ಉಗ್ರರ ಜತೆಗೆ ಸಂಪರ್ಕ: ಪಿಡಿಪಿ ನಾಯಕನ ಬಂಧಿಸಿದ ಎನ್ ಐಎ
ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಬುಧವಾರ ಭಯೋತ್ಪಾದನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಯುವ ಘಟಕದ ಅಧ್ಯಕ್ಷ ವಹೀದ್ ಪರ್ರಾ ಅವರನ್ನು ಬಂಧಿಸಿದೆ.
ಮುಜಾಹಿದ್ದೀನ್ ಉಗ್ರ ಸಂಘಟನೆಯ ಜತೆಗೆ ವಹೀದ್ ಸಂಪರ್ಕವಿದೆ ಎನ್ನುವ ಆರೋಪದ ಮೇಲೆ ಎನ್ ಐಎ ಬಂಧಿಸಿದೆ.
ಉಗ್ರರೊಂದಿಗೆ ಸಂಪರ್ಕವಿದ್ದ ಡಿಎಸ್ ಪಿ ದೇವೇಂದರ್ ಸಿಂಗ್ ತನಿಖೆ ವೇಳೆ ವಹೀದ್ ಹೆಸರು ಬಹಿರಂಗವಾಗಿದೆ. ಇದರಿಂದ ಆತನನ್ನು ಬಂಧಿಸಲಾಗಿದೆ ಎಂದು ಎನ್ ಐಎ ಮಾಹಿತಿ ನೀಡಿದೆ.
0 التعليقات: