Wednesday, 11 November 2020

ಕಂಡನ್ ಅರಿವಾಳನ್


ಕಂಡನ್ ಅರಿವಾಳನ್


ಕೇರಳ ರಾಜ್ಯವನ್ನು ಲೋಕದಲ್ಲೆಡೆ ಪರಿಚಯಿಸಿಯೂ, ಅರಬಿ ಮಲಯಾಳಂ ಎಂಬ ಒಂದು ಭಾಷೆಯನ್ನೂ ಕೊಡುಗೆ ನೀಡಿಯೂ, ಅರಬೀ ಮಲಯಾಳದ ಹಲವಾರು ಸಾಹಿತ್ಯಗಳಲ್ಲದೆ ಆತ್ಮೀಯ ಲೋಕದ ಬೆಳಕಾಗಿಯೂ ಇಂದು ಕೂಡ ಪ್ರಕಾಶಿಸುತ್ತಿರುವ ಮುಹಿಯದ್ದೀನ್ ಮಾಲೆ ರಚಿಸಿದ ಓರ್ವ ಪಂಡಿತರಾಗಿದ್ದಾರೆ ಕೋಝಿಕ್ಕೋಡ್ ಖಾಝೀ ವಂಶ ಪರಂಪರೆಯಲ್ಲಿ ಜನಿಸಿದ ಖಾಝೀ ಮುಹಮ್ಮದ್ (ಖ). ಖಾಝೀ ಕುಟುಂಬದ ಪಿತಾ  ಮಾಲಿಕಿಬಿನ್ ಹಬೀಬ್ ಎಂಬವರು. ಚಾಲಿಯಂ ಎಂಬ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಿಸುತ್ತಿದ್ದ ಖಾಝಿಗಳು.  ನಂತರ ತಮ್ಮ ಆಸ್ಥಾನವನ್ನು ಕೋಝಿಕ್ಕೋಡಿಗೆ ಬದಲಾಯಿಸಿದರು. ಪ್ರಾರಂಭಿಕ  ಧಾರ್ಮಿಕ ವಿದ್ಯೆಯನ್ನು ತಂದೆಯಿಂದ ಕಲಿತರು. ಪ್ರಸಿದ್ಧ ಆತ್ಮ ಜ್ಞಾನಿ ಉಸ್ಮಾನ್ ಲಬ್ಬಲ್ ಖಾಹಿರಿ(ರ) ರವರಿಂದ ಉನ್ನತ ವಿದ್ಯಾಭ್ಯಾಸ ಮಾಡಿದರು. ಹದೀಸ್, ಕುರ್ಆನ್  ವ್ಯಾಖ್ಯಾನ, ಕರ್ಮ ಶಾಸ್ತ್ರ, ಗೋಳ ಶಾಸ್ತ್ರ, ನಿದಾನ ಶಾಸ್ತ್ರ, ಫಿಲೋಸಫಿ ಮುಂತಾದ ವಿವಿಧ ಶಾಖೆಗಳಲ್ಲಿ ಜ್ಞಾನ ಕಲಿತರು. ಬಹು ಭಾಷಾ ಪಂಡಿತರಾಗಿದ್ದರು. ಸಾಮೂದಿರಿಯ ಕಾಲದಲ್ಲಾಗಿತ್ತು ಖಾಝೀ ಮುಹಮ್ಮದ್ ರವರು ಖಾಝಿಯಾಗಿ ಆಯ್ಕೆ ಆದದ್ದು. ಕೋಝಿಕ್ಕೋಡ್ ಕುಟ್ಟಿಚ್ಚಿರ ಜುಮುಅತ್ ಮಸ್ಜಿದ್ ನಲ್ಲಿ  ದೀರ್ಘ ಕಾಲ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ ಖಾಝಿರವರು 500 ಗ್ರಂಥಗಳು ಅರಬೀ ಭಾಷೆಯಲ್ಲೇ ರಚಿಸಿದ್ದಾರೆ. ಪೋರ್ಚುಗೀಸರಿಗೆ ವಿರುದ್ಧವಾದ ಚಾಲಿಯಂ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಖಾದಿರಿಯ್ಯಾ ಸೂಫಿ ಸರಣಿಯಲ್ಲಿ ಗುರುವಾಗಿದ್ದ ಖಾಝೀ ಮುಹಮ್ಮದ್ (ಖ) ವಿದೇಶಿ ಆಧಿಪತ್ಯದ ವಿರುದ್ಧ  ಶಕ್ತಿಯಾಗಿ ಹೋರಾಡಿದ ವ್ಯಕ್ತಿ ಆಗಿದ್ದರು. ಸಾಮೂದಿರಿಯ ನೌಕಾ ಪಡೆಯ ಮುಖ್ಯಸ್ಥ ಕುಞ್ಞಾಲಿ ಮರಕ್ಕಾರ್ ಮೂರನೇ ಮತ್ತು  ನಾಲ್ಕನೇಯವರು ಮಹಾನರ ಆತ್ಮೀಯ ಶಿಷ್ಯರಾಗಿದ್ದರು.
520 ಪದ್ಯಗಳು ಒಳಗೊಂಡ  ಫತುಹುಲ್ ಮುಬೀನ್ ಫೀ ಅಖ್'ಬಾರಿ ಬುರ್ತುಗಾಲಿಯ್ಯೀನ್ ಎಂಬ ಕೃತಿಯು ಪೋರ್ಚುಗೀಸರ ಕೀಳಾದ ಆಡಳಿತವನ್ನು ಮತ್ತು ಮುಸ್ಲಿಂ ವಿರುದ್ಧ ಕಾರ್ಯಗಳನ್ನು  ಉಲ್ಲೇಖಿಸುತ್ತದೆ. ಹಿಜ್ರ 1025 ರಬೀಉಲ್ ಅವ್ವಲ್ 25 ಬುಧವಾರ ಅವರು ಇಹಲೋಕ ತ್ಯಜಿಸಿದರು. ಕುಟ್ಟಿಚ್ಚಿರ ಜುಮಾ ಮಸ್ಜಿದಿನ ಮುಂದೆ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

ಅಬ್ಬಾಸ್ ಸಖಾಫಿ ಕಾವುಂಪುರಂ 
(ಮುಹಿಮ್ಮಾತ್ ಖತೀಬ್)


ಕನ್ನಡಕ್ಕೆ: ಮುಹಮ್ಮದ್ ಮುನೀರ್.ಎ ಹಿಮಮಿ ಕಬಕ

SHARE THIS

Author:

0 التعليقات: