Sunday, 22 November 2020

SჄS ಈಶ್ವರಮಂಗಲ ಸೆಂಟರ್ ಕೌಂಟ್-20 ಯಶಸ್ವಿಯಾಗಿ ಜರುಗಿತು


SჄS ಈಶ್ವರಮಂಗಲ ಸೆಂಟರ್ ಕೌಂಟ್-20 ಯಶಸ್ವಿಯಾಗಿ ಜರುಗಿತು


22/11/20 ರಂದು ತ್ವಯಿಬಾ ಸೆಂಟರ್ ನಲ್ಲಿ ನಡೆದ COUNT 20 ವಾರ್ಷಿಕ ಸಭೆಯಲ್ಲಿ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಜಿಲ್ಲಾ ಸಮೀತಿಗೆ ಸೆಂಟರ್ ಉಸ್ತುವಾರಿ ಮೂಲಕ ಹಸ್ತಾಂತರ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS) ಈಶ್ವರಮಂಗಲ ಸೆಂಟರ್ ವತಿಯಿಂದ ಕೌಂಟ್-20  ಸೆಂಟರ್ ಕೌಂಸಿಲ್  ಹಾಗೂ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ನವೆಂಬರ್ 22 ಆದಿತ್ಯವಾರ ಸಂಜೆ  ಈಶ್ವರಮಂಗಲ ತ್ವೈಬ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ್ವರಮಂಗಲ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ ರವರು  ವಹಿಸಿದ್ದರು.ಹಂಝ ಮುಸ್ಲಿಯಾರ್ ಈಶ್ವರಮಂಗಲ ರವರ ದುವಾದೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮವನ್ನು ತ್ವೈಬ ಮುದರ್ರಿಸ್ ದಾವೂದುಲ್ ಹಕೀಂ ಹಿಮಮಿ ಸಖಾಫಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಯಿಲ ವರದಿ ವಾಚಿಸಿದರು ಹಾಗೂ ಕೋಶಾಧಿಕಾರಿ ಹನೀಫ್ ಹಾಜಿ ಗಾಳಿಮುಖ ಲೆಕ್ಕ ಪತ್ರ ಮಂಡಿಸಿದರು ಜಂಇಯ್ಯಃ ಮತ್ತು ತಝ್ಕಿಯಃ ಎರಡು ತರಗತಿಗಳಲ್ಲಿ ಅಬ್ದುಲ್ ಅಝೀಝ್ ಮಿಸ್ಬಾಹಿ ಹಾಗೂ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ ರವರು ವಿಷಯ ಮಂಡಿಸಿದರು. ಜಿಲ್ಲಾ ಉಸ್ತುವಾರಿ ಸಿದ್ದೀಖ್ ಕಟ್ಚೆಕಾರ್ ವೀಕ್ಷಕರಾಗಿ ಆಗಮಿಸಿದರು. ಮುಹಮ್ಮದ್ ಮದನಿ ಆಶಂಸಿಸಿದರು.  ಅಬೂಬಕರ್ ಸಿಎಂ ಕರ್ನೂರ್, ಉಮರ್ ಸಅದಿ, ಇಸ್ಮಾಯಿಲ್ ಕೆಎಚ್ಚ್, ಶಂಸುದ್ದೀನ್ ಹನೀಫಿ, ತಖ್ಯುದ್ದೀನ್ ಮದನಿ,ಇಬ್ರಾಹಿಮ್ ಮದನಿ, ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರ್  ಎಸ್ ಎಸ್ ಎಫ್ ಸೆಕ್ಟರ್ ಅಧ್ಯಕ್ಷರು ಅಬೂಬಕರ್ ಲತೀಫಿ   ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ  ಹಮೀದ್ ಕೊಯಿಲ ಸ್ವಾಗತಿಸಿ, ಕಾರ್ಯದರ್ಶಿ ತ್ವಾಹ ಸಅದಿ ವಂದಿಸಿದರು.ಕಾರ್ಯಕ್ರಮದಲ್ಲಿ   ಒಂಬತ್ತು ಬ್ರಾಂಚುಗಳಿಂದ ಆಯ್ಕೆಯಾದ ಕೌಂಸಿಲರುಗಳು ಭಾಗವಹಿಸಿದರು.

ಎಸ್‌ಎಸ್ ಈಶ್ವರಮಂಗಲ ಸೆಕ್ಟರ್ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸ್ವಯಂಸೇವಕರಾಗಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಾಜುಲ್ ಉಲಮಾ ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ಮತ್ತು ತಬರ್ರುಕ್ ವಿತರಣೆ ನಡೆಯಿತು


SHARE THIS

Author:

0 التعليقات: