ಗಡಿ ಭಾಗದಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಟೊಮ್ಯಾಟೋ ಟೆಂಪೋದಲ್ಲಿ ಸ್ಪೋಟಕ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್
ಬೆಂಗಳೂರು : ಟೊಮ್ಯಾಟೋ ಬಾಕ್ಸ್ ಎಂಬುದಾಗಿ ತಿಳಿಸಿ, ಪೊಲೀಸರ ಕಣ್ ತಪ್ಪಿಸಿ, ಮೇಲೆ ಟೊಮ್ಯಾಟೋ, ಅದರ ಕೆಳಗೆ ಜಿಲೆಟಿನ್, ಡಿಟೋನೇಟರ್ ಗಳನ್ನು ಸಾಗಿಸುತ್ತಿದ್ದಂತ ಪ್ರಕರಣವನ್ನು ತಮಿಳುನಾಡು-ಕೇರಳ ಗಡಿ ಭಾಗದಲ್ಲಿ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಯಮತ್ತೂರಿನಿಂದ ಕೇರಳಕ್ಕೆ ಟೆಂಪೋ ಒಂದರಲ್ಲಿ 30 ಬಾಕ್ಸ್ ಟೊಮ್ಯಾಟೋ ಸಾಗಿಸಲಾಗುತ್ತಿತ್ತು. ಇಂತಹ ಟೊಮ್ಯಾಟೋ ಸಾಗಿಸುತ್ತಿದ್ದಂತ ಟೆಂಪೋದಲ್ಲಿಯೇ ಸ್ಪೋಟಕ ಕೂಡ ಸಾಗಿಸಲಾಗುತ್ತಿದೆ ಎಂಬುದಾಗಿಯೂ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಕೇರಳ ತಮಿಳುನಾಡು ಗಡಿಯಲ್ಲಿ ಪೊಲೀಸರು ತಪಾಸಣೆ ಕಾರ್ಯವನ್ನು ಕೇರಳ ಪೊಲೀಸರು ಹೆಚ್ಚಿಸಿದ್ದರು.
ತಮಿಳುನಾಡು ಹಾಗೂ ಕೇಳರ ಗಡಿಭಾಗ ವಾಳಯಾರ್ ಚೆಕ್ ಪೋಸ್ಟ್ ಬಳಿಯಲ್ಲಿ ಟೊಮ್ಯಾಟೋ ತುಂಬಿಕೊಂಡು ಬಂದಂತ ಟೆಂಪೋವನ್ನು ತಪಾಸಣೆಗೆ ಕೇರಳ ಪೊಲೀಸರು ಒಳಪಡಿಸಿದ್ದಾರೆ. ಈ ವೇಳೆ ಟೊಮ್ಯಾಟೋ ಬಾಕ್ಸ್ ಒಳಗೆ ಹುದುಗಿಸಿಟ್ಟಿದ್ದಂತ 7000 ಜಿಲೆಟಿನ್ ಸ್ಟಿಕ್ ಗಳು ಹಾಗೂ 7500 ಡಿಟೋನೇಟರ್ ಗಳನ್ನು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಟೆಂಪೋ ಚಾಲಕ ಪ್ರಭು ಹಾಗೂ ಮತ್ತೊಬ್ಬನನ್ನು ಬಂಧಿಸಿದ್ದಾರೆ.
0 التعليقات: