Tuesday, 24 November 2020

ಇಂದು `CBI' ನಿಂದ ಡಿ.ಕೆ.ಶಿವಕುಮಾರ್ ಗೆ ವಿಚಾರಣೆ


ಇಂದು `CBI' ನಿಂದ ಡಿ.ಕೆ.ಶಿವಕುಮಾರ್ ಗೆ ವಿಚಾರಣೆ

ಬೆಂಗಳೂರು : ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಸಿಬಿಐ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ನೋಟಿಸ್ ನೀಡಿದ್ದು, ಇಂದು ಡಿ.ಕೆ.ಶಿವಕುಮಾರ್ ಅವರು ಸಿಬಿಐ ವಿಚಾರಣೆಗೆ ಹಾಜರಾಗಲಿದ್ದಾರೆ.

ಮಗಳು ಐಶ್ವರ್ಯ ನಿಶ್ಚಿತಾರ್ಥದ ದಿನವೇ ಸಿಬಿಐ ಶಿವಕುಮಾರ್ ಗೆ ನೋಟಿಸ್ ನೀಡಿತ್ತು. ನವೆಂಬರ್ 23 ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು . ಹೀಗಾಗಿ ಇಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ.


SHARE THIS

Author:

0 التعليقات: