ಟಿಆರ್ಎಸ್ ಕೈಯಲ್ಲಿದ್ದ 'ದುಬ್ಬಾಕಾ' ಬಿಜೆಪಿ ಮಡಿಲಿಗೆ.
ದುಬ್ಬಾಕಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರದ ಶಾಸಕರಾಗಿದ್ದ ಟಿಆರ್ಎಸ್ ಪಕ್ಷದ ಎಸ್.ರಾಮಲಿಂಗಾ ರೆಡ್ಡಿ ಆಗಸ್ಟ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇಂದು ಒಟ್ಟು 23 ಸುತ್ತುಗಳ ಮತ ಎಣಿಕೆ ನಡೆದಿತ್ತು.
ಬಿಜೆಪಿಯ ಮಾಧವನೇನಿ ರಘುನಂದನ್ ರಾವ್ ಅವರು ಸುಮಾರು 1,118 ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿ ಟಿಆರ್ಎಸ್ನ ಸೋಲಿಪೇಟಾ ಸುಜಾತಾ ಅವರನ್ನು ಸೋಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಚೆರುಕು ಶ್ರೀನಿವಾಸ್ ರೆಡ್ಡಿ ಅವರು ಹೀನಾಯ ಸೋಲು ಕಂಡಿದ್ದಾರೆ. ದುಬ್ಬಾಕಾದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಮಾಧವನೇನಿ ರಘುನಂದನ್ ರಾವ್ ಅವರಿಗೆ ಪಕ್ಷದ ಮುಖಂಡ ರಾಮ್ ಮಾಧವ್ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಆಡಳಿತ ಟಿಆರ್ಎಸ್ ಬಿಜೆಪಿಯನ್ನು ಸೋಲಿಸಲು ಹಲವು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳನ್ನು ನಡೆಸಿತ್ತು. ಆದಾಗ್ಯೂ ನಮ್ಮ ಪಕ್ಷದ ರಘುನಂದನ್ ರಾವ್ ಗೆದ್ದರು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ವಿಧಾನಸಭಾ ಕ್ಷೇತ್ರದ ಸೋಲಿನಿಂದ ಸದ್ಯ ಟಿಆರ್ಎಸ್ಗೆ ಯಾವುದೇ ತೊಂದರೆ ಇಲ್ಲದೆ ಇದ್ದರೂ ಮೂರು ಟಿಆರ್ಎಸ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅದರಲ್ಲೂ ಮತ ಎಣಿಕೆಯ ಕೊನೇ ಕ್ಷಣದವರೆಗೂ ಟಿಆರ್ಎಸ್ ಮತ್ತು ಬಿಜೆಪಿ ನಡುವೆ ನೆಕ್ ಟು ನೆಕ್ ಸ್ಪರ್ಧೆ ಇದ್ದು, ಕುತೂಹಲ ಸೃಷ್ಟಿಸಿತ್ತು.
0 التعليقات: