ಎಸ್.ವೈ.ಎಸ್ ಪುತ್ತೂರು ಸೆಂಟರ್ ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್
ಪುತ್ತೂರು : ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಹಾದಿಯಲ್ಲಿ ಗೆಲುವಿದೆ ಎಂಬ ಘೋಷಣೆಯಡಿಯಲ್ಲಿ ಎಸ್ ವೈ ಎಸ್ ಪುತ್ತೂರು ಸೆಂಟರ್ ವತಿಯಿಂದ ಬೃಹತ್ ಮೀಲಾದ್ ಕಾರ್ಯಕ್ರಮ ನಡೆಯಿತು. ಸೆಂಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ ಅಧ್ಯಕ್ಷತೆ ವಹಿಸಿದರು .
ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ಪ್ರಾರ್ಥನೆ ನಡೆಸಿದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಸ್ ವೈ ಎಸ್ ಈಸ್ಟ್ ಜಿಲ್ಲಾ ಅಧ್ಯಕ್ಷ ಅಬೂಬಕರ್ ಸಅದಿ ಮಜೂರುರವರು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂರವರ ಆದರ್ಶ ಬದುಕು ಜಗತ್ತಿಗೆ ಮಾದರಿಯಾಗಿದ್ದು , ಅವರ ಅನುಕರಣೆಯಿಂದ ಮಾತ್ರ ವಿಶ್ವಶಾಂತಿ ಸಿಗಲಿದೆ ಎಂದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಸಾಂದರ್ಭಿಕವಾಗಿ ಮಾತನಾಡಿದರು .
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಟೋ ಇದರ 200 ನೇ ಬ್ಲಡ್ ಕ್ಯಾಂಪ್ ನವಂಬರ್ 9 ರಂದು ಮಿತ್ತೂರು ಕೆಜಿಎನ್ ದಾರುಲ್ ಇರ್ಶಾದ್ ನಲ್ಲಿ ನಡೆಯಲಿದ್ದು , ಯಶಸ್ಸಿಗಾಗಿ ಕರೆ ನೀಡಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಸಮಿತಿ ನಾಯಕರಾದ ಆದಂ ಹಾಜಿ ಪಡೀಲ್ , ಹಸೈನಾರ್ ಹಾಜಿ ಮಜ್ಮ ಕೊಡಿಪ್ಪಾಡಿ, ಇಸ್ಮಾಯಿಲ್ ಹಾಜಿ ಬನ್ನೂರು , ಎಸ್ ವೈ ಎಸ್ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ , ಜಿಲ್ಲಾ ನಾಯಕರಾದ ಎಂ ಎಚ್ ಹಾಜಿ ಉಪ್ಪಿನಂಗಡಿ, ಅಬ್ದುಲ್ಲಾ ಮುಸ್ಲಿಯಾರ್, ಎಸ್.ಎಂ.ಎ. ರಾಜ್ಯ ಉಪಾಧ್ಯಕ್ಷರಾದ ಹಮೀದ್ ಹಾಜಿ ಕೊಡುಂಗಾಯಿ , ಇಸ್ಮಾಯಿಲ್ ಮಾಸ್ಟರ್ ಮಂಗಳಪದವು , ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಆರ್ ಖಾನ್ ಕುಂದಾಪುರ , ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರುಗಳಾದ ಶಾಕಿರ್ ಹಾಜಿ ಮಿತ್ತೂರು, ನವಾಝ್ ಭಟ್ಕಳ, ಅಶ್ರಫ್ ರಝಾ ಆಮ್ಜದಿ , ಕಬೀರ್ ಅಮ್ಜದಿ ಹೊನ್ನಾವರ , ಕೆ.ಎಂ.ಎಚ್ ಝುಹ್ರಿ ಕೊಂಬಾಳಿ , ಎಸ್ಸೆಸ್ಸೆಫ್ ಜಿಲ್ಲಾ ನಾಯಕರಾದ ರಶೀದ್ ಹಾಜಿ ವಗ್ಗ , ಕರೀಂ ಬೊಳಂತೂರು , ಮಹಮ್ಮದಲಿ ತುರ್ಕಳಿಕೆ , ಶರೀಫ್ ಚೆರ್ಕಳ , ಇಕ್ಬಾಲ್ ಮಾಚಾರ್, ಮುಸ್ತಫಾ ಯು.ಪಿ. , ಸಲೀಂ ಹಾಜಿ ಬೈರಿಕಟ್ಟೆ, ಎಸ್ಸೆಸ್ಸೆಫ್ ಈಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್, ಪುತ್ತೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ಬ್ಲಡ್ ಸೈಬೋ ಉಸ್ತುವಾರಿ ಹಾರಿಸ್ ಅಡ್ಕ, ಎಸ್ ವೈ ಎಸ್ ಪುತ್ತೂರು ಸೆಂಟರ್ ಇಸಾಬ ಅಮೀರ್ ಶಾಹುಲ್ ಹಮೀದ್ ಕಬಕ, ಅಬ್ಬು ನರಿಮೊಗರು, ಉಮರ್ ನರಿಮೊಗರು, ಜಮಾಲ್ ಮೈದಾನಿ ಮೂಲೆ, ಹಸನ್ ಸಅದಿ, ಮುಕ್ವೆ ಬಾಖವಿ ಉಸ್ತಾದ್, ಫಾರೂಕ್ ಬನ್ನೂರು, ರಫೀಕ್ ಬೀಟಿಗೆ, ಕಸ್ತೂರಿ ಹಾಜಿ, ಉಮರ್ ಕುಕ್ಕಿಲ, ಫಾಳಿಲಿ ಕಬಕ, ಅಬ್ದುಲ್ ಖಾದರ್ ಸಾಲ್ಮರ, ಖಾದರ್ ಮರಿಕೆ ಉಪಸ್ಥಿತಿಯಿದ್ದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಸಾಲಿಹ್ ಮುರ ಕಾರ್ಯಕ್ರಮ ನಿರೂಪಿಸಿದರು.
0 التعليقات: