ಜಮ್ಮು-ಕಾಶ್ಮೀರದಲ್ಲಿ 'BSF' ಯೋಧರ ಗುಂಡೇಟಿಗೆ 'ಪಾಕ್ ನುಸುಳುಕೋರ' ಮಟಾಶ್
ಡಿಜಿಟಲ್ ಡೆಸ್ಕ್ : ಗಡಿ ಭದ್ರತಾ ಪಡೆಗಳ (ಬಿಎಸ್ಎಫ್) ಸಿಬ್ಬಂದಿ ಸೋಮವಾರ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ನಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿದ್ದು, ಓರ್ವ ನುಸುಳುಕೋರನನ್ನು ಸೇನಾ ಪಡೆಗಳು ಗುಂಡಿಕ್ಕಿ ಕೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಸಾಂಬಾ ಸೆಕ್ಟರ್ನಲ್ಲಿ ಪಾಕ್ ನುಸುಳುಕೋರನನ್ನು ಬಿಎಸ್ಎಫ್ ಗುಂಡಿಕ್ಕಿ ಕೊಂದಿದೆ. ಮೃತನ ಗುರುತು ಇನ್ನೂ ತಿಳಿದುಬಂದಿಲ್ಲ' ಎಂದು ಮೂಲಗಳು ತಿಳಿಸಿವೆ. ಸಾಂಬಾ ಸೆಕ್ಟರ್ನಲ್ಲಿ ಪಾಕ್ ನುಸುಳುಕೋರ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದಾನೆ. ಈ ವೇಳೆ ಭಾರತೀಯ ಸೈನಿಕರು ಆತನನ್ನು ಹೊಡೆದುರುಳಿಸಿದ್ದಾನೆ. ನಾಗ್ರೋಟಾ ಮುಖಾಮುಖಿಯಾದ ಕೆಲವು ದಿನಗಳ ನಂತರ ಜಿಲ್ಲಾ ಸಾಂಬಾದ ಅಂತರರಾಷ್ಟ್ರೀಯ ಗಡಿ (ಐಬಿ) ಪ್ರದೇಶದಲ್ಲಿ ಭದ್ರತಾ ಪಡೆಗಳು 150 ಮೀಟರ್ ಉದ್ದದ ಸುರಂಗವನ್ನು ಪತ್ತೆ ಹಚ್ಚಿದ್ದಾರೆ.
0 التعليقات: