ರಾಜೀವ್ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಪೆರೋಲ್ ವಿಸ್ತರಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎ.ಜಿ. ಪೆರರಿವಲನ್ಗೆ ವೈದ್ಯಕೀಯ ತಪಾಸಣೆಗಾಗಿ ನೀಡಿದ್ದ ಪೆರೋಲ್ ಅನ್ನು ಸುಪ್ರೀಂಕೋರ್ಟ್ ಒಂದು ವಾರದ ಅವಧಿಗೆ ವಿಸ್ತರಿಸಿದೆ.
ಈ ಹಿಂದೆಯೂ ನವೆಂಬರ್ 23ರ ತನಕ ಪೆರೋಲ್ ವಿಸ್ತರಿಸಲಾಗಿತ್ತು. ಇದೀಗ ವೈದ್ಯಕೀಯ ಕಾರಣಗಳಿಂದ ಮತ್ತೆ ವಾರದ ಅವಧಿಗೆ ವಿಸ್ತರಿಸಲಾಗಿದೆ.
ವೈದ್ಯರ ಭೇಟಿ ಸಂದರ್ಭದಲ್ಲಿ ಪೆರರಿವಲನ್ಗೆ ಪೊಲೀಸ್ ಬೆಂಗಾವಲು ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಲಾಗಿತ್ತು ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಎಸ್.ರವೀಂದ್ರ ಭಟ್ ಅವರಿದ್ದ ಪೀಠವು ಶುಕ್ರವಾರ ಹೇಳಿದೆ.
ಶಸ್ತ್ರಚಿಕಿತ್ಸೆಗಾಗಿ ಪೆರೋಲ್ ಅನ್ನು 90 ದಿನಗಳ ಕಾಲ ವಿಸ್ತರಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿದಾರ ಮತ್ತು ತಮಿಳುನಾಡು ಸರ್ಕಾರ ಪರ ವಕೀಲರ ವಾದವನ್ನು ಗಮನದಲ್ಲಿಟ್ಟುಕೊಂಡು, ಪೆರೋಲ್ ಅನ್ನು ಕೇವಲ ಒಂದು ವಾರ ವಿಸ್ತರಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
0 التعليقات: