Saturday, 21 November 2020

ʼಐದು ದಿನʼಗಳಿಂದ ದಾಖಲೆಯ ಇಳಿಕೆ ಕಂಡಿದ್ದ ʼಚಿನ್ನʼದ ಬೆಲೆಯಲ್ಲಿ ಭಾರೀ ಏರಿಕೆ..!


 ʼಐದು ದಿನʼಗಳಿಂದ ದಾಖಲೆಯ ಇಳಿಕೆ ಕಂಡಿದ್ದ ʼಚಿನ್ನʼದ ಬೆಲೆಯಲ್ಲಿ ಭಾರೀ ಏರಿಕೆ..!

ಬೆಂಗಳೂರು: ದೀಪಾವಳಿ ಹಬ್ಬದ ಸಮಯದಲ್ಲಿ ದರ ಏರುತ್ತಲಿದ್ದು, ಬಂಗಾರದ ಬೆಲೆ ಹಬ್ಬ ಮುಗಿಯುತ್ತಿದ್ದಂತೆ ಇಳಿಕೆಯತ್ತಾ ಮುಖ ಮಾಡಿ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದ್ರೆ, ಇಂದು ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.

ಹೌದು, ಚಿನ್ನ ಬೆಲೆ ಏರಿಕೆಯಾಗಿದ್ದು, ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 200 ರೂ. ಏರಿಕೆಯಾಗಿ 47,100 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 140 ರೂ. ಏರಿಕೆಯಾಗಿ, 51,380 ರೂಪಾಯಿ ಆಗಿದೆ.

ಇನ್ನು ಇತ್ತ ಬೆಳ್ಳಿ ದರ 100ರೂ ಇಳಿಕೆ ಕಂಡಿದ್ದು, ಒಂದು ಕೆ. ಜಿ ಬೆಳ್ಳಿ ಬೆಲೆ 62,800 ರೂ. ಆಗಿದೆ.SHARE THIS

Author:

0 التعليقات: