Monday, 23 November 2020

`PUBG' ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಭಾರತಕ್ಕೆ ಇಂದು ರೀ ಎಂಟ್ರಿ


 `PUBG' ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಭಾರತಕ್ಕೆ ಇಂದು ರೀ ಎಂಟ್ರಿ

ನವದೆಹಲಿ : ಪಬ್ ಜೀ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು , ಜನಪ್ರಿಯ ಪಬ್ ಜೀ ಗೇಮ್ ಅನ್ನು ಕೊರಿಯಾ ಮೂಲದ ಸಂಸ್ಥೆ ಹೊಸ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದು, ಇಂದು ಭಾರತದ ಬಳಕೆದಾರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ಈ ಹಿಂದೆ ರಾಷ್ಟ್ರೀಯ ಭದ್ರತಾ ಆತಂಕಗಳನ್ನು ಉಲ್ಲೇಖಿಸಿ ಭಾರತ ಸರ್ಕಾರ ಪಬ್ ಜೀ ಗೇಮ್ ನಿಷೇಧಿಸಿತ್ತು. ಭದ್ರತಾ ಕಾರಣಗಳಿಂದಾಗಿ ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ನಿಷೇಧಕ್ಕೊಳಗಾದ ನಂತರ PUBG ಕಮ್ ಬ್ಯಾಕ್ ಮಾಡಲು ಸಜ್ಜಾಗಿದೆ.

ವರದಿಗಳ ಪ್ರಕಾರ, ಪ್ಲೇಯರ್ ಐಡಿಯನ್ನು ಉಳಿಸಿಕೊಳ್ಳಲಾಗುವುದು ಮತ್ತು PUBG ಯ ಜಾಗತಿಕ ಆವೃತ್ತಿಯಲ್ಲಿ ರುವ ಆಟಗಾರರು ಹೊಸದಾಗಿ ಲಾಂಚ್ ಆಗಲಿರುವ PUBG ಮೊಬೈಲ್ ಗೆ ತಮ್ಮ ಐಡಿಯನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ ಎಂದು ಡೆವಲಪರ್ ಗಳು ಹೇಳಿದ್ದಾರೆ ಎನ್ನಲಾಗಿದೆ.SHARE THIS

Author:

0 التعليقات: