Monday, 16 November 2020

ಬೆಂಗಳೂರಿನಲ್ಲಿ ಶಾರ್ಟ್ ಸೆರ್ಕ್ಯೂಟ್'ನಿಂದ ಹೊತ್ತಿ ಉರಿದ ಪಬ್

 

ಬೆಂಗಳೂರಿನಲ್ಲಿ ಶಾರ್ಟ್ ಸೆರ್ಕ್ಯೂಟ್'ನಿಂದ ಹೊತ್ತಿ ಉರಿದ   ಪಬ್

ಬೆಂಗಳೂರು: ಇಲ್ಲಿನ ಹೊಸೂರು - ಸರ್ಜಾಪುರ ರಸ್ತೆ (ಹೆಚ್ ಎಸ್ ಆರ್) ಬಡಾವಣೆಯ ಹ್ಯಾಂಗ್ ಓವರ್ ಪಬ್ ನಲ್ಲಿ ಶಾರ್ಟ್

ಸರ್ಕ್ಯೂಟ್ ನಿಂದ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ಸೋಮವಾರ ಮಧ್ಯಾಹ್ನ 12:30ರ ಸುಮಾರಿನಲ್ಲಿ ಪಬ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾರ್ಟ್ ಸೆರ್ಕ್ಯೂಟ್ ವಿಷಯ ತಿಳಿಯುತ್ತಿದ್ದಂತೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹ್ಯಾಂಗ್ ಓವರ್ ಪಬ್ ಬಳಿ ಬಂದು ಶೀಘ್ರ ಬೆಂಕಿ ನಂದಿಸಲು ಸಹಕರಿಸಿದರು. ಜೊತೆಗೆ ಶಾರ್ಟ್ ಸೆರ್ಕೂಟ್ ಘಟನೆ ಬಗ್ಗೆ ಅಧಿಕಾರಿಗಳಿದ ಸಂಪೂರ್ಣ ಮಾಡಿದರು.

ಪಬ್ ಭಾಗಶಃ ಸುಟ್ಟು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲಿ.


SHARE THIS

Author:

0 التعليقات: