ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ; ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು(ನ.28): ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ. ಆಗ ರಾಜ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಂಟಿಬಿ ನಾಗರಾಜ್ ಸೇರಿ ಬಿಜೆಪಿ ವಲಸಿಗರ ಸಭೆ ವಿಚಾರವಾಗಿ, ನಾನು ಅದರ ಬಗ್ಗೆ ಮಾತನಾಡಲ್ಲ. ಅವರು ಮಾಡಲಿ, ಬಿಡಲಿ ನಮಗೇನು? ಇವರು ವ್ಯಾಪಾರ ಮಾಡಿಕೊಂಡು ಅಲ್ಲಿಗೆ ಹೋದವರು. ಅವರ ವ್ಯಾಪಾರ ನನಗೇನು ಗೊತ್ತು? ಎಂದು ಬಿಜೆಪಿ ವಲಸಿಗರ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲ ಅಧಿವೇಶನ ವಿಚಾರಕ್ಕೆ ಅಸೆಂಬ್ಲಿ ಪ್ರಾರಂಭವಾದ ನಂತರ ಗೊತ್ತಾಗುತ್ತೆ. ಅಲ್ಲಿ ಏನು ಮಾತನಾಡ್ತೇವೆ ನೋಡಿ. ಪ್ರವಾಹ, ಬೇರೆ ಬೇರೆ ವಿಚಾರ ಇವೆ ಅಲ್ಲಿ ಮಾತನಾಡೋದನ್ನ ನೀವೇ ನೋಡುವಿರಂತೆ ಎಂದು ಮಾಧ್ಯಮಗಳಿಗೆ ಹೇಳಿದರು. ನಿಮಗೆ ಪ್ರಚಾರದ ಹುಚ್ಚಿದ್ದರೆ ರಾಜೀನಾಮೆ ನೀಡಿ ಎಲೆಕ್ಷನ್ಗೆ ನಿಂತ್ಕೊಳಿ; ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಕಿಡಿ
ಇನ್ನು, ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಒಬಿಸಿ ಪಟ್ಟಿಗೆ ಬರುವವರಿಗೆ ಒಂದು ಕಮೀಷನ್ ಇದೆ. ಪರ್ಮನೆಂಟ್ ಒಬಿಸಿ ಆಯೋಗ ಇದೆ. ಪಟ್ಟಿಗೆ ಸೇರಿಸೋದು, ಡಿಲೀಟ್ ಮಾಡೋದು ಅದಕ್ಕೆ ಸೇರಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸೇರಿರುತ್ತೆ. ಆಯೋಗ ಮಾಡಬಹುದೆಂದು ವರದಿ ನೀಡಬೇಕು. ವರದಿ ನಂತರ ಅದರ ಬಗ್ಗೆ ಗಮನಹರಿಸಬಹುದು. ಒಬಿಸಿಗೆ ಸೇರಿಸಿ ಎಂದು ಕೇಳೋದು ತಪ್ಪಿಲ್ಲ. ಸಂವಿಧಾನದ 334 ವಿಧಿಯಲ್ಲೇ ತಿಳಿಸಲಾಗಿದೆ. ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳೋಕೋ, ಯಾಕೋ? ನನಗೇನು ಗೊತ್ತು ಎಂದು ಕಿಡಿಕಾರಿದ್ದಾರೆ.
ಇನ್ನು, ಸಿಎಂ ರಾಜಕೀಯ ಕಾರ್ಯದರ್ಶಿ ಎನ್ .ಆರ್.ಸಂತೋಷ್ ಆತ್ಮಹತ್ಯೆ ಪ್ರಯತ್ನ ವಿಚಾರವಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂತೋಷ್ ಯಾರ್ರೀ, ನಮಗೇನು ಗೊತ್ತು? ಅವರ ಸಮಸ್ಯೆ ನಮಗೇನು ಗೊತ್ತು? ಅದು ಅವರ ವೈಯುಕ್ತಿಕ ವಿಚಾರ. ರಾಜಕೀಯ ಒತ್ತಡ, ಅದೆಲ್ಲ ಇದೆ ಅನ್ನೋದು ನನಗೇನು ಗೊತ್ತು? ವಿಚಾರಣೆ ನಂತರ ಎಲ್ಲವೂ ಬರುತ್ತೆ ಎಂದರು.
ನವದೆಹಲಿ: ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದ ಮೊದಲ ಹಂತದ ಡಿಡಿಸಿ(ಜಿಲ್ಲಾ ಅಭಿವೃದ್ಧಿ ಮಂಡಳಿ) ಮತ್ತು ಪಂಚಾಯತ್ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿರುವುದಾಗಿ ವರದಿ ತಿಳಿಸಿದೆ. ವಿವಿಧ ಮತಗಟ್ಟೆಯಲ್ಲಿ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 2ಗಂಟೆಗೆ ಮುಕ್ತಾಯವಾಗಿರುವುದಾಗಿ ಚುನಾವಣಾ ಆಯೋಗದ ಮೂಲಗಳು ಹೇಳಿದೆ.
ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿನಿಂದ ಎಂಟು ಹಂತಗಳ ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ (ಡಿಡಿಸಿ) ಚುನಾವಣೆ ನಡೆಯಲಿದ್ದು, 2019 ಆ.5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮತ್ತು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದೆ.
ಡಿಡಿಸಿ(ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ) ಮೊದಲ ಹಂತದ ಚುನಾವಣೆಗಾಗಿ 2,146 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ಎಂದು ರಾಜ್ಯ ಚುನಾವಣಾಧಿಕಾರಿ ಕೆಕೆ ಶರ್ಮಾ ತಿಳಿಸಿದ್ದಾರೆ.
ಚುನಾವಣೆಯಿಂದ ಕೆಲವು ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂಬ ವಿಶ್ವಾಸ ಜನರದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ಪ್ರಾಮುಖ್ಯತೆ ಪಡೆದಿದೆ. ಈ ಕಾರಣದಿಂದಾಗಿಯೇ ನಾನು ಬೆಳಗ್ಗೆಯೇ ಮತ ಚಲಾಯಿಸಿರುವುದಾಗಿ ಬಂಡಿಪೋರಾ ಜಿಲ್ಲೆಯ ಮತದಾರರೊಬ್ಬರು ಇಂಡಿಯಾ ಟುಡೆ ಟಿವಿ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಅಧಿಕೃತ ಮಾಹಿತಿ ಪ್ರಕಾರ, ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದಲ್ಲಿ 280 ಕ್ಷೇತ್ರಗಳಿದ್ದು, ಇದರಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2ಗಂಟೆವರೆಗೆ ಮತದಾನ ನಡೆದಿದೆ. ಮೊದಲ ಹಂತದ ಡಿಡಿಸಿ ಚುನಾವಣೆಯಲ್ಲಿ ಒಟ್ಟು 296 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 207 ಮಂದಿ ಪುರುಷರು, 89 ಮಹಿಳೆಯರು ಸೇರಿದ್ದಾರೆ ಎಂದು ವರದಿ ವಿವರಿಸಿದೆ.
0 التعليقات: