Tuesday, 24 November 2020

ಹೆಚ್ಚುತ್ತಿರುವ ಕೊರೋನಾ : ಸಿಎಂಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ಪ್ರಧಾನಿ ಮೋದಿ


 ಹೆಚ್ಚುತ್ತಿರುವ ಕೊರೋನಾ : ಸಿಎಂಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ಕೋವಿಡ್‌ ಪ್ರಕರಣಗಳು ಏರಿಕೆಯಾಗಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿ, ಪರಿಸ್ಥಿತಿಯ ವಿವರ ಪಡೆದರು.

ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್, ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ (ರಾಜಸ್ಥಾನ), ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ), ಉದ್ಧವ್ ಠಾಕ್ರೆ (ಮಹಾರಾಷ್ಟ್ರ), ಭೂಪೇಶ್ ಬಘೇಲ್ (ಛತ್ತೀಸಗಡ) ಮತ್ತು ವಿಜಯ್ ರೂಪಾಣಿ (ಗುಜರಾತ್) ಅವರು ವಿಡಿಯೊ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು.

ಕೋವಿಡ್ ಲಸಿಕೆ ವಿತರಣೆ ಕಾರ್ಯತಂತ್ರ ಕುರಿತಂತೆಯೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ಜೊತೆಗೂ ಪ್ರಧಾನಿ ಚರ್ಚಿಸಿದರು. ಇದರ ಜೊತೆಗೆ ಕೊರೋನಾ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ಫ್ಯೂ ಜಾರಿ ಕುರಿತು ಸಹ ಸಮಾಲೋಚನೆ ನಡೆಸಿದ್ದಾರೆ.


SHARE THIS

Author:

0 التعليقات: