ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ : ನಾಲ್ಕು ವಿಶೇಷ ರೈಲು ಸಂಚಾರಕ್ಕೆ ಅನುಮತಿ
ಬೆಂಗಳೂರು : ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಮತ್ತೊಂದು ಸಿಹಿಸುದ್ದಿ ನೀಡಿದ್ದು, ನಾಲ್ಕು ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲು ಅನುಮತಿ ನೀಡಿದೆ.
ಯಶವಂತಪುರ - ಬೀದರ್ - ಯಶವಂತಪುರ ಮತ್ತು ಯಶವಂತಪುರ- ಲಾತೂರ್ - ಯಶವಂತಪುರ ನಡುವೆ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ರೈಲ್ವೆ ವಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಶವಂತಪುರದಿಂದ ಬೀದರ್ ಗೆ ಬರುವ ರೈಲು ಸಂಖ್ಯೆ 06271 ಮಂಗಳವಾರದಿಂದ ವಾರದಲ್ಲಿ ನಾಲ್ಕು ದಿನ ಓಡಲಿದೆ. ಸೋಮವಾರ, ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಜೆ 7ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 9.15ಕ್ಕೆ ಬೀದರ್ ಗೆ ಆಗಮಿಸಲಿದ್ದು. 06272, ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6:05ಕ್ಕೆ ಹೊರಡಲಿದ್ದು. ಮರುದಿನ ಬೆಳಿಗ್ಗೆ 7.40ಕ್ಕೆ ಯಶವಂತಪುರ ಕ್ಕೆತಲುಪಲಿದೆ.
ಅದೇ ರೀತಿ, ಯಶವಂತಪುರದಿಂದ ಲಾತೂರ್ ಗೆ ರೈಲು ಸಂಖ್ಯೆ 06583, ಬುಧವಾರ, ಶುಕ್ರವಾರ ಮತ್ತು ಶನಿವಾರ ಸಂಜೆ 7. ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ 1.05ಕ್ಕೆ ಲಾತೂರ್ ತಲುಪಲಿದೆ. ರೈಲು ಸಂಖ್ಯೆ 06584 ಲಾತೂರ್ ನಿಂದ ಗುರುವಾರ, ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಾತೂರ್ ನಿಂದ ಹೊರಟು ಮರುದಿನ 7.40ಕ್ಕೆ ಯಶವಂತಪುರ ತಲುಪಲಿದೆ.
0 التعليقات: