Friday, 20 November 2020

ಜಟ್ಟಿಪಳ್ಳ: ಅನ್ಸಾರುಸುನ್ನಃ ಸ್ಟೂಡೆಂಟ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆ

 ಜಟ್ಟಿಪಳ್ಳ: ಅನ್ಸಾರುಸುನ್ನಃ ಸ್ಟೂಡೆಂಟ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆ

ಜಟ್ಟಿಪಳ್ಳ, ನ.20: ಜಟ್ಟಿಪಳ್ಳದ ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧೀನದಲ್ಲಿ ಕಾರ್ಯಾರಿಸುತ್ತಿರುವ ಅನ್ಸಾರಿಯಾ ದ‌ಅವಾ ವಿದ್ಯಾರ್ಥಿಗಳ ಒಕ್ಕೂಟವಾದ 'ಅನ್ಸಾರುಸುನ್ನಃ ಸ್ಟೂಡೆಂಟ್ ಅಸೋಸಿಯೇಶನ್' ನ ಇದರ ವಾರ್ಷಿಕ ಮಹಾಸಭೆ ಶುಕ್ರವಾರ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಉಮರ್ ಮುಸ್ಲಿಯಾರ್ ದುಆ ಮೂಲಕ ಸಭೆಯನ್ನು ಉದ್ಘಾಟಿಸಿದರು. ದ‌ಅವಾ ಕಾಲೇಜು ಪ್ರಾಂಶುಪಾಲ ಅಬೂಬಕ್ಕರ್ ಸಖಾಫಿ ವಿಟ್ಲ ನಿರ್ದೇಶನದಲ್ಲಿ ನೂತನ ಪದಾಧಿಕಾರಿಗಳನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಹರ್ಲಡ್ಕ ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಮುಹಮ್ಮದ್ ಸಮೀಲ್, ಪ್ರಧಾನ ಕಾರ್ಯದರ್ಶಿಗಳಾಗಿ ಮುಹಮ್ಮದ್ ಅಫ್ವಾನ್, ಕೋಶಾಧಿಕಾರಿಯಾಗಿ ಮುಸ್ತಫಾ ಬನ್ನೂರು, ಕ್ಯಾಂಪಸ್ ಲೀಡರ್ ಇರ್ಶಾದ್ ಬಂಟ್ವಾಳ ಆಯ್ಕೆಗೊಂಡರು.

ದ‌ಅವಾ ಕಾಲೇಜು ಅಧ್ಯಾಪಕರಾದ ಝುಬೈರ್ ಹಿಮಮಿ, ನೌಶಾದ್ ಮದನಿ, ಹಂಝತುಕರ್ರಾರ್ ಮುಈನಿ, ಉವೈಸ್ ಬೀಟಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಗತ ವರ್ಷದ ವಾರ್ಷಿಕ ವರದಿಯನ್ನು ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸ್ವಲಾಹುದ್ದೀನ್ ಮಂಡಿಸಿದರು. ಲೆಕ್ಕ ಪತ್ರವನ್ನು ಮುಹಮ್ಮದ್ ಸಮೀಲ್ ಸಭೆಯ ಮುಂದಿಟ್ಟರು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದ ಅಬ್ದುಲ್ ಹಕೀಂ ಅಧ್ಯಕ್ಷ ಭಾಷಣವನ್ನು ಮಾಡಿದರು.ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಫ್ವಾನ್ ವಂದಿಸಿದರು.


SHARE THIS

Author:

0 التعليقات: