Wednesday, 25 November 2020

ಬೈಡನ್‌ಗೆ ಅಭಿನಂದಿಸಿದ ಷಿ ಜಿನ್‌ಪಿಂಗ್‌


 ಬೈಡನ್‌ಗೆ ಅಭಿನಂದಿಸಿದ ಷಿ ಜಿನ್‌ಪಿಂಗ್‌

ಬೀಜಿಂಗ್‌: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್‌ಗೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಬುಧವಾರ ಅಭಿನಂದನೆ ಸಲ್ಲಿಸಿದ್ದಾರೆ.

'ಚೀನಾ ಮತ್ತು ಅಮೆರಿಕದ ಸಂಬಂಧದ ಆರೋಗ್ಯಕರ ಹಾಗೂ ಸ್ಥಿರ ಅಭಿವೃದ್ಧಿಯು, ಎರಡೂ ರಾಷ್ಟ್ರಗಳ ಜನರ ಮೂಲಭೂತ ಹಿತಾಸಕ್ತಿಯನ್ನು ಕಾಪಾಡಲಿದ್ದು, ಜೊತೆಗೆ ಅಂತರರಾಷ್ಟ್ರೀಯ ಸಮುದಾಯದ ಸರ್ವಸಮಾನವಾದ ನಿರೀಕ್ಷೆಯನ್ನೂ ಈಡೇರಿಸಲಿದೆ' ಎಂದು ಷಿ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

'ಎರಡೂ ರಾಷ್ಟ್ರಗಳ ನಡುವಿನ ಸಮನ್ವಯದ ವೃದ್ಧಿ, ಪರಸ್ಪರ ಗೌರವ, ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವ ಮನೋಭಾವವನ್ನು ಎರಡೂ ರಾಷ್ಟ್ರಗಳು ಎತ್ತಿಹಿಡಿಯಲಿದೆ. ಶಾಂತಿ ಹಾಗೂ ಅಭಿವೃದ್ಧಿಗಾಗಿ ಎರಡೂ ರಾಷ್ಟ್ರಗಳು ಇತರೆ ರಾಷ್ಟ್ರಗಳೊಂದಿಗೆ ಕೈಜೋಡಿಸಲಿದೆ ಎಂದು ನಂಬಿದ್ದೇನೆ' ಎಂದು ಷಿ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.


SHARE THIS

Author:

0 التعليقات: