ಶಾಕಿಂಗ್ ನ್ಯೂಸ್ : ಪೇಪರ್ ಗ್ಲಾಸ್ಗಳ ಬಳಕೆ ಆರೋಗ್ಯಕ್ಕೆ ಭಾರಿ ಡೇಂಜರ್..!
ನವದೆಹಲಿ,ನ.9-ಕಾಫಿ, ಚಹಾ ಸೇವಿಸುವ ಪೇಪರ್ ಗ್ಲಾಸ್ಗಳ ಬಳಕೆ ಮನುಷ್ಯನ ದೇಹಕ್ಕೆ ಮಾರಕವಾಗಲಿದೆ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ. ಒಬ್ಬ ವ್ಯಕ್ತಿ ದಿನಕ್ಕೆ ಮೂರು ಬಾರಿ ಪೇಪರ್ ಗ್ಲಾಸ್ನಲ್ಲಿ ಟೀ ಸೇವಿಸಿದರೆ ಅತನ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಸ್ಪಷ್ಟಪಡಿಸಿದೆ.
ಕರಗ್ಪುರ್ ಐಐಟಿಯಲ್ಲಿ ಪ್ರೊಫೇಸರ್ ಆಗಿರುವ ಸುಧಾ ಗೋಯಲ್ ಅವರು, ಮೂರು ಕಪ್ ಪೇಪರ್ ಗ್ಲಾಸ್ನಲ್ಲಿ ಚಹಾ ಸೇವಿಸಿದರೆ 75 ಸಾವಿರ ಟಿನಿ ಮೈಕ್ರೋಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹ ಸೇರಲಿವೆಯಂತೆ.
ಪೇಪರ್ ಗ್ಲಾಸ್ಗಳಲ್ಲಿ ಬಿಸಿ ಪಾನೀಯಗಳನ್ನು ಹಾಕಿದರೆ ಗ್ಲಾಸ್ ತಯಾರಿಕೆಗೆ ಬಳಸುವ ಮೈಕ್ರೋ ಪ್ಲಾಸ್ಟಿಕ್ ಕಣಗಳು ಪಾನೀಯಗಳಿಗೆ ಸೇರಿ ಅದನ್ನು ಸೇವಿಸುವ ವ್ಯಕ್ತಿಗಳ ಆರೋಗ್ಯ ದ ಮೇಲೆ ದುಷ್ಟರಿಣಾಮ ಬೀರಲಿವೆ ಎಂದು ಸುಧಾ ಸ್ಪಷ್ಟಪಡಿಸಿದ್ದಾರೆ.
0 التعليقات: