Friday, 20 November 2020

ಆದಂ ಸಖಾಫಿ ಸಹಾಯ ನಿಧಿ ಕುಂಬೋಲ್ ತಂಙಳ್ ಉದ್ಘಾಟಿಸಿದರು

 

ಆದಂ ಸಖಾಫಿ ಸಹಾಯ ನಿಧಿ ಕುಂಬೋಲ್ ತಂಙಳ್   ಉದ್ಘಾಟಿಸಿದರು  


ಕುಂಬಳೆ: ಇಪ್ಪತ್ತ ಮೂರು ವರ್ಷ ಮುಹಿಮ್ಮಾತಲ್ಲಿ ಸದರ್ ಮುಅಲ್ಲಿಂ ಆಗಿಯೂ ಮತ್ತು ಕಾಸರಗೋಡು, ದಕ್ಷಿಣಕನ್ನಡ ಜಿಲ್ಲೆಯ ಹಲವು ಮದ್ರಸಗಳಲ್ಲಿ ಸದರ್ ಮುಅಲ್ಲಿಂ ಆಗಿ ಸೇವೆ ಸಲ್ಲಿಸಿ ಕಳೆದ ತಿಂಗಳು ನಮ್ಮನ್ನಗಲಿದ ಆದಂ ಸಖಾಫಿ ಅವರ ಕುಟುಂಬವನ್ನು ಸಹಾಯ ಮಾಡಲು ಮುಹಿಮ್ಮಾತ್, ಜಿಲ್ಲಾ ಸಖಾಫಿ ಶೂರ ಮತ್ತು ಜಿಲ್ಲಾ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್  ಎಂಬ ಈ ಸಂಘಟನೆಗಳು ಸಂಯುಕ್ತವಾಗಿ  ಸಹಾಯ ಸಮಿತಿಗೆ ರೂಪ ನೀಡಲಾಯಿತು. 

    ಸಹಾಯ ನಿಧಿಯ ಉದ್ಘಾಟನೆ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ರವರು  ಉಳುವಾರ್ ಏರೋಸಾಫ್ಟ್ ಅಬ್ದುಲ್ಲಾ ಹಾಜಿ ರವರಿಂದ ಫಂಡ್ ಸ್ವೀಕರಿಸುವ ಮೂಲಕ ಮಾಡಿದರು.   

ಸಹಾಯ ಸಮಿತಿಯ ಸದಸ್ಯರಾಗಿ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ (ಚೆಯರ್ಮ್ಯಾನ್) ಸಯ್ಯಿದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್, ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕಣ್ಣವಂ, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಅಶ್ರಫ್ ಸಅದಿ ಆರಿಕ್ಕಾಡಿ (ವೈಸ್ ಚೆಯರ್ಮ್ಯಾನ್), ಕಾಟಿಪ್ಪಾರ ಅಬ್ದುಲ್ ಖಾದರ್ ಸಖಾಫಿ(ಜನರಲ್ ಕನ್ವೀನರ್), ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಜಮಾಲ್ ಸಖಾಫಿ ಆದೂರ್,ಹಾಫಿಳ್ ಶಾಫಿ ಸಖಾಫಿ ಏಣಿಯಾಡಿ, ಎ.ಕೆ ಸಅದಿ ಚುಳ್ಳಿಕ್ಕಾನಂ,ಅಬ್ದುರ್ರಹ್ಮಾನ್ ಸಅದಿ ಪಳ್ಳಪ್ಪಾಡಿ,(ಜೋಯಿನ್ ಕನ್ವೀನರ್), ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್  (ಫಿನಾನ್ಶಿಯಲ್ ಸೆಕ್ರೆಟರಿ).

ಆದಂ ಸಖಾಫಿ ಫ್ಯಾಮಿಲಿ  ವೆಲ್ಫೇಯರ್ ಫಂಡಿಗೆ ಬೇಕಾಗಿರುವ ಎಕೌಂಟ್ ಮತ್ತು  ಗೂಗಲ್ ಪೇಯೂ ಜಾರಿಗೊಳಿಸಲಾಗಿದೆ.

ACCOUNT NO: 40417101061008

ACCOUNT HOLDER: ADAM SAQAFI FAMILY WELFARE FUND

BRANCH : KERALA GRAMIN BANK PUTHIGE

IFSC: KLGB0040417

GOOGLE PAY NO: 8547350009


SHARE THIS

Author:

0 التعليقات: