Sunday, 15 November 2020

ಹರಿಯಾಣದ ಮೊದಲ ಮಹಿಳಾ ಸಂಸದೆ ಚಂದ್ರವತಿ ದೇವಿ ವಿಧಿವಶ

 

ಹರಿಯಾಣದ ಮೊದಲ ಮಹಿಳಾ ಸಂಸದೆ ಚಂದ್ರವತಿ ದೇವಿ   ವಿಧಿವಶ

ಚಂಡೀಗಢ: ಹರಿಯಾಣದ ಮೊದಲ ಮಹಿಳಾ ಸಂಸದೆ ಹಾಗೂ ಪುದುಚೇರಿಯ ಲೆಫ್ಟಿನೆಂಟ್​ ಗವರ್ನರ್​ ಚಂದ್ರವತಿ ದೇವಿ (92) ಅವರು ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.

ಚಂದ್ರವತಿ ದೇವಿ ಅವರು ರೋಹ್ಟಕ್​ ಪೋಸ್ಟ್​ ಗ್ರಾಡ್ಯುವೇಟ್ ಇನ್ಸ್​ಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಆಸ್ಪತ್ರೆಗೆ ಅನಾರೋಗ್ಯ ಕಾರಣ ನ. 5ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ನಿಧನರಾಗಿದ್ದಾರೆ.

ಕಾಂಗ್ರೆಸ್​ ನಾಯಕಿಯಾಗಿದ್ದ ಚಂದ್ರವತಿ ದೇವಿ ಅವರು ನಂತರ ದಿನಗಳಲ್ಲಿ ಜನತಾ ಪಕ್ಷ ಸೇರಿ ಚುನಾವಣೆಯಲ್ಲಿ ಗೆಲವು ದಾಖಲಿಸುವ ಮೂಲಕ ಹರಿಯಾಣದ ಮೊದಲ ಸಂಸದೆ ಎಂಬ ಕೀರ್ತಿಗೆ ಭಾಜನರಾಗಿದ್ದರು.

ತುರ್ತು ಪರಿಸ್ಥಿತಿ ತೆರವುಗೊಳಿಸಿದ ಬೆನ್ನಲ್ಲೇ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭಿವಾನಿ ಕ್ಷೇತ್ರದಿಂದ ಸ್ಪರ್ಧಿಸಿ ಎದುರಾಳಿ ಚೌಧರಿ ಬನ್ಸಿ ವಿರುದ್ಧ ಅಮೋಘ ಗೆಲುವು ದಾಖಲಿಸಿದ್ದರು. ಈ ಮೂಲಕ ಮೊದಲ ಬಾರಿಗೆ ಸಂಸತ್ತು ಪ್ರವೇಶ ಮಾಡಿದ್ದರು. (ಏಜೆನ್ಸೀಸ್​)


SHARE THIS

Author:

0 التعليقات: