ಇಂದು ದೇಶಾದ್ಯಂತ ಕಾರ್ಮಿಕರ ಒಕ್ಕೂಟಗಳಿಂದ ಮುಷ್ಕರ
ನವದೆಹಲಿ : ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಒಕ್ಕೂಟಗಳು ಹಾಗೂ ಕಾಂಗ್ರೆಸ್ ಅಂಗ ಪಕ್ಷಗಳು ಇಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ .
ಕೇಂದ್ರ ಸರ್ಕಾರವು ವ್ಯವಹಾರವನ್ನು ಸುಲಭಗೊಳಿಸುವ ಹೆಸರಿನಲ್ಲಿ ತನ್ನ ನೀತಿಗಳನ್ನು ಮುಂದುವರೆಸುತ್ತಿದೆ. ಇದರಿಂದ ವ್ಯಾಪಕ ಬಿಕ್ಕಟ್ಟು ಉಲ್ಬಣಗೊಳ್ಳಲಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.
ಇಂದು ನಡೆಯಲಿರುವ ಮುಷ್ಕರಕ್ಕೆ 16 ಎಡ ಸಂಘಟನೆಗಳು ಹಾಗೂ ಕಾಂಗ್ರೆಸ್ ಮಿತ್ರ ಪಕ್ಷಗಳು ಸಹ ಕೈಜೋಡಿಸಲಿವೆ. ಹೀಗಾಗಿ ದೇಶದ ಹಲವು ಭಾಗಗಳಲ್ಲಿ ಆಟೋ, ಓಲಾ, ಉಬರ್, ಮ್ಯಾಕ್ಸಿಕ್ಯಾಬ್ ಮೊದಲಾದ ವಾಹನಗಳು ಇಂದು ರಸ್ತೆಗೆ ಇಳಿಯುವುದಿಲ್ಲ. ಜನಜೀವನದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಇನ್ನು ಐಎನ್ ಟಿಯುಸಿ, ಎಐಟಿಯುಸಿ, ಎಚ್ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಇಸ, ಸೆವಾ, ಎಐಸಿಸಿಟಿಯು, ಎಲ್ ಪಿಎಫ್ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ.
0 التعليقات: