Tuesday, 17 November 2020

KCF – INC ಸಮಿತಿಯಿಂದ ಗ್ಲೋಬಲ್ ಮೀಲಾದ್ ಕಾನ್ಫರೆನ್ಸ್: ಮುಖ್ಯ ಅತಿಥಿಯಾಗಿ ಸುಲ್ತಾನುಲ್ ಉಲಮಾ


 KCF – INC ಸಮಿತಿಯಿಂದ ಗ್ಲೋಬಲ್ ಮೀಲಾದ್ ಕಾನ್ಫರೆನ್ಸ್: ಮುಖ್ಯ ಅತಿಥಿಯಾಗಿ ಸುಲ್ತಾನುಲ್ ಉಲಮಾ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅತ್ಯುನ್ನತ ಘಟಕವಾದ ಅಂತರ್ರಾಷ್ಟ್ರೀಯ ಸಮಿತಿಯಿಂದ ನವೆಂಬರ್ 20 ರಂದು ಭಾರತದ ಸಮಯ ರಾತ್ರಿ 7.30 ಕ್ಕೆ ಝೂಮ್ ಅಪ್ಲಿಕೇಶನ್ ಮೂಲಕ ಗ್ರಾಂಡ್ ಮೀಲಾದ್ ಸಮಾವೇಶ ಹಾಗೂ ತಾಜುಲ್ ಉಲಮಾ & ನೂರುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಭಾರತೀಯ ಮುಸಲ್ಮಾನರ ಅಧಿಕೃತ ಶಬ್ಧ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದರು ಹುಬ್ಬುರ್ರಸೂಲ್ ಭಾಷಣ ಮಾಡಲಿದ್ದಾರೆ.

ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಡಾ| ಶೇಖ್ ಬಾವ ಮಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನೌಫಲ್ ಸಖಾಫಿ ಕಳಸ, ಡಾ| ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಡಾ| ಅಬ್ದುರ್ರಶೀದ್ ಝೈನಿ, ಶಾಫೀ ಸಅದಿ ಬೆಂಗಳೂರು, ಸುಫ್ಯಾನ್ ಸಖಾಫಿ, ಖಮರುದ್ದೀನ್ ಗೂಡಿನಬಳಿ, ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಹಾಗೂ ಇನ್ನಿತರ ಉಲಮಾ ,ಉಮರಾ ನೇತಾರರು ಭಾಗವಹಿಸಲಿದ್ದಾರೆಂದು ಕಾರ್ಯಕ್ರಮದ ಉಸ್ತುವಾರಿ ಎಸ್ ಪಿ ಹಂಝ ಸಖಾಫಿ ಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.SHARE THIS

Author:

0 التعليقات: