Monday, 23 November 2020

ಮಂಗಳೂರು: ಫಳ್ನೀರ್ ಬಳಿ ಯುವಕನ ಮೇಲೆ ತಲವಾರು ದಾಳಿ


 ಮಂಗಳೂರು: ಫಳ್ನೀರ್ ಬಳಿ ಯುವಕನ ಮೇಲೆ ತಲವಾರು ದಾಳಿ

ಮಂಗಳೂರು: ನಗರದ ಫಳ್ನೀರ್ ನ ಯುನಿಟಿ ಆಸ್ಪತ್ರೆ ಬಳಿ ಯುವಕನ ಮೇಲೆ ತಂಡವೊಂದು ಸೋಮವಾರ ತಡರಾತ್ರಿ ತಲವಾರಿನಿಂದ ದಾಳಿ ಮಾಡಿದ ಘಟನೆ ನಡೆದಿದೆ.

ನೌಶಾದ್ (30) ಎಂಬ ಯುವಕನ ಮೇಲೆ ತಲವಾರು ದಾಳಿ ಮಾಡಲಾಗಿದೆ. ನೌಶಾದ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನೌಶಾದ್ ಅವರು ಇತ್ತೀಚೆಗೆ ಕಂದಾವರದಲ್ಲಿ ಮಸೀದಿ ಆಡಳಿತ ವಿಚಾರವಾಗಿ ಹಲ್ಲೆಗೊಳಗಾಗಿದ್ದ ಅಬ್ದುಲ್ ಅಜೀಜ್ ಅವರ ಅಳಿಯರಾಗಿದ್ದಾರೆ. ಕಾರಿನಲ್ಲಿ ಬಂದ ಗುಂಪು ನೌಶಾದ್ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದು, ನೌಶಾದ್ ಎದೆಭಾಗಕ್ಕೆ ಗಾಯವಾಗಿದೆ.


SHARE THIS

Author:

0 التعليقات: