Sunday, 22 November 2020

SYS ಕಬಕ ಬ್ರಾಂಚ್ ಮಾಸಿಕ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಮತ್ತು ತಾಜುಲ್ ಉಲಮ ಮೌಲಿದ್ ಕಬಕ ಸುನ್ನಿ ಸೆಂಟರಿನಲ್ಲಿ ನಡೆಯಿತು


SYS ಕಬಕ ಬ್ರಾಂಚ್ ಮಾಸಿಕ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಮತ್ತು ತಾಜುಲ್ ಉಲಮ ಮೌಲಿದ್ ಕಬಕ ಸುನ್ನಿ ಸೆಂಟರಿನಲ್ಲಿ ನಡೆಯಿತು

ಪುತ್ತೂರು: SYS ಕಬಕ ಬ್ರಾಂಚ್ ನಡೆಸುವ ಮಾಸಿಕ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಮತ್ತು ತಾಜುಲ್ ಉಲಮ ಮೌಲಿದ್ ನವಂಬರ್ 21 ರಂದು ರಾತ್ರಿ ಮಗ್ರಿಬ್ ನಮಾಜಿನ ಬಳಿಕ ಕಬಕ ಸುನ್ನಿ ಸೆಂಟರಿನಲ್ಲಿ ನಡೆಯಿತು. ಅಬ್ದುಲ್ಲಾ ಉಸ್ತಾದ್ ಬನ್ನೂರ್ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸಿಗೆ ನೇತೃತ್ವ ಕೊಟ್ಟರು. ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲ್  ಕಿಲ್ಲೂರು (ಪ್ರಿನ್ಸಿಪಾಲ್ ತ್ವೈಬಾ ಗಾರ್ಡನ್ ಬಂಗ್ಲಗುಡ್ಡೆ) ಉಪದೇಶ ನೀಡಿದರು.  

ಕಾರ್ಯಕ್ರಮದಲ್ಲಿ ತಾಜುಲ್ ಉಲಮಾ ಎಜುಕೇಶನಲ್ ಗಾರ್ಡನ್ ಕರ್ವೆಲ್ ವತಿಯಿಂದ ನವಂಬರ್ 25 ರಂದು ನಡೆಯುವ  ತಾಜುಲ್ ಉಲಮಾ ಅನುಸ್ಮರಣೆ ಹಾಗೂ  ಮುಹ್ಯಿದ್ದೀನ್ ರಾತಿಬ್ ಕಾರ್ಯಕ್ರಮದ ಪೊಸ್ಟರ್  ಪ್ರದರ್ಶನ ಮಾಡಲಾಯಿತು.  ಸಯ್ಯಿದ್  ಸಾದತ್ ತಂಙಳ್ ಕರ್ವೇಲ್ ದುಆಕ್ಕೆ ನೇತೃತ್ವ ವಹಿಸಿದರು. 

ಕಾರ್ಯಕ್ರಮದಲ್ಲಿ SYS ಪುತ್ತೂರು ಸೆಂಟರ್ ಹಾಗೂ SYS & SSF  ಕಬಕ ಬ್ರಾಂಚ್ ನ ಹಲವು ನೇತಾರರು ಮತ್ತು ಸದಸ್ಯರು ಭಾಗವಹಿಸಿದರು


SHARE THIS

Author:

0 التعليقات: