್ಯತೆ

ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಮೈಕೊರೆವ ಚಳಿ ಮುಂದುವರೆದಿದೆ. ಬುಧವಾರ ಈ ಋತುಮಾನದ ಅತ್ಯಂತ ಕನಿಷ್ಠ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಗುರುವಾರ ತಾಪಮಾನ ಮತ್ತಷ್ಟು ಕುಸಿಯಲಿದೆ ಎಂದು ಹೇಳಿದೆ.

ನಗರದ ಅಧಿಕೃತ ತಾಪಮಾನ ಪರಿಗಣನೆ ಕೇಂದ್ರ ಎಂದು ಪರಿಗಣಿಸಲಾಗುವ ಸಫ್ದಾರ್ ಜಂಗ್ ವೀಕ್ಷಣಾಲಯದಲ್ಲಿ ಬುಧವಾರ 3.5 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಈ ಋತುಮಾನದ ಸಾಮಾನ್ಯ ತಾಪಮಾನಕ್ಕಿಂತ 3 ಡಿಗ್ರಿ ಕುಸಿದಿದೆ. ಇನ್ನೂ ಗರಿಷ್ಠ ತಾಪಮಾನವು 16.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಋತುಮಾನದ ಸಾಮಾನ್ಯ ತಾಪಮಾನಕ್ಕಿಂತ 4 ಡಿಗ್ರಿ ಕುಸಿದಿದೆ.

ಪಾಲಂ ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನ 5.2 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇಂದು ಮತ್ತಷ್ಟು ಕುಸಿತ: "ಗುರುವಾರ ಗರಿಷ್ಠ ತಾಪಮಾನ 3 ಡಿಗ್ರಿಗಿಂತ ಮತ್ತಷ್ಟು ಕುಸಿಯಲಿದ್ದು, ಶುಕ್ರವಾರ ಏರಿಕೆ ಕಂಡುಬರಲಿದೆ," ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.

ಹೊಸ ವರ್ಷದ ದಿನ ದೆಹಲಿ ತಾಪಮಾನ 5 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಾಣಲಿದ್ದು, ಜನವರಿ 2 ಮ3 ರಂದು ಸರಿ ಸುಮಾರು 7 ಡಿಗ್ರಿ ಸೆಲ್ಸಿಯಸ್‌ಗೆ ಕನಿಷ್ಠ ತಾಪಮಾನ ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.

"ಜನವರಿ 4ರಂದು ಪಶ್ಚಿಮ ಹಿಮಾಲಯಕ್ಕೆ ಪಶ್ಚಿಮ ಮಾರುತಗಳು ಬೀಸುವ ಸಾಧ್ಯತೆ ಇದ್ದು, ದೆಹಲಿಯಲ್ಲೂ ತುಂತುರು ಮಳೆ ಮತ್ತು ಕೆಲವೆಡೆ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ. ಇದರಿಂದಾಗಿ ತಾಪಮಾನದಲ್ಲೂ ಏರಿಕೆ ಆಗಲಿದೆ," ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ದೆಹಲಿಯ ವಾಯುಗುಣಮಟ್ಟವೂ ಅತ್ಯಂತ ಹದಗೆಟ್ಟಿದ್ದು (AQI)290ಕ್ಕೆ ಕುಸಿದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ವಾಯುಗುಣಮಟ್ಟದ ಕನಿಷ್ಠ ಸರಾಸರಿ ಪ್ರಮಾಣ 265 ರಷ್ಟಿದೆ.


 ದೆಹಲಿ ಬೆಂಗಳೂರು ವಿಮಾನದಲ್ಲಿ ಮಗು ಸಾವು, ತುರ್ತು ಭೂಸ್ಪರ್ಶ

ದೆಹಲಿ ಬೆಂಗಳೂರು ವಿಮಾನದಲ್ಲಿ ಮಗು ಸಾವು, ತುರ್ತು ಭೂಸ್ಪರ್ಶ


ದೆಹಲಿ ಬೆಂಗಳೂರು ವಿಮಾನದಲ್ಲಿ ಮಗು ಸಾವು, ತುರ್ತು ಭೂಸ್ಪರ್ಶ

ಇಂದೋರ್, ಡಿಸೆಂಬರ್ 31: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಮಗುವೊಂದು ಮೃತಪಟ್ಟಿರುವ ಘಟನೆ ನಡೆದಿದೆ.

ಇಂದೋರ್‌ನಲ್ಲಿ ಈ ಘಟನೆ ಸಂಭವಿಸಿದೆ, ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ವಿಮಾನದಲ್ಲಿ ಅನಾರೋಗ್ಯಕ್ಕೀಡಾಗಿದ್ದ 7 ತಿಂಗಳ ಶಿಶು ಮಾರ್ಗ ಮಧ್ಯೆಯೇ ಮೃತಪಟ್ಟಿದೆ.

ಇಂದೋರ್ ನ ದೇವಿ ಅಹಿಲಿಬಾಯಿ ಹೊಲ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರೂ ಮಗು ಮಾರ್ಗ ಮಧ್ಯೆಯೇ ಸಾವನ್ನಪ್ಪಿದೆ.

ಮಗುವನ್ನು ಇಂದೋರ್ ನ SAIMS ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಘೋಷಣೆ ಮಾಡಿದರು. ಮೃತ ಮಗುವನ್ನು ಉತ್ತರ ಪ್ರದೇಶ ಗೋರಕ್ ಪುರ ದಂಪತಿ ಮಗು ದೇವ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಮೃತ ಮಗು ಜಲಮಸ್ತಿಷ್ಕ ರೋಗ (Hydrocephalus)ದಿಂದ ಬಳಲುತ್ತಿತ್ತು.

ಮೂಲಗಳ ಪ್ರಕಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಖಾಸಗಿ ವಿಮಾನದಲ್ಲಿ ದಂಪತಿಗಳೊಂದಿಗೆ ಮಗು ಕೂಡ ಪ್ರಯಾಣಿಸುತ್ತಿತ್ತು. ಮಾರ್ಗ ಮಧ್ಯೆಯೇ ಮಗು ಅನಾರೋಗ್ಯಕ್ಕೀಡಾಗಿದ್ದು, ಮಗು ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು.

ಇದನ್ನು ಗಮನಿಸಿದ ಪೋಷಕರು ಕೂಡಲೇ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನದ ಮಾರ್ಗ ಬದಲಿಸಿ ಇಂದೋರ್ ನತ್ತ ತಿರುಗಿಸಿದ್ದಾರೆ. ಇಂದೋರ್ ನ ದೇವಿ ಅಹಿಲಿಬಾಯಿ ಹೊಲ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತಾದರೂ ಅಷ್ಟು ಹೊತ್ತಿಗೆ ಮಗು ಆರೋಗ್ಯ ಪರಿಸ್ಥಿತಿ ತೀವ್ರ ಬಿಗಡಾಯಿಸಿತ್ತು.

ಅಪರೂಪದ ಖಾಯಿಲೆಯಾಗಿದ್ದು, ಮಗುವಿನ ಚಿಕಿತ್ಸೆಗಾಗಿ ಮಗುವಿನ ಪೋಷಕರು ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.


 ಮಗನ ಕೈಯಲ್ಲೇ ಕೊಲೆಯಾದ ನಿವೃತ್ತ ಆರ್ ಬಿಐ ಮ್ಯಾನೇಜರ್!

ಮಗನ ಕೈಯಲ್ಲೇ ಕೊಲೆಯಾದ ನಿವೃತ್ತ ಆರ್ ಬಿಐ ಮ್ಯಾನೇಜರ್!


ಮಗನ ಕೈಯಲ್ಲೇ ಕೊಲೆಯಾದ ನಿವೃತ್ತ ಆರ್ ಬಿಐ ಮ್ಯಾನೇಜರ್!

ಅನೈತಿಕ ಸಂಬಂಧ ಹಾಗೂ ಆಸ್ತಿ ವಿಚಾರವಾಗಿ ಶುರುವಾದ ಜಗಳ ನಿವೃತ್ತ ಆರ್ ಬಿಐ ಮ್ಯಾನೇಜರ್ ಮಗನ ಕೈಯಲ್ಲೇ ಕೊಲೆಯಾಗುವ ಮೂಲಕ ಅಂತ್ಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿವೃತ್ತ ವ್ಯವಸ್ಥಾಪಕ ಅಮರನಾಥ್ ಪುತ್ರ ಮನೋಕ್ ನಿಂದಲೇ ಹತ್ಯೆಗೈಗೊಳಗಾಗಿದ್ದಾರೆ. ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅಮರನಾಥ್ ಪತ್ನಿಗೆ ವಿಚ್ಚೇದನ ನೀಡಿ ಮತ್ತೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರವಾಗಿ ತಂದೆ ಮಗನ ನಡುವೆ ಗಲಾಟೆ ನಡೆದಿದ್ದು, ಮಗ ಚಾಕವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲಿದ್ದ ಅಮರನಾಥ್, ಭಾರತಿ ನಗರದಲ್ಲಿ ಮನೆ ನಿರ್ಮಿಸುತ್ತಿದ್ದರು. ಆಸ್ತಿ ವಿಚಾರವಾಗಿ ತಂದೆ ಮಗನ ನಡುವೆ ನಿನ್ನೆ ರಾತ್ರಿ ಗಲಾಟೆಯಾಗಿದೆ. ಕೆಲಸವಿಲ್ಲದೆ ಮನೆಯಲ್ಲಿದ್ದ ಮನೋಕ್ ಮಾದಕ ವ್ಯಸನಿಯಾಗಿದ್ದ. ಅನೈತಿಕ ಸಂಬಂಧ ಮತ್ತು ಆಸ್ತಿ ವಿಚಾರವಾಗಿ ಗಲಾಟೆಯಾದಾಗ ಮನೋಕ್ ಕೋಪದಿಂದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೋಕ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


 ನಾಳೆಯಿಂದ ಶಾಲೆಗಳಲ್ಲಿ ಮಕ್ಕಳ ಕಲರವ

ನಾಳೆಯಿಂದ ಶಾಲೆಗಳಲ್ಲಿ ಮಕ್ಕಳ ಕಲರವ


ನಾಳೆಯಿಂದ ಶಾಲೆಗಳಲ್ಲಿ ಮಕ್ಕಳ ಕಲರವ

ಬೆಂಗಳೂರು: ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿ ಮುಚ್ಚಿದ್ದ ಶಾಲೆ- ಕಾಲೇಜು ತರಗತಿಗಳು ಹೊಸ ವರ್ಷದ ಮೊದಲ ದಿನ ಮತ್ತೆ ತೆರೆಯಲಿವೆ. ಸುಮಾರು 10 ತಿಂಗಳ ಅನಂತರ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತರಗತಿಗಳಿಗೆ ಮರಳಲಿದ್ದಾರೆ. 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವೂ ಆರಂಭವಾಗಲಿದೆ.

ಮಕ್ಕಳು ಮರಳಿ ತರಗತಿಗೆ ಬರುವ ದಿನವನ್ನು ಉತ್ಸವದಂತೆ ಆಚರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಸರಳ ಆಚರಣೆ ನಡೆಸುವಂತೆ ಇಲಾಖೆಯಿಂದ ಸೂಚಿಸಲಾಗಿದೆ. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಶಾಲೆಗೆ ಬೇಗ ಬರಲಿದ್ದಾರೆ. ಕೆಲವು ಶಾಲೆಗಳಲ್ಲಿ ತಳಿರು ತೋರಣದ ವ್ಯವಸ್ಥೆ ಮಾಡಲಾಗಿದೆ.

ಶಿಕ್ಷಣ ಇಲಾಖೆ ಆಡಳಿತಾತ್ಮಕ ಮತ್ತು ಶೈಕ್ಷಣಿಕವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲ್ಲ ಶಾಲೆಗಳಲ್ಲಿ ಸ್ವತ್ಛತೆಯ ಕಾರ್ಯ ಭರದಿಂದ ಸಾಗುತ್ತಿದೆ. ಶೌಚಾಲಯದ ಶುಚಿತ್ವ, ಶುದ್ಧ ಕುಡಿಯುವ ನೀರು, ಪೀಠೊಪಕರಣ ಸರಿಪಡಿಸುವುದು, ಶಾಲಾವರಣ ಮತ್ತು ತರಗತಿ ಕೊಠಡಿಗಳ ಸ್ಯಾನಿಟೈಸೇಶನ್‌, ನಿತ್ಯ ಸ್ಕ್ರೀನಿಂಗ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ, ಸೂಚನ ಫ‌ಲಕ, ಐಸೊಲೇಶನ್‌ ಕೊಠಡಿ ಸಹಿತ ಎಲ್ಲ ಸಿದ್ಧತೆ ಮಾಡಲಾಗಿದೆ.

ಮೊದಲ ದಿನ ಜಾಗೃತಿ

ಮೊದಲ ದಿನ ಪಠ್ಯ ಬೋಧನೆ ಕಡಿಮೆ ಇರುತ್ತದೆ. ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳ ಮಹತ್ವ ಮತ್ತು ಈ ಎರಡು ವಾರ್ಷಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣ ರಾಗುವುದು ಮತ್ತು ಅದರಿಂದಾಗುವ ಲಾಭದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಶೌಚಾಲಯದ ಶುಚಿತ್ವ, ಶುದ್ಧ ಕುಡಿಯುವ ನೀರು, ಪೀಠೊಪಕರಣ ಸರಿಪಡಿಸುವುದು, ಶಾಲಾವರಣ ಮತ್ತು ತರಗತಿ ಕೊಠಡಿಗಳ ಸ್ಯಾನಿಟೈಸೇಶನ್‌, ನಿತ್ಯ ಸ್ಕ್ರೀನಿಂಗ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ, ಸೂಚನ ಫ‌ಲಕ, ಐಸೊಲೇಶನ್‌ ಕೊಠಡಿ ಸಹಿತ ಎಲ್ಲ ಸಿದ್ಧತೆ ಮಾಡಲಾಗಿದೆ.

ಮೊದಲ ದಿನ ಜಾಗೃತಿ

ಮೊದಲ ದಿನ ಪಠ್ಯ ಬೋಧನೆ ಕಡಿಮೆ ಇರುತ್ತದೆ. ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳ ಮಹತ್ವ ಮತ್ತು ಈ ಎರಡು ವಾರ್ಷಿಕ ಪರೀಕ್ಷೆಗಳನ್ನು

ಯಶಸ್ವಿಯಾಗಿ ಎದುರಿಸಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣ ರಾಗುವುದು ಮತ್ತು ಅದರಿಂದಾಗುವ ಲಾಭದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ವಿದ್ಯಾರ್ಥಿಗಳು ಏನು ಮಾಡಬೇಕು?

– ಪಾಲಕರ ಅನುಮತಿ ಪತ್ರ ಕಡ್ಡಾಯ.

– ಪ್ರತೀ ದಿನ ಬೆಳಗ್ಗೆ ಮಾತ್ರ ತರಗತಿ.

– ಮನೆಯಿಂದ ಮಾಸ್ಕ್ ಧರಿಸಿ ಬರಬೇಕು.

– ಶಾಲಾವರಣದಲ್ಲಿ ಸಾಮಾಜಿಕ ಅಂತರ ಇರಲಿ.

– ಮಾಸ್ಕ್ ಬದಲಾಯಿಸಿಕೊಳ್ಳಬಾರದು.

– ಬಿಸಿಯೂಟ ಇರುವುದಿಲ್ಲ.

– ಮನೆಯಿಂದಲೇ ಬಿಸಿನೀರು ತಂದರೆ ಉತ್ತಮ.

– ವಿದ್ಯಾಗಮ ತರಗತಿ ವಾರಕ್ಕೆ 3 ದಿನ ಮಾತ್ರ.

– ಮಾರ್ಗದರ್ಶಿ ಶಿಕ್ಷಕರ ಸಂಪರ್ಕದಲ್ಲಿರಬೇಕು.


ಪಾಲಕರ ಜವಾಬ್ದಾರಿ

– ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಇದೆಯೇ ಎಂದು ಪರಿಶೀಲಿಸಬೇಕು.

– ಮಾಸ್ಕ್ ಹಾಕಿಸಿ ಕಳುಹಿಸಬೇಕು.

– ನಿತ್ಯದ ಪಾಠಕ್ಕೆ ಅಗತ್ಯವಿರುವಷ್ಟೇ ಪುಸ್ತಕ ಕಳುಹಿಸಿ.

– ವೈಯಕ್ತಿಕ ಶುಚಿತ್ವದ ಬಗ್ಗೆ ಮಾಹಿತಿ ನೀಡಬೇಕು.


ಶಿಕ್ಷಕರು ಏನೇನು ಮಾಡಬೇಕು?

– ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

– ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

– ಸೋಂಕು ಲಕ್ಷಣವಿದ್ದರೆ ರಜೆ ಪಡೆಯಬೇಕು.

– ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯ.

– ಮಕ್ಕಳಿಂದ ಪಾಲಕರ ಲಿಖೀತ ಹೇಳಿಕೆ ಪಡೆಯಬೇಕು.

– ಮಾಸ್ಕ್ ಇಲ್ಲದ ವಿದ್ಯಾರ್ಥಿಗಳಿಗೆ ಮಾಸ್ಕ್ ವ್ಯವಸ್ಥೆ ಮಾಡಬೇಕು.

– ಮಕ್ಕಳಿಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ನೀಡುತ್ತಿರಬೇಕು.

– ಶಾಲಾವರಣದಲ್ಲಿ ಉಗುಳದಂತೆ ಜಾಗೃತಿ ಮೂಡಿಸಬೇಕು.

– ಅಸ್ವಸ್ಥರಾಗುವ ಮಕ್ಕಳಿಗೆ ಐಸೋಲೇಶನ್‌ ಕೊಠಡಿಯಲ್ಲಿ ವ್ಯವಸ್ಥೆ ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸ್ಥಳೀಯ ಆರೋಗ್ಯ ಸಿಬಂದಿಗೆ ಮಾಹಿತಿ ನೀಡಬೇಕು.


 `ಇ-ಸಂವೇದಾ ಕ್ಲಾಸ್' : 8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

`ಇ-ಸಂವೇದಾ ಕ್ಲಾಸ್' : 8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ


`ಇ-ಸಂವೇದಾ ಕ್ಲಾಸ್' : 8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : ರಾಜ್ಯದ 8,9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ ನೀಡಿದ್ದು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗದೇ ಇರುವುದರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಸಂವೇದಾ ಪಾಠಗಳನ್ನು ಜನವರಿ 4 ರಿಂದ ಮರು ಪ್ರಸಾರ ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಚಂದನಾ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು 2021 ಜನವರಿ 1 ಕ್ಕೆ ಪೂರ್ಣಗೊಳ್ಳಲಿವೆ. ಜನವರಿ 1 ರಿಂದ 10 ನೇ ತರಗತಿಗೆ ಶಾಲಾ ತರಗತಿಗಳು ಮತ್ತು 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳು ಆರಂಭವಾಗುತ್ತಿವೆ. ಇದರ ಜೊತೆಗೆ ಮಕ್ಕಳ ಕಲಿಕೆಯ ಹಿತದೃಷ್ಟಿಯಿಂದ ಚಂದನಾ ವಾಹಿನಿಯಲ್ಲಿ 8,9 ಮತ್ತು 10 ನೇ ತರಗತಿಗಳಿಗೆ ಪ್ರಸಾರವಾಗುತ್ತಿದ್ದ ಪಾಠಗಳನ್ನು ಜನವರಿ 4 ರಿಂದ ಮರು ಪ್ರಸಾರ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.


 ಯೆಮನ್‌ ವಿಮಾನ ನಿಲ್ದಾಣದಲ್ಲಿ ಸ್ಫೋಟ: 26 ಸಾವು

ಯೆಮನ್‌ ವಿಮಾನ ನಿಲ್ದಾಣದಲ್ಲಿ ಸ್ಫೋಟ: 26 ಸಾವು


ಯೆಮನ್‌ ವಿಮಾನ ನಿಲ್ದಾಣದಲ್ಲಿ ಸ್ಫೋಟ: 26 ಸಾವು

ಸನಾ(ಯೆಮನ್‌): ನೂತನವಾಗಿ ರಚನೆಯಾದ ಸಚಿವ ಸಂಪುಟದ ಸಿಬ್ಬಂದಿಯಿದ್ದ ವಿಮಾನವೊಂದು ಇಳಿದ ಕೆಲವೇ ಕ್ಷಣಗಳ ನಂತರ ಯೆಮನ್‌ನ ಏಡನ್‌ ವಿಮಾನ ನಿಲ್ದಾಣದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 26 ಜನರು ಮೃತಪಟ್ಟಿದ್ದಾರೆ.

ಇರಾನ್‌ ಬೆಂಬಲಿತ ಹುತಿ ಬಂಡಾಯಗಾರರು ಈ ಹೇಡಿ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಎಲ್ಲ ಸಚಿವರೂ ಸುರಕ್ಷಿತವಾಗಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮತ್ತು ಸರ್ಕಾರಿ ಮೂಲಗಳು ತಿಳಿಸಿವೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎನ್ನಲಾಗಿದೆ. 'ಸರ್ಕಾರದ ಎಲ್ಲ ಸದಸ್ಯರೂ ಸುರಕ್ಷಿತವಾಗಿದ್ದಾರೆ' ಎಂದು ಯೆಮನ್‌ನ ಪ್ರಧಾನಿ ಮೊಯೀನ್‌ ಅಬ್ದುಲ್‌ಮಲಿಕ್‌ ಸಯೀದ್‌ ಹೇಳಿದರು. ಸೌದಿ ಅರೇಬಿಯಾದಲ್ಲಿ ಯೆಮನ್‌ನ ರಾಷ್ಟ್ರಪತಿ ಅಬೆದ್ರಬ್ಬೊ ಮನ್ಸೂರ್‌ ಹಾದಿ ಅವರಿಂದ ಕೆಲ ದಿನಗಳ ಹಿಂದೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದ ಸಚಿವರು, ಏಡನ್‌ಗೆ ಆಗಮಿಸಿದ್ದರು.

2014ರಲ್ಲಿ ಹುತಿ ಬಂಡಾಯಕೋರರು ಸನಾ ವಶಕ್ಕೆ ಪಡೆದ ಸಂದರ್ಭದಲ್ಲಿ ಹಾದಿ, ಸೌದಿ ರಾಜಧಾನಿ ರಿಯಾದ್‌ಗೆ ಪಲಾಯನ ಮಾಡಿದ್ದರು.

ಮೊದಲ ಸ್ಫೋಟದ ಬಳಿಕ, ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ದಟ್ಟ ಹೊಗೆ ಆವರಿಸಿತ್ತು. ಈ ವೇಳೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ಜನರು ಸೇರುತ್ತಿದ್ದಂತೆಯೇ, ಎರಡನೇ ಸ್ಫೋಟ ಸಂಭವಿಸಿದೆ. ಕ್ಷಿಪಣಿ ಮಾದರಿಯ ಫಿರಂಗಿಯು ವಿಮಾನ ನಿಲ್ದಾಣದ ಮೇಲ್ಛಾವಣಿಗೆ ಅಪ್ಪಳಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ರಾಜಧಾನಿ ಸನಾ ಹಾಗೂ ಉತ್ತರದ ಹಲವು ಭಾಗಗಳನ್ನು ವಶಕ್ಕೆ ಪಡೆದಿರುವ ಹುತಿ ಬಂಡಾಯಕೋರರ ವಿರುದ್ಧ ಡಿ.18ರಂದು ಯೆಮನ್‌ ಸರ್ಕಾರ ಹಾಗೂ ದಕ್ಷಿಣದ ಪ್ರತ್ಯೇಕತಾವಾದಿಗಳು ಜೊತೆಗೂಡಿ ಸಂಪುಟ ರಚಿಸಿದ್ದರು.

'ಇರಾನ್‌ ಬೆಂಬಲಿತ ಹುತಿ ಉಗ್ರರ ಈ ಕೃತ್ಯವು, ನಮ್ಮ ದೇಶಭಕ್ತಿಯ ಕರ್ತವ್ಯವನ್ನು ಮುಂದುವರಿಸಲು ಅಡ್ಡಿಪಡಿಸುವುದಿಲ್ಲ' ಎಂದು ಟ್ವಿಟರ್‌ ಮೂಲಕ ಯೆಮನ್‌ನ ಮಾಹಿತಿ ಸಚಿವ ಮೊಯಮ್ಮರ್‌ ಅಲ್‌-ಎರ್ಯಾನಿ ತಿಳಿಸಿದ್ದಾರೆ. 'ಸಚಿವ ಸಂಪುಟದ ಸಲ್ಲ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯ ಕುರಿತು ಅಂತರರಾಷ್ಟ್ರೀಯ ತನಿಖೆ ನಡೆಯಬೇಕು' ಎಂದು ಯೆಮನ್‌ ಸರ್ಕಾರದ ವಕ್ತಾರ ರಜಿ ಬಡಿ ಹೇಳಿದ್ದಾರೆ.


 ಉಗ್ರರ ಜೊತೆ ಸತತ 18 ಗಂಟೆಗಳ ಕಾಳಗ: ಮೂವರ ಉಗ್ರರನ್ನ ಬಗ್ಗುಬಡಿದ ಭಾರತೀಯ ಸೇನೆ

ಉಗ್ರರ ಜೊತೆ ಸತತ 18 ಗಂಟೆಗಳ ಕಾಳಗ: ಮೂವರ ಉಗ್ರರನ್ನ ಬಗ್ಗುಬಡಿದ ಭಾರತೀಯ ಸೇನೆ


ಉಗ್ರರ ಜೊತೆ ಸತತ 18 ಗಂಟೆಗಳ ಕಾಳಗ: ಮೂವರ ಉಗ್ರರನ್ನ ಬಗ್ಗುಬಡಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಸತತ 18 ಗಂಟೆಗಳ ಕಾಲ ಗುಂಡಿನ ಕಾಳಗ ನಡೆಸಿದ್ದು, ಈ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನ ಬಗ್ಗು ಬಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಕಳೆದ ರಾತ್ರಿ ಕಾಶ್ಮೀರ ಪೊಲೀಸರು ಉಗ್ರರ ಜೊತೆಗೆ ಗುಂಡಿನ ಚಕಮಕಿ ನಡೆಸಿದ್ದು, ತಕ್ಷಣವೇ ಭಾರತೀಯ ಸೇನೆ ಕೂಡ ಕಾಶ್ಮೀರ ಪೊಲೀಸರ ಜೊತೆ ಸೇರಿ ಗುಂಡಿನ ದಾಳಿ ನಡೆಸಿದೆ. ಶ್ರೀಗನರ ಬಾರಮುಲ್ಲಾ ಹೆದ್ದಾರಿಯ ಲಾಯಪೋರ ವಲಯದಲ್ಲಿ ಎನ್‌ಕೌಂಟರ್ ನಡೆಸಲಾಗಿದ್ದು, ಸಂಜೆ 5 ಗಂಟೆಗೆ ಗುಂಡಿನ ಚಕಮಕಿ ಆರಂಭಗೊಂಡಿತ್ತು.

ಕಾಶ್ಮೀರ ಪೊಲೀಸ್ ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಉಗ್ರರು ಮನೆಯಲ್ಲಿ ತಂಗಿರುವ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ. ಈ ಜಂಟಿ ಕಾರ್ಯಚರಣೆಯಲ್ಲಿ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ.


 ರೂಪಾಂತರಿತ ಕೊರೋನ ವೈರಸ್:ಪ್ರಯೋಗಾತ್ಮಕ ಚಿಕಿತ್ಸೆಗಳ ವಿವೇಚನಾರಹಿತ ಬಳಕೆಯ ವಿರುದ್ಧ ಐಸಿಎಂಆರ್ ಎಚ್ಚರಿಕೆ

ರೂಪಾಂತರಿತ ಕೊರೋನ ವೈರಸ್:ಪ್ರಯೋಗಾತ್ಮಕ ಚಿಕಿತ್ಸೆಗಳ ವಿವೇಚನಾರಹಿತ ಬಳಕೆಯ ವಿರುದ್ಧ ಐಸಿಎಂಆರ್ ಎಚ್ಚರಿಕೆ


ರೂಪಾಂತರಿತ ಕೊರೋನ ವೈರಸ್:ಪ್ರಯೋಗಾತ್ಮಕ ಚಿಕಿತ್ಸೆಗಳ ವಿವೇಚನಾರಹಿತ ಬಳಕೆಯ ವಿರುದ್ಧ ಐಸಿಎಂಆರ್ ಎಚ್ಚರಿಕೆ

ಹೊಸದಿಲ್ಲಿ,ಡಿ.30: ಕೋವಿಡ್-19ನ್ನು ಗುಣಪಡಿಸಲು ಪ್ರಯೋಗಾತ್ಮಕ ಚಿಕಿತ್ಸೆಗಳ ವಿವೇಚನಾರಹಿತ ಬಳಕೆಯ ವಿರುದ್ಧ ಎಚ್ಚರಿಕೆಯನ್ನು ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯು,ಅದು ವೈರಸ್‌ನ ತ್ವರಿತ ರೂಪಾಂತರಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್ ಮಹಾ ನಿರ್ದೇಶಕ ಬಲರಾಮ್ ಭಾರ್ಗವ ಅವರು,'ಪ್ರತಿರಕ್ಷಣಾ ಒತ್ತಡದಿಂದ ವೈರಸ್‌ನಲ್ಲಿ ಮಾರ್ಪಾಡುಗಳಾಗಬಹುದು. ವೈರಸ್ ಮೇಲಿನ ಪ್ರತಿರಕ್ಷಣಾ ಒತ್ತಡವು ವಾತಾವರಣಕ್ಕೆ,ರೋಗಿಗೆ,ಚಿಕಿತ್ಸೆಗೆ ಅಥವಾ ಇತರ ವಿಧಿವಿಧಾನಗಳಿಗೆ ಸಂಬಂಧಿಸಿರಬಹುದು. ಆದ್ದರಿಂದ ನಾವು ವೈರಸ್‌ನ ಮೇಲೆ ಪ್ರತಿರಕ್ಷಣಾ ಒತ್ತಡವನ್ನುಂಟು ಮಾಡಬಾರದು ಎನ್ನುವುದು ವೈಜ್ಞಾನಿಕ ಸಮುದಾಯದ ಅಭಿಪ್ರಾಯದಲ್ಲಿಯೂ ಮುಖ್ಯವಾಗಿದೆ 'ಎಂದರು

ಪ್ರಯೋಗಾತ್ಮಕ ಚಿಕಿತ್ಸೆಗಳು ವೈರಸ್‌ನ ಮೇಲೆ ಭಾರೀ ಪ್ರತಿರಕ್ಷಣಾ ಒತ್ತಡವನ್ನುಂಟು ಮಾಡುತ್ತವೆ ಮತ್ತು ಇದು ವೈರಸ್ ಹೆಚ್ಚು ರೂಪಾಂತರಗೊಳ್ಳಲು ಕಾರಣವಾಗುತ್ತದೆ. ಹೀಗಾಗಿ ಯಶಸ್ವಿ ಎಂದು ಸಾಬೀತಾದ ಚಿಕಿತ್ಸಾ ಕ್ರಮಗಳನ್ನೇ ಕೋವಿಡ್-19 ಚಿಕಿತ್ಸೆಗೆ ಬಳಸಬೇಕು ಎಂದರು.

ಶೇ.70ರಷ್ಟು ಹೆಚ್ಚು ಸಾಂಕ್ರಾಮಿಕ ಎನ್ನಲಾಗಿರುವ ರೂಪಾಂತರಿತ ಕೊರೋನ ವೈರಸ್ ಬ್ರಿಟನ್‌ನಿಂದ ಆರಂಭಗೊಂಡು ಡಝನ್‌ಗೂ ಅಧಿಕ ದೇಶಗಳಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರ್ಗವರ ಈ ಹೇಳಿಕೆ ಹೊರಬಿದ್ದಿದೆ. ಭಾರತದಲ್ಲಿ ಈವರೆಗೆ 20 ಜನರಲ್ಲಿ ರೂಪಾಂತರಿತ ಸೋಂಕು ಪತ್ತೆಯಾಗಿದೆ.

ಕೋವಿಡ್-19ರಂತಹ ಶ್ವಾಸಕೋಶ ವೈರಸ್‌ಗಳಲ್ಲಿ ಆಗಾಗ್ಗೆ ಅಲ್ಪ ಮಾರ್ಪಾಡುಗಳು ಆಗಬಹುದು. ಇಂತಹ ಹಲವಾರು ಮಾರ್ಪಾಡುಗಳು ಸಂಭವಿಸಿದರೆ ಅವು ಮುಖ್ಯವಾಗುತ್ತವೆ ಮತ್ತು ಈಗ ಬ್ರಿಟನ್‌ನಲ್ಲಿ ಸಂಭವಿಸಿರುವಂತೆ ಹೆಚ್ಚು ಪ್ರಸರಣ ಶಕ್ತಿಯನ್ನು ಹೊಂದಿರುವ ರೂಪಾಂತರಿ ತಳಿಗಳಾಗುತ್ತವೆ. ನಾವು ಭಾರತದಲ್ಲಿ ವೈರಸ್ ಮಾರ್ಪಾಡುಗಳಿಗಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆಯಾ ದರೂ ಈ ವಿಷಯವು ಕಳವಳಕಾರಿಯಾಗಿದೆ 'ಎಂದು ಭಾರ್ಗವ ಹೇಳಿದರು.

ರೂಪಾಂತರಿತ ಕೊರೋನ ವೈರಸ್ ಅನ್ನು ನಿಭಾಯಿಸಲು ಹೆಚ್ಚಿನ ಬದಲಾವಣೆಗಳ ಅಗತ್ಯವಿಲ್ಲ. ಪ್ರಚಲಿತ ಮುನ್ನೆಚ್ಚರಿಕೆ ಕ್ರಮಗಳೇ ರೂಪಾಂತರಿತ ಕೊರೋನ ವಿಷಯದಲ್ಲಿಯೂ ಕೆಲಸ ಮಾಡುತ್ತವೆ ಎಂದು ತಳಿವಿಜ್ಞಾನ ತಜ್ಞ ಹಾಗೂ ದಿಲ್ಲಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಆಯಂಡ್ ಇಂಡಸ್ಟ್ರಿಯಲ್ ರೀಸರ್ಚ್-ಇನ್‌ಸ್ಟಿಟ್ಯೂಟ್ ಆಫ್ ಜೆನೊಮಿಕ್ಸ್ ಆಯಂಡ್ ಇಂಟಿಗ್ರೇಟಿವ್ ಬಯಾಲಜಿಯ ನಿರ್ದೇಶಕ ಡಾ.ಅನುರಾಗ್ ಅಗರವಾಲ್ ಹೇಳಿದರೆ,ರೂಪಾಂತರಿತ ಸೋಂಕಿಗಾಗಿ ಪರೀಕ್ಷೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ದಿಲ್ಲಿಯ ಮಣಿಪಾಲ ಆಸ್ಪತ್ರೆಯ ಕ್ಲಿನಿಕಲ್ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ.ನವೀನ ಕುಮಾರ್ ತಿಳಿಸಿದರು.


ರಾಜ್ಯದಲ್ಲೂ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್ : ಬಹುತೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ

ರಾಜ್ಯದಲ್ಲೂ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್ : ಬಹುತೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ

ರಾಜ್ಯದಲ್ಲೂ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್ : ಬಹುತೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ

ಬೆಂಗಳೂರು : ರಾಜ್ಯದ ಜನತೆ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದೆ. ತಮ್ಮ ತಮ್ಮ ಊರಿನಲ್ಲಿ ಪಾರ್ಟಿ ಮೋಜು ಮಸ್ತಿ ಮಾಡಲು ಜನರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೊರೊನಾ ಜನರ ಸಂಭ್ರಮಕ್ಕೆ ಬ್ರೇಕ್ ಹಾಕಿದೆ.

ಇದರ ನಡುವೆ ಬ್ರಿಟನ್ ಕೊರೊನಾ ಸೋಂಕು ರಾಜ್ಯದಲ್ಲಿ ತಾಂಡವವಾಡುತ್ತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್ ಹಾಕಲಾಗಿದ್ದು, ಹಲವು ಕಡೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಮನಗರದ ಪ್ರವಾಸಿ ತಾಣಗಳಿಗೆ ಎರಡು ದಿನ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ, ಇಂದಿನಿಂದ ಜನವರಿ 2 ರವರೆಗೆ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿದೆ. ಚುಂಚಿ ಪಾಲ್ಸ್ ಸೇರಿದಂತೆ ಹಲವು ಫಾಲ್ಸ್ ಗಳಿಗೆ ನಿಷೇಧ ಹೇರಲಾಗಿದೆ.

ಮಂಡ್ಯದ ಕಾವೇರಿ ನದಿ ತೀರ, ಶ್ರೀರಂಗಪಟ್ಟಣದ ಎಡಮುರಿ ಬಲಮುರಿಗೆ ಸಾರ್ವಜನಿಕರ ಪ್ರವೇಶಕ್ಕೆ ಎರಡು ದಿನ ನಿಷೇಧ ಹೇರಲಾಗಿದೆ. ಇನ್ನೂ ತುಮಕೂರಿನ ಕೆಲವು ಪ್ರಸಿದ್ದ ಪ್ರವಾಸಿ ತಾಣಗಳಿಗೆ ಕೂಡ ನಿಷೇಧ ಹೇರಲಾಗಿದೆ. ಮಂಗಳೂರಿನಲ್ಲಿ ನಾಳೆ ಸಂಜೆ 6 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.


 ಸಿಲಿಕಾನ್ ಸಿಟಿ'ಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ : ನಾಳೆ ರಾತ್ರಿ 8 ರಿಂದ ವಾಹನ ಸಂಚಾರ ನಿರ್ಬಂಧ ; ಮೇಲ್ಸೇತುವೆಗಳು ಬಂದ್

ಸಿಲಿಕಾನ್ ಸಿಟಿ'ಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ : ನಾಳೆ ರಾತ್ರಿ 8 ರಿಂದ ವಾಹನ ಸಂಚಾರ ನಿರ್ಬಂಧ ; ಮೇಲ್ಸೇತುವೆಗಳು ಬಂದ್


ಸಿಲಿಕಾನ್ ಸಿಟಿ'ಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ : ನಾಳೆ ರಾತ್ರಿ 8 ರಿಂದ ವಾಹನ ಸಂಚಾರ ನಿರ್ಬಂಧ ; ಮೇಲ್ಸೇತುವೆಗಳು ಬಂದ್

ಬೆಂಗಳೂರು : ನಾಳೆ ರಾಜ್ಯ ರಾಜಧಾನಿಯಲ್ಲಿ ನ್ಯೂಯಿರ್ ಗೆ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಹೊಸ ವರ್ಷಾಚರಣೆಯ ಹೆಸರಿನಲ್ಲಿ ಕುಡಿದು ವಾಹನ ಚಲಾಯಿಸಿದ್ರೆ ಲೈಸೆನ್ಸ್ ರದ್ದು ಆಗಲಿದೆ.

'ಹೊಸ ವರ್ಷಾಚರಣೆ ವೇಳೆ ಹೆಚ್ಚು ಜನ ಸೇರದಂತೆ ತಡೆಯಲು ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್‌ ಸ್ಟ್ರೀಟ್‌ಗಳಲ್ಲಿ ನಾಳೆ ರಾತ್ರಿ 8 ಗಂಟೆಯಿಂದ ಜ.1ರ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ' ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಮುಂಗಡ ಟಿಕೆಟ್ ಹಾಗೂ ಪಾಸ್‌ ಇದ್ದವರಿಗೆ ಮಾತ್ರ ರೆಸ್ಟೋರೆಂಟ್‌, ಪಬ್‌, ಪಾರ್ಟಿಗಳಿಗೆ ಅವಕಾಶ ನೀಡಲಾಗುವುದು. ನಿಷೇಧಿತ ರಸ್ತೆಗಳಲ್ಲಿ ಪಾರ್ಟಿಗಳಿಗೆ ಹೋಗುವವರು, ವಾಹನಗಳನ್ನು ಬಿಟ್ಟು, ನಡೆದು ಹೋಗಬಹುದು' ಎಂದು ಹೇಳಿದ್ದಾರೆ.

'ಹೊಸ ವರ್ಷದ ಆಚರಣೆ ವೇಳೆ ಮೋಜು ಮಾಡಲು ನೈಸ್‌ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜನ ಸೇರುತ್ತಾರೆ. ಕೆಲವರು ಬೈಕ್‌ ರೇಸ್, ವೀಲಿಂಗ್‌ ಮಾಡುತ್ತಾರೆ. ಅಂತಹವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. 191 ಕಡೆ ನಾಕಾಬಂದಿ ಹಾಕಲಾಗುವುದು.2,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅನಗತ್ಯವಾಗಿ ಸಂಚಾರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದರು. ನಗರ ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ, ಪಾರ್ಕಿಂಗ್ ಮಾಡೋದಕ್ಕೆ ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಸಂಭ್ರಮದ ಹೆಸರಿನಲ್ಲಿ ಡ್ರಿಂಕ್ ಅಂಡ್ ಡ್ರೈವ್ ಗೆ ಅವಕಾಶವಿಲ್ಲ. ಒಂದು ವೇಳೆ ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ರೆ ಅಂತಹ ವಾಹನ ಸವಾರರ ಲೈಸೆನ್ಸ್ ರದ್ದು ಪಡಿಸಲಾಗುತ್ತದೆ. ವ್ಹೀಲಿಂಗ್ ಮಾಡೋದದನ್ನು ನಿಷೇಧಿಸಲಾಗಿದೆ ಎಂದರು.

'ನಗರದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿರುವುದರಿಂದ ನಗರದ ಎಲ್ಲ ಮೇಲ್ಸೇತುವೆಗಳನ್ನು ಗುರುವಾರ ರಾತ್ರಿ 10ರಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚಲಾಗುವುದು. ಸರ್ವೀಸ್‌ ರಸ್ತೆಗಳಲ್ಲಿ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ' ಎಂದು ಮಾಹಿತಿ ನೀಡಿದರು. ಕಬ್ಬನ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ರೆಸ್ಟ್‌ ಹೌಸ್ ರಸ್ತೆ, ಡಿಸ್ಪೆನ್ಸರಿ ರಸ್ತೆ, ರಿಚ್‌ಮಂಡ್, ಇನ್‌ಫೆಂಟ್ರಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್‌ ರಸ್ತೆ, ಮ್ಯಾಗ್ರತ್ ರಸ್ತೆ, ಕಮಿಷನರೇಟ್ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.



ಜನವರಿ 31ರವರೆಗೆ ಮತ್ತೆ ಮಹಾರಾಷ್ಟ್ರ ಲಾಕ್ ಡೌನ್

ಜನವರಿ 31ರವರೆಗೆ ಮತ್ತೆ ಮಹಾರಾಷ್ಟ್ರ ಲಾಕ್ ಡೌನ್


ಜನವರಿ 31ರವರೆಗೆ ಮತ್ತೆ ಮಹಾರಾಷ್ಟ್ರ ಲಾಕ್ ಡೌನ್

ಮುಂಬೈ : ಹರಡುತ್ತಿರುವ ಹೊಸ ರೂಪಾಂತರ ಹೊಂದಿರುವ ಕೊರೋನವೈರಸ್ ಭೀತಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಜನವರಿ 31ರವರೆಗೆ ಈ ಲಾಕ್ ಡೌನ್ ಜಾರಿಯಾಗಲಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ ಈಗಾಗಲೇ ರೂಪಾಂತರ ಹೊಂದಿರುವ ಕೊರೊನಾ ವೈರಸ್ ಎಂಟ್ರಿ ಆಗಿದ್ದು, ಬ್ರಿಟನ್ ನಿಂದ ಭಾರತಕ್ಕೆ ಬಂದ 20 ಜನರಲ್ಲಿ ಈಗಾಗಲೇ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರದಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.





 ಉತ್ತರ ಪ್ರದೇಶ: ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮನೆಯಲ್ಲಿ ಇ.ಡಿ ಶೋಧ

ಉತ್ತರ ಪ್ರದೇಶ: ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮನೆಯಲ್ಲಿ ಇ.ಡಿ ಶೋಧ


 ಉತ್ತರ ಪ್ರದೇಶ: ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮನೆಯಲ್ಲಿ ಇ.ಡಿ ಶೋಧ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರ ಮನೆ ಮತ್ತು ಅವರಿಗೆ ಸಂಬಂಧಪಟ್ಟ ಇತರೆ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇ.ಡಿಯು ಲಖನೌ, ಕಾನ್ಪುರ ಮತ್ತು ಅಮೇಥಿಯ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಕಾನ್ಪುರದವರಾದ ಪ್ರಜಾಪತಿ ಅವರ ಲೆಕ್ಕಪರಿಶೋಧಕ ಅಮೇಥಿಯಲ್ಲಿ 'ಬೇನಾಮಿ ಆಸ್ತಿ' ಹೊಂದಿದ್ದಾರೆ ಎನ್ನಲಾಗಿದೆ. ಆ ಸ್ಥಳಗಳಲ್ಲಿ ಮತ್ತು ಪ್ರಜಾಪತಿ ಅವರ ನಿವಾಸ, ಲಖನೌನಲ್ಲಿರುವ ಕಚೇರಿಯಲ್ಲೂ ಇ.ಡಿ ಶೋಧ ನಡೆಸಿದೆ.

ಪ್ರಜಾಪತಿಯನ್ನು ಮಾರ್ಚ್‌ 15, 2017ರಲ್ಲಿ ಬಂಧಿಸಲಾಗಿತ್ತು. ಸದ್ಯ ಲಖನೌನ ಕೆಜಿಎಂಯು ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಗಾಯತ್ರಿ ಪ್ರಜಾಪತಿ ಸಚಿವರಾಗಿದ್ದರು. ಈ ವೇಳೆ ಅಕ್ರಮವಾಗಿ ಆಸ್ತಿಯನ್ನು ಸಂಪಾದಿಸಿರುವ ಆರೋಪದಡಿ ಇ.ಡಿ ತನಿಖೆ ನಡೆಸುತ್ತಿದೆ.

 ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!

ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!


 ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!

ಪಟನಾ: ತೊಳೆದು ಒಣೆಸಿದ್ದ ಬಟ್ಟೆಯನ್ನು ತರಲು ಮನೆಯಿಂದ ಹೊರನಡೆದ ಯುವತಿಯನ್ನು ಯುವಕರ ಗ್ಯಾಂಗ್ ಒಂದು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ. ಯುವತಿ ಬುಧವಾರ ಬೆಳಗ್ಗೆ ಮನೆ ಹತ್ತಿರದ ಮೋರಿಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಹೇಳಲಾಗಿದೆ.

ಮುಜಾಫರ್​ಪುರದ ಕಾಂತಿ ಪೊಲೀಸ್​ ಠಾಣಾ ವ್ಯಾಪ್ತಿಯ ಪುಟ್ಟ ಗ್ರಾಮವೊಂದರಲ್ಲಿ ವಾಸಿಸುವ ಕುಟುಂಬದ ಮಗಳು ಮಂಗಳವಾರ ರಾತ್ರಿ 10 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆ ಬಂದಿದ್ದಾಳೆ. ಅಂಗಳದಲ್ಲಿ ಒಣಗಿಸಿದ್ದ ಬಟ್ಟೆ ತೆಗೆದುಕೊಂಡು ರೂಮಿಗೆ ಹೋಗಲು ಮುಂದಾಗಿದ್ದಾಳೆ. ಮೊದಲೇ ಹೊಂಚು ಹಾಕಿ ಕುಳಿತಿದ್ದ ಯುವಕರ ಗ್ಯಾಂಗ್​ ಒಂದು ಹಿಂದಿನಿಂದ ಆಕೆಯ ಬಾಯಿಯನ್ನು ಒತ್ತಿ ಹಿಡಿದು ಎಳೆದುಕೊಂಡು ಹೋಗಿದೆ. ಎಷ್ಟು ಹೊತ್ತಾದರೂ ಮಗಳು ಮನೆ ಒಳಗೆ ಬಾರದಿರುವುದು ನೋಡಿ ತಂದೆ ತಾಯಿ ಎಲ್ಲೆಡೆ ಮಗಳಿಗಾಗಿ ಹುಡುಕಾಡಿದ್ದಾರೆ.

ಬುಧವಾರ ಬೆಳಗ್ಗೆ ಯುವತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಯ ಹತ್ತಿರವಿದ್ದ ಮೋರಿಯ ಬಳಿ ಸಿಕ್ಕಿದ್ದಾಳೆ. ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ. ಗ್ರಾಮಸ್ಥರ ಸಹಾಯದಿಂದ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಕೊಡಗು ಗ್ರಾ.ಪಂ ಚುನಾವಣೆ ಫಲಿತಾಂಶ: ಜೈಲಿನಿಂದಲೇ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಗೆಲುವು; ಅಕ್ಕನನ್ನು ಸೋಲಿಸಿದ ತಂಗಿ!

ಕೊಡಗು ಗ್ರಾ.ಪಂ ಚುನಾವಣೆ ಫಲಿತಾಂಶ: ಜೈಲಿನಿಂದಲೇ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಗೆಲುವು; ಅಕ್ಕನನ್ನು ಸೋಲಿಸಿದ ತಂಗಿ!


 ಕೊಡಗು ಗ್ರಾ.ಪಂ ಚುನಾವಣೆ ಫಲಿತಾಂಶ: ಜೈಲಿನಿಂದಲೇ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಗೆಲುವು; ಅಕ್ಕನನ್ನು ಸೋಲಿಸಿದ ತಂಗಿ!

ಮಡಿಕೇರಿ: ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ. ಪಾಲಿಬೆಟ್ಟ ಗ್ರಾಮ ಪಂಚಾಯತ್ ಎಮ್ಮೆಗುಂಡಿ ಕ್ಷೇತ್ರದ ಅಭ್ಯರ್ಥಿ ಪುಲಯಂಡ ಬೋಪಣ್ಣ ಗೆಲುವು ಪಡೆದ ಅಭ್ಯರ್ಥಿ. ಇವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯುಸೂಫ್ ವಿರುದ್ಧ 61 ಮತಗಳ ಅಂತರದಿಂದ ಜಯಿಸಿದ್ದಾರೆ. ಬೋಪಣ್ಣ ಬಿಜೆಪಿ ಬೆಂಬಲಿತ ಅಭ್ಯರ್ಥಿ. 

ಜಾತಿ ನಿಂದನೆ ಪ್ರಕರಣದಲ್ಲಿ ಬೋಪಣ್ಣ ನ್ಯಾಯಾಂಗ ಬಂಧನದಲ್ಲಿದ್ದರು. ಖುದ್ದು ನಾಮಪತ್ರ ಸಲ್ಲಿಸಲು ಅವಕಾಶ ಆಗಿರಲಿಲ್ಲ. ತಮ್ಮ ಬೆಂಬಲಿಗರೊಬ್ಬರು ನಾಮಪತ್ರ ಸಲ್ಲಿಸಿದ್ದರು.

ಬಳಿಕ ಜಾಮೀನು ಸಿಕ್ಕಿ, ಎರಡು ದಿನ ಪ್ರಚಾರ ನಡೆಸಿದ್ದರು. ಈ ಹಿಂದೆ ಅವರು 12 ವರ್ಷ ಪಾಲಿಬೆಟ್ಟ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲಿ ಗ್ರಾಮ‌ ಪಂಚಾಯಿತಿಗೆ ರಾಷ್ಟ್ರೀಯ ‌ಪುರಸ್ಕಾರವೂ ಲಭಿಸಿತ್ತು. ಬಿಳಿಗೇರಿ ವಾರ್ಡ್ ನಲ್ಲಿ ಅಕ್ಕನ ವಿರುದ್ಧ ಸ್ಪರ್ಧಿಸಿದ್ದ ತಂಗಿಗೆ ಗೆಲುವು ಲಭ್ಯವಾಗಿದೆ. ಅಕ್ಕ ಸುಮಲತಾ ವಿರುದ್ಧ ಸ್ಪರ್ಧಿಸಿದ್ದ ಸಹೋದರಿ ಬಿ.ಎಸ್. ಪುಷ್ಪಾ 97 ಮತಗಳಿಂದ ಗೆದ್ದಿದ್ದಾರೆ.

 ಗ್ರಾ.ಪಂ ಚುನಾವಣೆ: 4,228 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 2,265 ರಲ್ಲಿ ಕಾಂಗ್ರೆಸ್, 1,167 ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮುನ್ನಡೆ

ಗ್ರಾ.ಪಂ ಚುನಾವಣೆ: 4,228 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 2,265 ರಲ್ಲಿ ಕಾಂಗ್ರೆಸ್, 1,167 ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮುನ್ನಡೆ


 ಗ್ರಾ.ಪಂ ಚುನಾವಣೆ: 4,228 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 2,265 ರಲ್ಲಿ ಕಾಂಗ್ರೆಸ್, 1,167 ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮುನ್ನಡೆ

ಬೆಂಗಳೂರು: ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ನಿರ್ಣಾಯಗ ಘಟ್ಟ ತಲುಪಿದೆ. 

ಮಧ್ಯಾಹ್ನದ ವರೆಗೆ ನಡೆದಿರುವ ಮತ ಎಣಿಕೆಯಲ್ಲಿ 4,228 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ, ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 2,265 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಈ ಹಿಂದೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 1,167 ಸ್ಥಾನಗಳನ್ನು ಗೆದ್ದಿದ್ದಾರೆ. 

ಬೆಳಗಾವಿಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಮಾಟ, ಮಂತ್ರ! 

ಮತದಾನಕ್ಕೂ ಮುನ್ನ ವಾಮಾಚಾರ, ಮಾಟ ಮಂತ್ರಗಳ ಬಗ್ಗೆ ಈ ಹಿಂದೆ ವರದಿ ಪ್ರಕಟವಾಗಿತ್ತು. ಆದರೆ ಈಗ ಮತ ಎಣಿಕೆ ದಿನದಂದು ಮತ ಎಣಿಕೆ ಕೇಂದ್ರದ ಎದುರು ವಾಮಾಚಾರ ನಡೆದಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ. 

ಚಿಕ್ಕೋಡಿಯಲ್ಲಿ ಈ ಘಟನೆ ನಡೆದಿದ್ದು, ಸಣ್ಣ ಪೇಪರ್ ತುಂಡು ಹಾಗೂ ವಾಮಾಚಾರಕ್ಕೆ ಬಳಕೆ ಮಾಡುವ ಪದಾರ್ಥಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 ಉತ್ತರ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ರೂಪಾಂತರಿ ಕೊರೊನಾ ಸೋಂಕು

ಉತ್ತರ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ರೂಪಾಂತರಿ ಕೊರೊನಾ ಸೋಂಕು


 ಉತ್ತರ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ರೂಪಾಂತರಿ ಕೊರೊನಾ ಸೋಂಕು

ಲಕ್ನೋ, ಡಿಸೆಂಬರ್ 30: ಬ್ರಿಟನ್‌ನ ರೂಪಾಂತರಿ ಕೊರೊನಾ ಸೋಂಕು ಉತ್ತರ ಪ್ರದೇಶದಲ್ಲಿರುವ 2 ವರ್ಷದ ಮಗುವಿಗೆ ತಗುಲಿದೆ.

ಭಾರತದಲ್ಲಿ ಕೊರೊನಾ ವೈರಸ್ 2ನೇ ಅಲೆ ನಿಧಾನಗತಿಯಲ್ಲಿ ಆರಂಭವಾಗುತ್ತಿರುವ ಎಲ್ಲಾ ಬೆಳವಣಿಗೆಗಳು ಕಂಡು ಬರುತ್ತಿವೆ.

ಭಾರತದಲ್ಲಿ ರೂಪಾಂತರಿ ಕೊರೋನಾ ವೈರಸ್ ಕಾಟ ಶುರುವಾಗಿದ್ದು, ಈಗಾಗಲೇ 20 ಮಂದಿಯಲ್ಲಿ ಈ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದೀಗ ಉತ್ತರಪ್ರದೇಶದಲ್ಲಿ 2 ವರ್ಷದ ಮಗು ಹಾಗೂ ಪೋಷಕರಲ್ಲೂ ಸೋಂಕು ಪತ್ತೆಯಾಗಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.

ನಿನ್ನೆಯಷ್ಟೇ ರೂಪಾಂತರಿ ಕೊರೊನಾ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿತ್ತು.

ಡಿಸೆಂಬರ್ 14 ರಂದು ಲಂಡನ್ ನಿಂದ ಮಗು ಹಾಗೂ ಮಗುವಿನ ತಾಯಿ, ತಂದೆ ಮೀರತ್'ಗೆ ಆಗಮಿಸಿದ್ದರು. ಮೂವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಮತ್ತಷ್ಟು ಪರೀಕ್ಷೆ ನಡೆಸಿದಾಗ ಮೂವರಲ್ಲೂ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿರುವುದು ತಿಳಿದುಬಂದಿದೆ.

ಈಗಾಗಲೇ ಮೂವರನ್ನೂ ಸುಭಾರ್ಟಿ ವೈದ್ಯಕೀಯ ಕಾಲೇಜಿನಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಮೂವರ ಆರೋಗ್ಯವನ್ನೂ ಅಧಿಕಾರಿಗಳು ಆಗಾಗ ಪರಿಶೀಲಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ : ಅಕ್ಕನ ವಿರುದ್ಧ ಗೆದ್ದ ತಂಗಿ, ಒಂದು ಮತದ ಅಂತರದಿಂದ ಗೆದ್ದ ಅಭ್ಯರ್ಥಿಗಳು!

ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ : ಅಕ್ಕನ ವಿರುದ್ಧ ಗೆದ್ದ ತಂಗಿ, ಒಂದು ಮತದ ಅಂತರದಿಂದ ಗೆದ್ದ ಅಭ್ಯರ್ಥಿಗಳು!


ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ : ಅಕ್ಕನ ವಿರುದ್ಧ ಗೆದ್ದ ತಂಗಿ, ಒಂದು ಮತದ ಅಂತರದಿಂದ ಗೆದ್ದ ಅಭ್ಯರ್ಥಿಗಳು!

ಬೆಂಗಳೂರು : ರಾಜ್ಯದ ಗ್ರಾಮಪಂಚಾಯಿತಿ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಶುರುವಾಗಿದ್ದು, ಹಲವು ಗ್ರಾ.ಪಂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕೇವಲ ಒಂದು ಮತದಿಂದ ಗೆಲುವು ಸಾಧಿಸಿದ್ದಾರೆ.

ರಾಜ್ಯದ 5,728 ಗ್ರಾಮಪಂಚಾಯಿತಿಗಳಿ 82,616 ಸ್ಥಾನಗಳ ಫಲಿತಾಂಶ ಪ್ರಕಟವಾಗಲಿದ್ದು, ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದೆ.

ಕೊಡಗು ಜಿಲ್ಲೆ ಮಡಿಕೇರಿಯ ಮೇಕೇರಿ ಗ್ರಾ.ಪಂಯಲ್ಲಿ ಅಕ್ಕನ ವಿರುದ್ಧ ತಂಗಿಗೆ ಗೆಲುವು ಸಾಧಿಸಿದ್ದು, ಮೇಕೆರಿ ಗ್ರಾಮಪಂಚಾಯಿತಿಯ ಬಿಳಿಗೇರಿ ವಾರ್ಡ್ ನಂ.01 ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪುಷ್ಪಾ ಜಯಗಳಿಸಿದ್ದಾರೆ.ಹಿರಿಯ ಸಹೋದರಿ ಸುಮಾವತಿ 80 ಮತಗಳನ್ನು ಪಡೆದರೆ, ಪುಷ್ಪಾ 283 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ತುಮಕೂರು ತಾಲ್ಲೂಕಿನ ಬುಗಡನಹಳ್ಳಿ ಗ್ರಾಮ ಪಂಚಾಯ್ತಿಯ ಹನುಮಂತಪುರ ಕ್ಷೇತ್ರದ ಅಭ್ಯರ್ಥಿ ಟಿ.ವಿ. ಶಿವಕುಮಾರ್ ಕೇವಲ ಒಂದು ಮತದ ಅಂತರದಿಂದ ಸಮೀಪ ಪ್ರತಿ ಸ್ಪರ್ಧಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದಾರೆ. ಅಭ್ಯರ್ಥಿ ಟಿ.ವಿ..ಶಿವಕುಮಾರ್ ಅವರಿಗೆ 163 ಮತಗಳು ಬಂದಿದ್ದರೆ ಪ್ರತಿಸ್ಪರ್ಧಿ ಕೃಷ್ಣಪ್ಪಗೆ 162 ಮತ ಪಡೆದಿದ್ದಾರೆ‌. ಈ ಮೂಲಕ ಒಂದು ಮತದ ಅಂತರದಿಂದ ಶಿವಕುಮಾರ್ ಜಯಗಳಿಸಿದ್ದಾರೆ.

ಇನ್ನು ಗಂಗಾವತಿ ತಾಲೂಕಿನ ಸಣ್ಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜನಹಳ್ಳಿ ಗ್ರಾಮದ ರಾಣಿ ನಾಗೇಂದ್ರ ಎನ್ನುವವರು ಕೇವಲ ಒಂದು ಮತದಿಂದ ರೋಚಕ ಗೆಲುವು ದಾಖಲಿಸಿದ್ದಾರೆ.

Tuesday, 29 December 2020

 ಮುಖ್ಯಮಂತ್ರಿ ತವರಲ್ಲಿ ಲಾಟರಿ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯ

ಮುಖ್ಯಮಂತ್ರಿ ತವರಲ್ಲಿ ಲಾಟರಿ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯ


 ಮುಖ್ಯಮಂತ್ರಿ ತವರಲ್ಲಿ ಲಾಟರಿ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯ

ಮಂಡ್ಯ: ಮುಖ್ಯಮಂತ್ರಿ ಯಡಿಯೂರಪ್ಪ ತವರು ಬೂಕನಕೆರೆ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿ ಸರಿಸಮನಾದ ಮತ ಪಡೆದಿದ್ದರಿಂದ ಫಲಿತಾಂಶ ಡ್ರಾ ಆಗಿತ್ತು. ಬಳಿಕ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಲಾಟರಿ ಮೂಲಕ ಜಯ ಸಾಧಿಸಿದ್ದಾರೆ.

ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ ತಲಾ 183 ಮತ ಗಳಿಸಿದ್ದರು. ಬಳಿಕ ಚುನಾವಣಾಧಿಕಾರಿಗಳು ಲಾಟರಿ ಮೂಲಕ ಫಲಿತಾಂಶ ನಿರ್ಧರಿಸಿದ್ದಾರೆ.

ಲಾಟರಿಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜಳಾ ಗೆಲುವು ಸಾಧಿಸಿದ್ದಾರೆ.

 ಗ್ರಾ.ಪಂ. ಚುನಾವಣಾ ಫಲಿತಾಂಶ | ದ.ಕ., ಉಡುಪಿ ಜಿಲ್ಲೆಯ ವಿವಿಧ ಗ್ರಾಮಗಳ 12 ಗಂಟೆ ವರೆಗಿನ ವಿವರ

ಗ್ರಾ.ಪಂ. ಚುನಾವಣಾ ಫಲಿತಾಂಶ | ದ.ಕ., ಉಡುಪಿ ಜಿಲ್ಲೆಯ ವಿವಿಧ ಗ್ರಾಮಗಳ 12 ಗಂಟೆ ವರೆಗಿನ ವಿವರ


 ಗ್ರಾ.ಪಂ. ಚುನಾವಣಾ ಫಲಿತಾಂಶ | ದ.ಕ., ಉಡುಪಿ ಜಿಲ್ಲೆಯ ವಿವಿಧ ಗ್ರಾಮಗಳ 12 ಗಂಟೆ ವರೆಗಿನ ವಿವರ

ಮಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ಡಿ.22 ಮತ್ತು 27ರಂದು ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆಯಿಂದಲೇ ಎಲ್ಲಾ ಮತ ಎಣಿಕೆ ಕೇಂದ್ರದಲ್ಲಿ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

ಮಧ್ಯಾಹ್ನ 12 ಗಂಟೆ ವರೆಗೆ ಲಭ್ಯವಾದ ಫಲಿತಾಂಶದ ವಿವರ :

➤ ತಲಪಾಡಿಯಲ್ಲಿ ಮೊದಲ ಬಾರಿ ಎಸ್ ಡಿಪಿ ಖಾತೆ ತೆರದಿದೆ. 2ನೇ ವಾರ್ಡ್ ನಲ್ಲಿ ಝಾಹಿದ್, 3ನೇ ವಾರ್ಡ್ ಮಹಮ್ನದ್ ಶಾಫಿ ವಿಜಯ ಪತಾಕೆ ಹಾರಿಸಿದ್ದಾರೆ.

➤ ಚಾರ್ಮಾಡಿ ಗ್ರಾ.ಪಂ.ನಲ್ಲಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳಾದ ಆಯಿಷಾ ಬೇಗಂ ಮತ್ತು ಸಿದ್ದೀಕ್ ಯು.ಪಿ. ಗೆದ್ದಿದ್ದಾರೆ.

➤ ಕೆಮ್ರಾಲ್ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ನವೀನ್ ಸಾಲಿಯಾನ್, ಸುರೇಶ್ ಪಂಜ ವಿಜೇತರಾಗಿದ್ದಾರೆ.

➤ ಪಡುತೋನ್ಸೆ ಗ್ರಾಪಂ 2 ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಆಶಾ ಹಾಗೂ ನಿತ್ಯಾನಂದ ಕೆಮ್ಮಣ್ಣು ವಿಜಯಿಗಳಾಗಿದ್ದಾರೆ.

➤ ತೆಕ್ಕಾರು ಗ್ರಾಮ ಪಂಚಾಯತ್ ನಲ್ಲಿ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ. ಶೇಖರ್ ಪೂಜಾರಿ, ಹಕೀಂ ಗೆದ್ದವರು.

➤ ಉಡುಪಿಯ ಪಡುತೋನ್ಸೆ ಒಂದನೇ ವಾರ್ಡ್ ನಲ್ಲಿ ಧೀರೇಂದ್ರ ಮತ್ತು ಲೋಕೇಶ್ ಗೆಲುವು ಸಾಧಿಸಿದ್ದಾರೆ.

➤ ಸುಬ್ರಹ್ಮಣ್ಯದ 3ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ದಿನೇಶ್ ರಾವ್, ವಿದ್ಯಾ ಯಶೋಧ ಕೃಷ್ಣ ಗೆದ್ದಿದ್ದಾರೆ.

➤ ಶಿರಾಡಿಯಲ್ಲಿ ರಾಧಾ ಮತ್ತು ಲಕ್ಷಣ ಗೌಡ ಗೆದ್ದಿದ್ದಾರೆ.

➤ ವಾರಂಬಳ್ಳಿ ಒಂದನೇ ವಾರ್ಡ್ ನಲ್ಲಿ ಗುಲಾಬಿ, ಜ್ಯೋತಿ, ಮಾಧವ ಗೆಲುವು ಸಾಧಿಸಿದ್ದಾರೆ.

➤ ಕುಟ್ಟುಪಾಡಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಕಿರಣ್ ಗೋಗಟೆ, ಮಾಧವಿ ಗೆದ್ದಿದ್ದಾರೆ.

➤ ಕುರ್ಕಾಲು ಕಾಂಗ್ರೆಸ್ ಬೆಂಬಲಿತ ವಿನ್ಸೆಂಟ್ ರೋಡ್ರಿಗಸ್ ಮತ್ತು ಪ್ರಮೀಳಾ ಆಚಾರ್ಯ ಗೆದ್ದಿದ್ದಾರೆ.

➤ ಕೊಣಾಜೆ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಮುಹಮ್ಮದ್ ಇಕ್ಬಾಲ್, ಬಿಜೆಪಿ ಬೆಂಬಲಿತ ಗೀತಾ ಗೆದ್ದಿದ್ದಾರೆ.

➤ ಪಲಿಮಾರು ಗ್ರಾಮ ಪಂಚಾಯತ್ ನಲ್ಲಿ ಅಮಿತ ಮತ್ತು ಪ್ರವೀಣ್ ಕುಮಾರ್ ಗೆ ಗೆಲುವು

➤ ಅಂಬ್ಲಮೊಗರು ಗ್ರಾಮ ಪಂಚಾಯತ್ನ 1ನೇ ವಾರ್ಡ್ ನ ಮೂರು ಸ್ಥಾನಗಳಲ್ಲಿ 2 ಕಾಂಗ್ರೆಸ್, 1 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್ ಬೆಂಬಲಿತ ರವೀಂದ್ರ ಕುಕ್ಯಾನ್, ಮಮ್ತಾಝ್ ಬಿಜೆಪಿ ಬೆಂಬಲಿತ ಶ್ವೇತಾ ಗೆದ್ದಿದ್ದಾರೆ.

➤ ಪಲಿಮಾರು ನಂದಿಕೂರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಮಹೇಶ್ ಶೆಟ್ಟಿ, ರಶ್ಮಿ ಗೆಲುವು

➤ ಪಾವೂರು ಗ್ರಾಮ ಪಂಚಾಯತ್ ನಲ್ಲಿ  ಕಾಂಗ್ರೆಸ್ ಬೆಂಬಲಿತ ರಿಯಾಝ್ ಮತ್ತು ರತಿಕಲಾಗೆ ಜಯ. ಬಿಜೆಪಿ ಬೆಂಬಲಿತ ದಯಾನಂದ, ಮಮತಾಗೆ ಗೆಲುವು.

➤ ಮುಂಡಾಜೆ ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತ ಗಣೇಶ ಬಂಗೇರ, ಜಗದೀಶ್ ಗೆಲುವು. ನೆರಿಯಾ ವಾರ್ಡ್ 2ರಲ್ಲಿ ಬಿಜೆಪಿ ಬೆಂಬಲಿತ ಸಜಿತಾ, ಸಚಿನ್ ಗೆಲುವು.

➤ ಸುಲ್ಕೇರಿಯಲ್ಲಿ ಬಿಜೆಪಿ ಬೆಂಬಲಿತ ನಾರಾಯಣ ಪೂಜಾರಿ, ಪ್ರೇಮಾಗೆ ಗೆಲುವು

➤ ಪಡುಬಿದ್ರಿ ಕಂಚಿನಡ್ಕದಲ್ಲಿ ಕಾಂಗ್ರೆಸ್ ಬೆಂಬಲಿತರಾದ ಶಾಫಿ ಮತ್ತು ಜ್ಯೋತಿ‌ ಮೆನನ್ ಗೆಲುವು

➤ ಕಟಪಾಡಿ ಏಣಗುಡ್ಡೆ ಬಿಜೆಪಿ ಬೆಂಬಲಿತರಾದ ಜೋಸೆಫ್ ಮೊಂತೆರೋ ಮತ್ತು ಸುಗುಣಾ ಪೂಜಾರ್ತಿ ಗೆಲುವು

➤ ಶಿರಿಯಾರ್ ಒಂದನೇ ವಾರ್ಡ್ ನಲ್ಲಿ ಹರೀಶ್ ಕಾಂಚನ್, ಸಂಜು ಪೂಜಾರಿಗೆ ಗೆಲುವು

➤ ಅಮ್ಮುಂಜೆಯಲ್ಲಿ ರವೀಂದ್ರ ಸುವರ್ಣ, ಪ್ರಮೀಳಾ, ರೊನಾಲ್ಡ್ ಡಿಸೋಜ, ಕಾರ್ತಿಕ್ ಬಲ್ಳಾಳ್, ಭಾಗ್ಯರಾಜ್ ಗೆಲುವು

➤ ಹಂದಾಡಿ ಗ್ರಾಮಪಂಚಾಯತ್ ನ ಬೆಣ್ಣೆಕುದ್ರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ 144 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಶಿವಪೂಜಾರಿ ಅವರನ್ನು 34 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಪ್ರಸಾದ್ 37 ಮತ, ಪಕ್ಷೇತರವಾಗಿ ಸ್ಪರ್ಧಿಸಿದ್ದ ಶಿವಪೂಜಾರಿ 110 ಮತ ಪಡೆದಿದ್ದಾರೆ.

➤ ಪಡಂಗಡಿ ಗ್ರಾಮದ ಗಾಯತ್ರಿ ಹಾಗೂ ರಿಚರ್ಡ್ ಗೋವಿಯಸ್ ಗೆಲುವು ಸಾಧಿಸಿದ್ದಾರೆ.

➤ ಬ್ರಹ್ಮಾವರದ ಯಡ್ತಾಡಿ 2ನೇ ವಾರ್ಡ್ ನಲ್ಲಿ ಪಕ್ಷೇತರ ಲೋಕೇಶ್ ನಾಯಕ್ ಪ್ರತಿಸ್ಪರ್ಧಿ ರಾಮನಾಯಕ್ ಅವರನ್ನು 80 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

➤ ನೆಲ್ಯಾಡಿ ಗ್ರಾಮದ ಎರಡನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಇಕ್ಬಾಲ್ 283 ಮತಗಳು ಮತ್ತು ರೇಷ್ಮಾ 365 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ.

➤ ಯಡ್ತಾಡಿ 1 ನೇ ವಾರ್ಡ್ ನ ಬಿಜೆಪಿ ಬೆಂಬಲಿತ ಅಮೃತ ಪೂಜಾರಿ 321 ಮತಗಳನ್ನು ಪಡೆಯುವ ಮೂಲಕ, ಪ್ರತಿಸ್ಪರ್ಧಿ ರತ್ನಾಕರ್ ಪೂಜಾರಿ ಅವರ ವಿರುದ್ಧ 90 ಮತದಿಂದ ಗೆಲುವು ಸಾಧಿಸಿದ್ದಾರೆ.

➤ ಕುರ್ಕಾಲು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಪ್ರವೀಣ್ ಕುಮಾರ್, ಮಲ್ಲಿಕಾ ಗೆಲುವು ಸಾಧಿಸಿದ್ದಾರೆ.

➤ ಉಡುಪಿಯ ಮಣಿಪುರ – 2 ವಾರ್ಡ್ ನಲ್ಲಿ ಪ್ರಭಾತ್ ಕುಮಾರ್ ಗೆ 290 ಮತ ಅಂತರದಲ್ಲಿ ಗೆಲುವು.

➤ ಬಳ್ಪ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಚಂದ್ರಶೇಖರ್ ಮತ್ತು ಬಿಜೆಪಿ ಬೆಂಬಲಿತ ವಿನೋದ್ ಬೊಳ್ಮಲೆ ಗೆಲುವು ಸಾಧಿಸಿದ್ದಾರೆ.

➤ ಕಾರ್ಕಳ ತಾಲೂಕಿನಲ್ಲಿ ವಿವಿಧ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರು ವಿಜೇತರಾಗಿದ್ದಾರೆ. ದುರ್ಗಾ ಗ್ರಾ.ಪಂ.ನಲ್ಲಿ ರಾಜೇಶ್ ಗೋರೆ,  ಬೆಳ್ಮಣ್ ಗ್ರಾ.ಪಂ ನ ಸುರೇಶ್ ಪೂಜಾರಿ, ಬೋಳ ಗ್ರಾ.ಪಂ ನಲ್ಲಿ ಕಿರಣ್ ಶೆಟ್ಟಿ ವಿಜೇತರಾಗಿದ್ದಾರೆ.

➤ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನ ಕಾಂಗ್ರೆಸ್ ಬೆಂಬಲಿತರಾದ ಶ್ರೀರಾಮ ಪಕ್ಕಳ ಮತ್ತು ವತ್ಸಲಾ ಗೆಲುವು ಸಾಧಿಸಿದ್ದಾರೆ.

➤ ಕಾಪು ತಾಲೂಕು ಬೆಳಪು 3ನೇ ವಾರ್ಡ್ ನಲ್ಲಿ ಪ್ರಕಾಶ್ ರಾವ್ (486) ಪ್ರತಿಸ್ಪರ್ಧಿ ಸುರೇಶ್ ದೇವಾಡಿಗ (405) ವಿರುದ್ಧ ಗೆಲುವು.

➤ ಮೂಲ್ಕಿ ಹೋಬಳಿಯ ಬಳ್ಕುಂಜೆ ಗ್ರಾಮ ಪಂಚಾಯತಿಯ ಕರ್ನಿರೆ 1 ರಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರಶಾಂತ್ ಶೆಟ್ಟಿ (277) ಹಾಗೂ ವನಜ ಕೋಟ್ಯಾನ್ (251) ವಿಜೇತರಾಗಿದ್ದಾರೆ.

➤ ಹೆಜಮಾಡಿ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತೆ ಫರೀದಾ (351) ಅವರು ಆಶಾ (199) ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

➤ 80 ಬಡಗಬೆಟ್ಟು ವಾರ್ಡ್ ನಲ್ಲಿ ಗಣಪತಿ ನಾಯಕ್, ಲಕ್ಷ್ಮೀ ಶೆಟ್ಟಿ ವಿಜಯ ಸಾಧಿಸಿದ್ದಾರೆ.

➤ ಬ್ರಹ್ಮಾವರದ 20 ಆರೂರು 4ನೇ ವಾರ್ಡ್ ಗಣೇಶ್ ತಮ್ಮ ಪ್ರತಿಸ್ಪರ್ಧಿ ವಿರುದ್ದ 247 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ.

➤ಮಂಗಳೂರಿನ ತಲಪಾಡಿ 3ನೇ ವಾರ್ಡ್ ನಲ್ಲಿ ಎಸ್ ಡಿಪಿಐ ಬೆಂಬಲಿತರಾದ ಇಸ್ಮಾಯಿಲ್ ಶಾಫಿ (430 ಮತ), ಸುಮಾಯ್ಯ (450 ಮತ) ಗಳಿಂದ ಜಯ ಸಾಧಿಸಿದ್ದಾರೆ.

➤ ಮಜೂರು ಗ್ರಾ.ಪಂ‌. ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲಿತರಾದ ಮಧುಸೂಧನ್ ಸಾಲಿಯಾನ್ ಮತ್ತು ವನಿತಾ ಗೆಲುವು

➤ ಎಲ್ಲೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಾದ ರವಿರಾಜ್ ರಾವ್ (377) ಮತ್ತು ಉಷಾ ಪೂಜಾರಿ (264) ಅವರಿಗೆ ಗೆಲುವು.

➤ ಕುರ್ಕಾಲು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಾದ ಪ್ರವೀಣ್ ಕುರ್ಕಾಲು ಮತ್ತು ಮಲ್ಲಿಕಾ ವಿಜಯ ಸಾಧಿಸಿದ್ದಾರೆ.

➤ ಪಡುಬಿದ್ರಿ ಗ್ರಾ.ಪಂ. ಪಾದೆಬೆಟ್ಟು ವಾರ್ಡ್ ಬಿಜೆಪಿ ಬೆಂಬಲಿತರಾದ ಶೋಭಾ ಜಿ. ಶೆಟ್ಟಿ ಮತ್ತು ಸಂದೇಶ ಶೆಟ್ಟಿಗೆ ಗೆಲುವಾಗಿದೆ.

➤ ಅರಂತೋಡು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟರಮಣ 395 ಮತ ಗಳಿಸಿ ವಿಜಯಿಯಾಗಿದ್ದಾರೆ. ಇನ್ನೋರ್ವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಷಾ ಕೂಡ ಗೆದ್ದಿದ್ದಾರೆ.

 ಗೋಳ್ತಮಜಲು ಗ್ರಾಮ ಪಂಚಾಯತ್: ಇಬ್ಬರು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಗೋಳ್ತಮಜಲು ಗ್ರಾಮ ಪಂಚಾಯತ್: ಇಬ್ಬರು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳಿಗೆ ಜಯ


 ಗೋಳ್ತಮಜಲು ಗ್ರಾಮ ಪಂಚಾಯತ್: ಇಬ್ಬರು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ: ಕಲ್ಲಡ್ಕದ ಗೋಳ್ತಮಜಲು ಗ್ರಾಮ ಪಂಚಾಯತ್ ನಲ್ಲಿ ಇಬ್ಬರು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ತಿಳಿದು ಬಂದಿದೆ.

ಗೋಳ್ತಮಜಲು ಗ್ರಾಮ ಪಂಚಾಯತ್ ನ  ಮುರೈಬೈಲು ವಾರ್ಡ್ ನ ಅಭ್ಯರ್ಥಿಗಳಾದ ಮುಹಮ್ಮದ್ ಯೂಸುಫ್ ಮತ್ತು ಸುಮಯ್ಯ ಗೆಲುವು ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.

 ಸರ್ಕಾರ ಮತ್ತು ರೈತರ ಮಧ್ಯೆ 6ನೇ ಸುತ್ತಿನ ಮಾತುಕತೆ: ಕೊನೆಯಾಗಲಿದೆಯೇ ಇಂದು ರೈತರ ಪ್ರತಿಭಟನೆ?

ಸರ್ಕಾರ ಮತ್ತು ರೈತರ ಮಧ್ಯೆ 6ನೇ ಸುತ್ತಿನ ಮಾತುಕತೆ: ಕೊನೆಯಾಗಲಿದೆಯೇ ಇಂದು ರೈತರ ಪ್ರತಿಭಟನೆ?


 ಸರ್ಕಾರ ಮತ್ತು ರೈತರ ಮಧ್ಯೆ 6ನೇ ಸುತ್ತಿನ ಮಾತುಕತೆ: ಕೊನೆಯಾಗಲಿದೆಯೇ ಇಂದು ರೈತರ ಪ್ರತಿಭಟನೆ?

ನವದೆಹಲಿ: ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ಮಧ್ಯೆ ಬುಧವಾರ 6ನೇ ಸುತ್ತಿನ ಮಾತುಕತೆ ನಡೆಯಲಿದೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಇಂದು ಮಾತುಕತೆಯನ್ನು ಮುಕ್ತ ಮನಸ್ಸಿನಿಂದ ನಡೆಸಲಾಗುತ್ತದೆ. ರೈತರ ಪ್ರತಿಭಟನೆ ಇಂದು ಕೊನೆಯಾಗುವ ಆಶಾಭಾವನೆಯಲ್ಲಿ ಸರ್ಕಾರವಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವ ಸೊಮ್ ಪ್ರಕಾಶ್ ಹೇಳಿದ್ದಾರೆ.

ಆದರೆ ರೈತರಿಗೆ ಮಾತ್ರ ಇಂದಿನ ಮಾತುಕತೆ ಫಲಪ್ರದವಾಗಬಹುದು ಎಂಬ ಆಶಾವಾದವಿಲ್ಲ. ಈಗಾಗಲೇ 5 ಸುತ್ತು ಮಾತುಕತೆ ಮುಗಿದಿದೆ. ಇಂದು ಕೂಡ ಪರಿಹಾರ ಸಿಗಬಹುದು ಎಂಬ ಭಾವನೆ ನಮಗಿಲ್ಲ. ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಜಂಟಿ ಕಾರ್ಯದರ್ಶಿ ಸುಖ್ ವಿಂದರ್ ಸಿಂಗ್ ಸಬ್ರ ಹೇಳಿದ್ದಾರೆ.

ಇನ್ನು ಭಾರತೀಯ ಕಿಸಾನ್ ಸಂಘಟನೆಯ ರಾಕೇಶ್ ಟಿಕೈಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಶಕ್ತಿಯುತವಾದ ವಿರೋಧ ಪಕ್ಷವಿರಬೇಕು. ಅವರಿಗೆ ಸರ್ಕಾರ ಹೆದರಬೇಕು, ಆದರೆ ನಮ್ಮ ದೇಶದಲ್ಲಿ ಇಂದು ಸರ್ಕಾರಕ್ಕೆ ವಿರುದ್ಧವಾದ ಶಕ್ತಿಶಾಲಿ ಪ್ರತಿಪಕ್ಷವಿಲ್ಲ. ಇದರಿಂದಾಗಿಯೇ ಇಂದು ರೈತರು ಬೀದಿಗೆ ಬಂದಿದ್ದಾರೆ. ವಿರೋಧ ಪಕ್ಷದವರು ಹರಿದ ಟೆಂಟ್ ಗಳಲ್ಲಿ ಕುಳಿತು ರಸ್ತೆಗಳಲ್ಲಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಹೇಳಿದರು.

ನಿನ್ನೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ರೈತ ಪ್ರತಿನಿಧಿಗಳು ಇಂದಿನ ಮಾತುಕತೆ ವೇಳೆ ಕ್ರಾಂತಿಕಾರಿ ಪರಿಹಾರಗಳನ್ನು ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ತಿಳಿಸಿದ್ದಾರೆ.

 ಗ್ರಾಮಪಂಚಾಯಿತಿ ಚುನಾವಣೆ  : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಮುನ್ನಡೆ

ಗ್ರಾಮಪಂಚಾಯಿತಿ ಚುನಾವಣೆ : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಮುನ್ನಡೆ

 ಗ್ರಾಮಪಂಚಾಯಿತಿ ಚುನಾವಣೆ  : ಬಿಜೆಪಿ ಬೆಂಬಲಿತ

ಅಭ್ಯರ್ಥಿಗಳಿಗೆ ಭರ್ಜರಿ ಮುನ್ನಡೆ

ಬೆಂಗಳೂರು : ಇಂದು ಗ್ರಾಮಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಶುರುವಾಗಿದೆ.

ಸದ್ಯದ ಮಾಹಿತಿ ಪ್ರಕಾರ ರಾಜ್ಯದ 5,728 ಒಟ್ಟು ಗ್ರಾಮಪಂಚಾಯಿತಿಗಳ ಪೈಕಿ 3,427 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 1,583 ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 599, ಇತರೆ 448 ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ 5,728 ಗ್ರಾಮಪಂಚಾಯಿತಿಗಳಿಗೆ ಈಗಾಗಲೇ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಶುರುವಾಗಿದ್ದು, ತಡರಾತ್ರಿಯವರೆಗೆ ವೇಳೆ ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ.

 ಧರ್ಮೇಗೌಡರ ಆತ್ಮಹತ್ಯೆ ಇಂದಿನ ಕಲುಷಿತ, ತತ್ವರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ: HDK

ಧರ್ಮೇಗೌಡರ ಆತ್ಮಹತ್ಯೆ ಇಂದಿನ ಕಲುಷಿತ, ತತ್ವರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ: HDK


ಧರ್ಮೇಗೌಡರ ಆತ್ಮಹತ್ಯೆ ಇಂದಿನ ಕಲುಷಿತ, ತತ್ವರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ: HDK

ಬೆಂಗಳೂರು: ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡರ ಆತ್ಮಹತ್ಯೆಯು ಇವತ್ತಿನ ಕಲುಷಿತ, ತತ್ವ ರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಧರ್ಮೇಗೌಡರ ಆತ್ಮಹತ್ಯೆಯು ಇವತ್ತಿನ ಕಲುಷಿತ, ತತ್ವ ರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ. ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್‌ನ ಜಾತ್ಯತೀತತೆ ಪರೀಕ್ಷೆ ಮಾಡಲಾಯಿತು. ಆದರೆ, ಈ ಪರೀಕ್ಷೆಯಲ್ಲಿ ಧರ್ಮೇಗೌಡ ಎಂಬ ಹೃದಯವಂತನ ಬಲಿಯಾಗಿದೆ. ಪರೀಕ್ಷೆ ಮಾಡಿದವರಿಗೆ ಈಗ ಉತ್ತರ ಸಿಕ್ಕಿರಬಹುದು. ಫಲಿತಾಂಶದಿಂದಲಾದರೂ ಅವರ ಆತ್ಮಾವಲೋಕನ ಆಗಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ನಿರೀಕ್ಷೆ ಮಾಡಿರಲಿಲ್ಲ..' ಧರ್ಮೇಗೌಡ ನಿಧನದ ಬಗ್ಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹೇಳಿಕೆ

ಎಸ್.ಎಲ್. ಧರ್ಮೇಗೌಡ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.


 ಕಚ್ಚಾ ತೈಲ ದರ ಸತತ ಮೂರನೇ ಬಾರಿ ಏರಿಕೆ

ಕಚ್ಚಾ ತೈಲ ದರ ಸತತ ಮೂರನೇ ಬಾರಿ ಏರಿಕೆ


ಕಚ್ಚಾ ತೈಲ ದರ ಸತತ ಮೂರನೇ ಬಾರಿ ಏರಿಕೆ

ನವದೆಹಲಿ, ಡಿಸೆಂಬರ್ 29: ಬ್ರಿಟನ್‌ನಲ್ಲಿ ಹೊಸ ಕೊರೊನಾವೈರಸ್ ಕಾಣಿಸಿಕೊಂಡ ಬಳಿಕ ಶೇಕಡಾ 3ರಷ್ಟು ಕುಸಿತ ಕಂಡಿದ್ದ ಕಚ್ಚಾ ತೈಲ ದರವು, ಸತತವಾಗಿ ಮೂರನೇ ದಿನ ಏರಿಕೆ ದಾಖಲಿಸಿದೆ.

ಅಮೆರಿಕಾದಲ್ಲಿ ಕೋವಿಡ್-19 ಸಂಬಂಧಿತ ನೆರವು ಪಾವತಿಗಳ ವಿಸ್ತರಣೆ ಜೊತೆಗೆ ಯೂರೋಪ್ ಮತ್ತು ಬ್ರಿಟನ್‌ ನಡುವೆ ಬ್ರೆಕ್ಸಿಟ್ ಒಪ್ಪಂದದಿಂದಾಗಿ ಇಂಧನ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿಂದಾಗಿ ನಾಲ್ಕು ಅವಧಿಗಳಲ್ಲಿ ಮೂರನೇ ಬಾರಿಗೆ ತೈಲ ದರ ಏರಿಕೆ ಕಂಡಿದೆ.

ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೆಟ್ (ಡಬ್ಲ್ಯುಟಿಐ) ಕಚ್ಚಾ ಭವಿಷ್ಯವು ಬ್ಯಾರೆಲ್‌ಗೆ 34 ಸೆಂಟ್ಸ್ ಅಥವಾ ಶೇಕಡಾ 0.7ರಷ್ಟು ಹೆಚ್ಚಾಗಿ 47.96 ಡಾಲರ್‌ಗೆ ತಲುಪಿದೆ.

ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಾಂಕ್ರಾಮಿಕ ಪರಿಹಾರ ಪಾವತಿಗಳನ್ನು 600 ಡಾಲರ್‌ನಿಂದ 2,000 ಕ್ಕೆ ಏರಿಸಲು ಮತ ಚಲಾಯಿಸಿದ್ದರಿಂದ, ಜಪಾನಿನ ಷೇರುಗಳು 29 ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದವು.

ಅಮೆರಿಕಾದ ಕಚ್ಚಾ ತೈಲ ದಾಸ್ತಾನುಗಳು ಕಳೆದ ವಾರ ಕುಸಿಯುವ ನಿರೀಕ್ಷೆಯಿತ್ತು. ಆದರೆ ಸಂಸ್ಕರಿಸಿದ ಉತ್ಪನ್ನಗಳ ದಾಸ್ತಾನು ಏರಿಕೆಯಾಗುವ ಸಾಧ್ಯತೆಯಿದೆ, ಎಂದು ಈ ವಾರದ ದತ್ತಾಂಶಕ್ಕಿಂತ ಮುಂಚಿತವಾಗಿ ರಾಯಿಟರ್ಸ್ ಸಮೀಕ್ಷೆಯು ಸೋಮವಾರ ತೋರಿಸಿದೆ. ರಾಯಿಟರ್ಸ್ ಸಮೀಕ್ಷೆ ನಡೆಸಿದ ಐದು ವಿಶ್ಲೇಷಕರ ಅಂದಾಜಿನ ಪ್ರಕಾರ, ಕಚ್ಚಾ ದಾಸ್ತಾನು ಡಿಸೆಂಬರ್ 25 ಕ್ಕೆ ವಾರದಲ್ಲಿ 2.1 ಮಿಲಿಯನ್ ಬ್ಯಾರೆಲ್‌ಗಳಷ್ಟು ಕುಸಿದಿದೆ.

ಬ್ರಿಟನ್‌ನ ಹೊಸ ವೈರಸ್ , ಯೂರೋಪಿಯನ್ ರಾಷ್ಟ್ರಗಳು ಸೇರಿದಂತೆ ಏಷ್ಯನ್ ದೇಶಗಳಲ್ಲಿ ಹೆಚ್ಚು ಆತಂಕವನ್ನು ಸೃಷ್ಟಿಸಿದ್ದು, ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರುತ್ತಿದೆ.


 ಇಂದಿನಿಂದ ಶಬರಿಮಲೆ ದೇವಾಲಯ ಓಪನ್ : ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶ!

ಇಂದಿನಿಂದ ಶಬರಿಮಲೆ ದೇವಾಲಯ ಓಪನ್ : ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶ!


ಇಂದಿನಿಂದ ಶಬರಿಮಲೆ ದೇವಾಲಯ ಓಪನ್ : ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶ!

ಶಬರಿಮಲೆ : ಇಂದಿನಿಂದ ಶಬರಿಮಲೆ ದೇಗುಲ ಓಪನ್ ಆಗಲಿದ್ದು, ಜನವರಿ 19 ರವರೆಗೂ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಕರವಿಳಕ್ಕು ಅಂಗವಾಗಿ ಇಂದಿನಿಂದ ಶಬರಿಮಲೆ ದೇಗುಲ ಓಪನ್ ಆಗಲಿದ್ದು, ಪ್ರತಿದಿನ 5 ಸಾವಿರ ಭಕ್ತರು ದರ್ಶನ ಪಡೆಯಲು ಅನುಮತಿ ನೀಡಲಾಗಿದೆ. ಜೊತೆಗೆ ಆನ್ ಲೈನ್ ನಲ್ಲೂ ಭಕ್ತರು ದೇವರ ದರ್ಶನ ಪಡೆಯಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಇನ್ನು ದೇವಸ್ಥಾನಕ್ಕೆ ಬರುವ ಭಕ್ತರು ಕೊರೊನಾ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿದ್ದು, ರಿಪೋರ್ಟ್ ಇಲ್ಲದ ಭಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.


 ಅರುಣಾಚಲ ಪ್ರದೇಶದಲ್ಲಿ ಹೊಸ ಹಾವು ಪತ್ತೆ

ಅರುಣಾಚಲ ಪ್ರದೇಶದಲ್ಲಿ ಹೊಸ ಹಾವು ಪತ್ತೆ


ಅರುಣಾಚಲ ಪ್ರದೇಶದಲ್ಲಿ ಹೊಸ ಹಾವು ಪತ್ತೆ

ಮುಂಬೈ: 'ಪರಿಯಾಸ್‌ ಕಡುರೈ' ಹೆಸರಿನ ಬಸವನ ಹುಳುಗಳನ್ನು ತಿನ್ನುವ, ವಿಷರಹಿತ ಹೊಸ ಬಗೆಯ ಹಾವೊಂದನ್ನು ಅರುಣಾಚಲ ಪ್ರದೇಶದಲ್ಲಿ ಸಂಶೋಧಕರ ತಂಡವೊಂದು ಪತ್ತೆಹಚ್ಚಿದೆ.

2019 ಜುಲೈನಲ್ಲಿ ಸಂಶೋಧಕರು ಕಮಲಂಗ್‌ ಹುಲಿ ಸಂರಕ್ಷಿತಾರಣ್ಯದ ದಟ್ಟ ಕಾಡಿನೊಳಗೆ ಕಾರ್ಯ ಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಹಾವನ್ನು ಪತ್ತೆಹಚ್ಚಿದ್ದಾರೆ. ಹಿಮಾಲಯದಲ್ಲಿ ಜೀವವೈವಿಧ್ಯದ ಸಂರಕ್ಷಣೆಗಾಗಿ, ನ್ಯಾಷನಲ್‌ ಜಿಯೊಗ್ರಾಫಿಕ್‌ ಛಾಯಾಚಿತ್ರಗಾರ, ವನ್ಯಜೀವಿ ಚಿತ್ರನಿರ್ಮಾಪಕ ಸಂದೇಶ್‌ ಕಡೂರ್‌ ಅವರ ಕೊಡುಗೆಯನ್ನು ಪರಿಗಣಿಸಿ ಹೊಸ ವರ್ಗದ ಹಾವಿಗೆ ಹೆಸರು ಇಡಲಾಗಿದೆ.

ಈ ವರ್ಗದ ಹಾವುಗಳನ್ನು 'ಸ್ನೈಲ್‌ ಈಟಿಂಗ್‌ ಸ್ನೇಕ್ಸ್‌' ಎಂದು ಕರೆಯುತ್ತಾರೆ. ಏಕೆಂದರೆ, ಇವುಗಳು ಬಸವನ ಹುಳುವನ್ನು ತಿನ್ನುತ್ತವೆ. ಹೊಸ ವರ್ಗದ ಹಾವು, ಸಾಮಾನ್ಯವಾಗಿ ಕಮಲಂಗ್‌ ಹುಲಿ ಸಂರಕ್ಷಿತಾರಣ್ಯದ ಸುತ್ತಮುತ್ತಲೇ ಕಾಣಿಸಿಕೊಳ್ಳುತ್ತವೆ ಎಂದು ಅಂತರರಾಷ್ಟ್ರೀಯ ವಿಜ್ಞಾನ ನಿಯತಕಾಲಿಕ 'ಯುರೊಪಿಯನ್‌ ಜರ್ನಲ್‌ ಆಫ್‌ ಟ್ಯಾಕ್ಸೊನೊಮಿ'ಯಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ಹೊಸ ವರ್ಗದ ಹಾವಿಗೂ, ಇದೇ ಜಾತಿಗೆ ಸೇರಿದ ಹಾವಿಗೂ ವ್ಯತ್ಯಾಸ ಹೇಳುವುದು ಕಷ್ಟ. ಆದರೆ, ಡಿಎನ್‌ಎ ಮಾದರಿ, ಹಾವಿನ ತಲೆಯ ಆಕೃತಿಯಲ್ಲಿ ವ್ಯತ್ಯಾಸವಿದೆ' ಎಂದು ಹೇಳಲಾಗಿದೆ. 'ಈಶಾನ್ಯ ಭಾರತದ ಕಾಡುಗಳಲ್ಲಿ ಇರುವ ಹಲವು ಜೀವವೈವಿಧ್ಯವನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ. ರಸ್ತೆ ವಿಸ್ತರಣೆ, ಅಣೆಕಟ್ಟುಗಳ ನಿರ್ಮಾಣ ಹಾಗೂ ಜಲವಿದ್ಯುತ್‌ ಘಟಕಗಳ ನಿರ್ಮಾಣವು ಅರುಣಾಚಲ ಪ್ರದೇಶದಾದ್ಯಂತ ಕಾಡು ಹಾಗೂ ಜೀವವೈವಿಧ್ಯದ ಮೇಲೆ ಪರಿಣಾಮ ಬೀರುತ್ತಿವೆ' ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


 ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನೇ ಅಟ್ಟಾಡಿಸಿದ ರೈತರು!

ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನೇ ಅಟ್ಟಾಡಿಸಿದ ರೈತರು!


ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನೇ ಅಟ್ಟಾಡಿಸಿದ ರೈತರು!

ಕೇಂದ್ರ ಜಾರಿಗೆ ತಂದಿರುವ 3 ವಿವಾದಿತ ಕೃಷಿ ಮಸೂದೆ ವಾಪಸ್ ಪಡೆಯಲು ಒತ್ತಾಯಿಸಿ ರಾಜ್ಯಪಾಲರ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡಸಿದ್ದು, ಪ್ರತಿಯಾಗಿ ರೈತರು ತಿರುಗಿಬಿದ್ದು, ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮಂಗಳವಾರ ಸೇರಿದ್ದ ಸಾವಿರಾರು ಸಂಖ್ಯೆಯ ರೈತರು ಗಾಂಧಿ ಮೈದಾನ್ ನಿಂದ ದಕ್ ಬಂಗ್ಲೊ ವೃತ್ತದ ಮೂಲಕ ಮೆರವಣಿಗೆ ಆಯೋಜಿಸಿದ್ದರು. ಆದರೆ ಪೊಲೀಸರು ದಕ್ ಬಂಗ್ಲೊ ವೃತ್ತದ ಬಳಿ ಭಾರೀ ಪ್ರಮಾಣದಲ್ಲಿ ಬ್ಯಾರಿಕೇಡ್ ಹಾಕಿ ರೈತರ ಪ್ರತಿಭಟನೆಗೆ ತಡೆಯೊಡ್ಡಿದರು. ಇದರಿಂದ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಾಮಕಿ ನಡೆಯಿತು.

ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಘರ್ಷಣೆಗೆ ತಿರುಗಿದ್ದು, ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದರು. ಇದರಿಂದ ಕೆರಳಿದ ರೈತರು ತಿರುಗಿಬಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋಗಿದ್ದಾರೆ.

ರೈತರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರಿಂದ ರಾಜ್ಯಪಾಲರ ಭವನದ ಮುಂದೆ ನುಕುನುಗ್ಗಲು ಆಗಿ ಕಾಲ್ತುಳಿತದಂತ ಅಪಾಯ ಸಂಭವಿಸಬಹುದು ಎಂಬ ಕಾರಣಕ್ಕೆ ಪ್ರತಿಭಟನಾ ಮೆರವಣಿಗೆ ನಿಲ್ಲಿಸಿ ಕೆಲವರು ಮಾತ್ರ ಹೋಗಲು ಹೇಳಿದೆವು. ಆದರೆ ರೈತರು ಒಪ್ಪದೇ ಇದ್ದಿದ್ದರಿಂದ ಪರಿಸ್ಥಿತಿ ಕೈ ಮೀರಿ ಹೋಯಿತು ಎಂದು ಪೊಲೀಸರು ವಿವರಣೆ ನೀಡಿದ್ದಾರೆ.


 ಗ್ರಾಮ ಪಂಚಾಯತ್ ಚುನಾವಣೆ 2020 ಮತ ಎಣಿಕೆಗೆ ಸರ್ವ ಸಿದ್ಧತೆ

ಗ್ರಾಮ ಪಂಚಾಯತ್ ಚುನಾವಣೆ 2020 ಮತ ಎಣಿಕೆಗೆ ಸರ್ವ ಸಿದ್ಧತೆ


ಗ್ರಾಮ ಪಂಚಾಯತ್ ಚುನಾವಣೆ 2020 ಮತ ಎಣಿಕೆಗೆ ಸರ್ವ ಸಿದ್ಧತೆ

ಗದಗ:   ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಮೊದಲನೇ ಹಾಗೂ ಎರಡನೇ ಹಂತದ ಮತದಾನವು  ಜರುಗಿದ್ದು ಡಿ.30 ರಂದು ಗದಗ ಜಿಲ್ಲೆಯ 7 ತಾಲೂಕಾ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸರ್ವ ಸಿದ್ದತೆ ಮಾಡಲಾಗಿದೆ.

ಮೇಜುಗಳ ವ್ಯವಸ್ಥೆ : ಗದಗ ತಾಲೂಕಿನ 150 ಕ್ಷೇತ್ರಗಳ ಮತ ಎಣಿಕೆಗಾಗಿ 53 ಮೇಜು  , ಶಿರಹಟ್ಟಿ ತಾಲೂಕಿನ 75 ಕ್ಷೇತ್ರಗಳ ಮತ ಎಣಿಕೆಗಾಗಿ 28 ಮೇಜು ,  ಲಕ್ಷ್ಮೇಶ್ವರ ತಾಲೂಕಿನ 66 ಮತ ಎಣಿಕೆಗಾಗಿ 25 ಮೇಜು, ಮುಂಡರಗಿ ತಾಲೂಕಿನ 101 ಕ್ಷೇತ್ರಗಳ ಮತ ಎಣಿಕೆಗಾಗಿ 38 ಮೇಜು , ರೋಣ ತಾಲೂಕಿನ 120 ಕ್ಷೇತ್ರಗಳ ಮತ ಎಣಿಕೆಗಾಗಿ  44 ಮೇಜು , ನರಗುಂದ ತಾಲೂಕಿನ 56 ಕೇತ್ರಗಳ ಮತ ಎಣಿಕೆಗಾಗಿ 21 ಮೇಜು , ಗಜೇಂದ್ರಗಡ ತಾಲೂಕಿನ 61 ಕ್ಷೇತ್ರಗಳಿಗೆ 23 ಮೇಜುಗಳ ವ್ಯವಸ್ಥೆ ಮಾಡಲಾಗಿದೆ.  ಒಟ್ಟಾರೆಯಾಗಿ ಗದಗ ಜಿಲ್ಲೆಯ 629 ಕ್ಷೇತ್ರಗಳ ಮತ ಎಣಿಕೆಗಾಗಿ 234 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕಾರ್ಯದಲ್ಲಿ ಕನಿಷ್ಟ 3 , ಗರಿಷ್ಟ 5 ಸುತ್ತುಗಳಿರಲಿವೆ.

       ಮತ ಎಣಿಕೆಯು ನಾಳೆ ದಿ.30ರಂದು ಬೆ 8 ರಿಂದ ಪ್ರಾರಂಭವಾಗಲಿದ್ದು ಎಣಿಕೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವ ತಾಲೂಕುಗಳಿಗೆ ನೇಮಕಾತಿ ಮಾಡಲಾಗಿರುತ್ತದೆ.  ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ ಹಾಗೂ ಇಬ್ಬರು ಎಣಿಕೆ ಸಹಾಯಕರು ಇರುತ್ತಾರೆ.  ಪ್ರತಿ ಎಣಿಕೆ ಕೊಠಡಿಗೆ ಒಬ್ಬ ಗ್ರೂಪ್ ಡಿ ನೌಕರರನ್ನು ನೇಮಿಸಲಾಗಿರುತ್ತದೆ.  


 ಬ್ರಿಟನ್ ನಿಂದ ಬಂದ ಮೇಲೆ ಹುಡುಕೋದಲ್ಲ, ಬರೋ ಮೊದಲೇ ಪರೀಕ್ಷೆ ಮಾಡಿ : ಸಿದ್ದರಾಮಯ್ಯ

ಬ್ರಿಟನ್ ನಿಂದ ಬಂದ ಮೇಲೆ ಹುಡುಕೋದಲ್ಲ, ಬರೋ ಮೊದಲೇ ಪರೀಕ್ಷೆ ಮಾಡಿ : ಸಿದ್ದರಾಮಯ್ಯ


ಬ್ರಿಟನ್ ನಿಂದ ಬಂದ ಮೇಲೆ ಹುಡುಕೋದಲ್ಲ, ಬರೋ ಮೊದಲೇ ಪರೀಕ್ಷೆ ಮಾಡಿ : ಸಿದ್ದರಾಮಯ್ಯ

ಬೆಂಗಳೂರು, ಡಿ.29- ಗೋಹತ್ಯೆ ನಿಷೇಧ ಕಾನೂನಿನಿಂದ ಹೈನುಗಾರಿಕೆ, ಕೃಷಿ ಮತ್ತು ಚರ್ಮೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬಿಜೆಪಿ ಸರ್ಕಾರ ಹಿಂದೆ-ಮುಂದೆ ಯೋಚಿಸದೆ ರಾಜಕಾರಣಕ್ಕಾಗಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕಾನೂನು ರೂಪಿಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತಂದಿದ್ದಾರೆ. ವಿಧಾನಸಭೆ, ಪರಿಷತ್‍ನಲ್ಲಿ ಚರ್ಚೆ ಮಾಡದೇ ಆತುರವಾಗಿ ತಂದಿದ್ದಾರೆ. ಅಂತ ಅಗತ್ಯ ಇರಲಿಲ್ಲ. ಸಾವಿರಾರು ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿವೆ. ಈ ಕಾಯ್ದೆಯಿಂದ ರೈತ ಸಮುದಾಯಕ್ಕೆ, ಕೃಷಿಗೆ ಹೊಡೆತ ಬೀಳಲಿದೆ. ಹಾಲು ಉತ್ಪಾದನೆ ಕುಸಿತವಾಗಲಿದೆ ಎಂದರು.

ರಾಜ್ಯದಲ್ಲಿ 42 ಲಕ್ಷ ಕುಟುಂಬಗಳು ಹೈನುಗಾರಿಕೆಯಲ್ಲಿ ಭಾಗಿಯಾಗಿವೆ. ಕೃಷಿ ಕ್ಷೇತ್ರ,ಚರ್ಮ ಉದ್ಯಮದ ಮೇಲೆ ಪರಿಣಾಮ ಬೀಳಲಿದೆ. ನಾವು ಹಾಕೋ ಚಪ್ಪಲಿಗಳು, ಹೆಣ್ಣುಮಕ್ಕಳ ವ್ಯಾನಿಟಿ ಬ್ಯಾಗ್ ಗಳು ಚರ್ಮದಿಂದ ಆಗೋದು. ಇದರಿಂದ ತೊಂದರೆ ಆಗಲಿದೆ.ಲಿಡ್ಕರ್ ಮುಚ್ಚಬೇಕಾಗುತ್ತದೆ ಎಂದು ತಿಳಿಸಿದರು. ಕೊರೊನಾ ರೂಪಾಂತರ ಪತ್ತೆ ವಿಚಾರದಲ್ಲಿ ಸರ್ಕಾರ ಜನರಲ್ಲಿ ಇರೋ ಆತಂಕ ದೂರ ಮಾಡಬೇಕು. ಬ್ರಿಟನ್ ನಿಂದ ಬಂದ ಮೇಲೆ ಹುಡುಕೋದಲ್ಲ. ಬರೋ ಮೊದಲೇ ವಿಮಾನ ನಿಲ್ದಾಣ ದಲ್ಲಿ ಪರೀಕ್ಷೆ ಮಾಡಿ , ಕ್ವಾರಂಟೈನ್ ಮಾಡಬೇಕಿತ್ತು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಯಾವುದೇ ಹೇಳಿಕೆಗಳಿಗೆ ರಿಯಾಕ್ಟ್ ಮಾಡುವುದಿಲ್ಲ. ಅವರ ಸುಳ್ಳು ಹೇಳಿಕೆಗಳಿಗೆ ನಾನ್ಯಾಕೆ ರಿಯಾಕ್ಟ್ ಮಾಡಲಿ. ಅವರು ದುರುದ್ದೇಶಪೂರಿತವಾಗಿ ಮಾತನಾಡುತ್ತಾರೆ. ಅದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು. ಧರ್ಮೇಗೌಡ ಅವರನ್ನು ಬಲವಂತವಾಗಿ ಬಿಜೆಪಿ ಮತ್ತು ಜೆಡಿಎಸ್ ನವರು ಸಭಾಪತಿ ಪೀಠದಲ್ಲಿ ಕೂರಿಸಿದ್ದರು. ಅದು ಅವರಿಗೆ ಇಷ್ಟ ಇರಲಿಲ್ಲ ಎಂದು ಹೇಳಿದರು.

ಧರ್ಮೇಗೌಡ ನನ್ನ ಆಪ್ತ ಸ್ನೇಹಿತರಾಗಿದ್ದರು. ಅವರ ತಂದೆಯವರ ಕಾಲದಿಂದಲೂ ಕುಟುಂಬದ ಪರಿಚಯ ಇತ್ತು. ತಳಮಟ್ಟದಿಂದ ರಾಜಕಾರಣ ಮಾಡಿಕೊಂಡು ಬಂದವರು. ಸಹಕಾರ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು ಅವರು ಂದರು.

ಧರ್ಮೇಗೌಡರ ತಂದೆ ಎಸ್.ಆರ್.ಲಕ್ಷ್ಮಯ್ಯ ಅವರೂ ನನ್ನ ಆಪ್ತ ಸ್ನೇಹಿತರಾಗಿದ್ದರು. ರೈತಪರ , ಜನಪರ ಕಾಳಜಿಯುಳ್ಳ ವ್ಯಕ್ತಿ ಅಗಲಿರೋದು ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.