Friday, 6 November 2020

ದೇವೀರಮ್ಮನಿಗೂ ತಟ್ಟಿದ ಕೊರೊನಾ ಎಫೆಕ್ಟ್; ಭಕ್ತರಿಗಿಲ್ಲ ಬೆಟ್ಟ ಹತ್ತುವ ಅವಕಾಶ

 

ದೇವೀರಮ್ಮನಿಗೂ ತಟ್ಟಿದ ಕೊರೊನಾ ಎಫೆಕ್ಟ್; ಭಕ್ತರಿಗಿಲ್ಲ ಬೆಟ್ಟ ಹತ್ತುವ ಅವಕಾಶ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದೇವೀರಮ್ಮ ದೇವಾಲಯದ ಜಾತ್ರೆಗೆ ಈ ಬಾರಿ ಕೊರೊನಾ ಬಿಸಿ ತಟ್ಟಿದ್ದು, ಭಕ್ತರಿಗೆ ದೇವೀರಮ್ಮ ಬೆಟ್ಟ ಏರಲು ನಿರ್ಬಂಧ ವಿಧಿಸಲಾಗಿದೆ.

ಪ್ರತಿವರ್ಷ ದೀಪಾವಳಿಯಲ್ಲಿ ದೇವೀರಮ್ಮ ಜಾತ್ರೆ ಅದ್ಧೂರಿಯಾಗಿ ನಡೆಯುತ್ತೆ. ಲಕ್ಷಾಂತರ ಭಕ್ತರು ದೇವಿರಮ್ಮ ಬೆಟ್ಟಹತ್ತಿ ಹೋಗಿ ದೇವಿಯ ದರ್ಶನ ಪಡೆಯುತ್ತಾರೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳ ಜಾತ್ರೆ ನಡೆಸಲು ಸಿದ್ಧತೆ ನಡೆಸಲಾಗಿದ್ದು, 200 ಜನರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮಲ್ಲೇನಹಳ್ಳಿಯಲ್ಲಿರುವ ದೇವೀರಮ್ಮ ದೇವಾಲಯದಲ್ಲಿ ದೀಪಾವಳಿ ಸಂದರ್ಭದಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಲಕ್ಷಾಂತರ ಭಕ್ತರು ಮಧ್ಯರಾತ್ರಿ ಬರಿಗಾಲಲ್ಲಿ ಬೆಟ್ಟವನ್ನು ಏರಿ ದೇವೀರಮ್ಮನ ದರ್ಶನ ಪಡೆದು ಪುನೀತರಾಗುತ್ತಾರೆ


SHARE THIS

Author:

0 التعليقات: