`MBBS, BDSʼ ಸೀಟುಗಳಲ್ಲಿ ಕೊರೊನಾ ವಾರಿಯರ್ಸ್ ಮಕ್ಕಳಿಗೆ ಮೀಸಲಾತಿ : ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ
ನವದೆಹಲಿ: ವೈದ್ಯಕೀಯ ಸೀಟುಗಳ ಪ್ರವೇಶದಲ್ಲಿ 'ಕೋವಿಡ್ ವಾರಿಯರ್ಸ್ ' ಮಕ್ಕಳಿಗೆ ಮೀಸಲಾತಿ ನೀಡುವ ನಿರ್ಧಾರವನ್ನ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಪ್ರಕಟಿಸಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ(ಎಂಬಿಬಿಎಸ್ ) ಮತ್ತು ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿ.ಡಿ.ಎಸ್) ಸೀಟುಗಳ ಆಯ್ಕೆ ಮತ್ತು ನಾಮನಿರ್ದೇಶನಕ್ಕಾಗಿ 'ವಾರ್ಡ್ಸ್ ಆಫ್ ಕೋವಿಡ್ ವಾರಿಯರ್ಸ್ ' ಎಂಬ ಹೊಸ ವಿಭಾಗವನ್ನ ರಚಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಸಚಿವಾಲಯ ಈ ಕುರಿತು ಪ್ರಕರಣೆ ಹೊರಡಿಸಿದ್ದು, 2020-21ನೇ ಸಾಲಿನಲ್ಲಿ ಈ ವರ್ಗಕ್ಕೆ ಐದು ಸೆಂಟ್ರಲ್ ಪೂಲ್ ಸೀಟುಗಳನ್ನ ಕಾಯ್ದಿರಿಸಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ನಡೆಸುವ ನೀಟ್ -2020ರ ರ್ಯಾಂಕ್ ಆಧಾರದ ಮೇಲೆ ಆನ್ ಲೈನ್ ಅರ್ಜಿ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
'ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ನಿರ್ವಹಣೆಯಲ್ಲಿ ಕೋವಿಡ್ ವಾರಿಯರ್ಸ್ ನೀಡಿದ ಉದಾತ್ತ ಕೊಡುಗೆಯನ್ನು ಗೌರವಿಸುವುದು ಈ ನಡೆಯ ಉದ್ದೇಶವಾಗಿದೆ. ಕರ್ತವ್ಯ ಮತ್ತು ಮಾನವೀಯತೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಎಲ್ಲ ವಾರಿಯರ್ಸ್ ತ್ಯಾಗವನ್ನ ಇದು ಗೌರವಿಸಲಿದೆ' ಎಂದು ಆರೋಗ್ಯ ಸಚಿವರನ್ನ ಉಲ್ಲೇಖಿಸಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
'ಕೊರೊನಾ ವೈರಸ್ʼನಿಂದ ಪ್ರಾಣ ಕಳೆದುಕೊಂಡ ಅಥವಾ ಕೊವಿಡ್ ಸಂಬಂಧಿತ ಕರ್ತವ್ಯದ ಕಾರಣದಿಂದ ಆಕಸ್ಮಿಕವಾಗಿ ಮೃತಪಟ್ಟ ಕೋವಿಡ್ ವಾರಿಯರ್ಸ್ʼಗಳಿಂದ ಅಭ್ಯರ್ಥಿಗಳ ಆಯ್ಕೆ ಮತ್ತು ನಾಮನಿರ್ದೇಶನಗಳಿಗೆ ಕೇಂದ್ರ ಎಂಬಿಬಿಎಸ್ ಸೀಟುಗಳನ್ನ ಹಂಚಿಕೆ ಮಾಡಬಹುದು' ಎಂದು ಪ್ರಕಟಣೆ ತಿಳಿಸಿದೆ.
0 التعليقات: