Friday, 20 November 2020

ಎಸ್.ಎಸ್.ಎಫ್ ಕಬಕ ಶಾಖೆ: ಸದಸ್ಯತ್ವ ಅಭಿಯಾನಕ್ಕೆ ಚಾಲನೆ


 ಎಸ್.ಎಸ್.ಎಫ್ ಕಬಕ ಶಾಖೆ: ಸದಸ್ಯತ್ವ ಅಭಿಯಾನಕ್ಕೆ ಚಾಲನೆ 

ಪುತ್ತೂರು: ಕರ್ನಾಟಕ ಸುನ್ನಿ ಸ್ಟೂಡೆಂಟ್ ಫೆಡರೇಶನ್(ಎಸ್.ಎಸ್.ಎಫ್) ಇದರ ಸದಸ್ಯತ್ವ ಅಭಿಯಾನಕ್ಕೆ ಕಬಕ ಶಾಖೆಯಿಂದ ಚಾಲನೆ ನೀಡುವ ಕಾರ್ಯಕ್ರಮವು ನವಂಬರ್ 14 ರಂದು ನಡೆಯಿತು. "ಹೃದಯವಿದೆಯಾ? ಸತ್ಯದ ಧ್ವನಿಯಾಗಲು" ಎಂಬ ಘೋಷಾವಾಕ್ಯದೊಂದಿಗೆ ನವಂಬರ್ 13 ರಿಂದ ನವೆಂಬರ್ 30 ರವರೆಗೆ ಎಸ್.ಎಸ್.ಎಫ್ ಕರ್ನಾಟಕದ ವತಿಯಿಂದ ಕರ್ನಾಟಕದಾದ್ಯಂತ ಸದಸ್ಯತ್ವ ಅಭಿಯಾನ ನಡೆಯಲಿದೆ. 


ಮಾಣಿ ದಾರುಲ್ ಇರ್ಶಾದ್ ಸಂಸ್ಥೆಯ  ಮ್ಯಾನೇಜರ್ ಶರೀಫ್ ಸಖಾಫಿ ರವರು ಅಬ್ದುನ್ನಾಸಿರ್ ಕಬಕ (ಸಅದಿಯ್ಯಾ ಹಿಫ್'ಳ್ ವಿದ್ಯಾರ್ಥಿ) ರವರಿಗೆ ಸದಸ್ಯತ್ವ ರಶೀದಿ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ SSF ಪುತ್ತೂರು ಡಿವಿಷನ್ ಕೋಶಾಧಿಕಾರಿ ಮಜೀದ್ ಕಬಕ, SSF ಕಬಕ ಶಾಖೆ ಅಧ್ಯಕ್ಷ ಅಶ್ರಫ್ ಕಬಕ, KCF ನಾಯಕ ಖಲಂದರ್ ಕಬಕ, SSF ಕಬಕ ಶಾಖೆ ಕಾರ್ಯದರ್ಶಿ ಸಫ್ವಾನ್, ಮುನೀರ್ ಕಬಕ, ಮನ್ಸೂರ್ ಕಬಕ ಉಪಸ್ಥಿತರಿದ್ದರು ಹಾಗೂ ಇನ್ನಿತರ ಹಲವು ಸದಸ್ಯರು ಭಾಗವಹಿಸಿದರು.SHARE THIS

Author:

0 التعليقات: