Wednesday, 18 November 2020

ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ, ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪುತ್ರನ ಜೊತೆಗೆ ನಿಶ್ಚಿತಾರ್ಥ

 

ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ, ಕಾಫಿ ಡೇ      ಮಾಲೀಕ ಸಿದ್ಧಾರ್ಥ್ ಪುತ್ರನ ಜೊತೆಗೆ ನಿಶ್ಚಿತಾರ್ಥ


ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಮಾಲೀಕರಾದಂತ ದಿ.ಸಿದ್ಧಾರ್ಥ್ ಅವರ ಪುತ್ರ ಅಮರ್ತ್ಯ ಅವರ ಮದುವೆ ನಿಶ್ಚಿತಾರ್ಥ ಇಂದು ನಡೆಯಲಿದೆ.

ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಹಾಗೂ ಎಸ್ ಎಂ ಕೃಷ್ಣ ಮೊಮ್ಮಗ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪುತ್ರ ಅಮರ್ತ್ಯ ಅವರ ಜೊತೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಇಂತಹ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಹಾಗೂ ಎಸ್ ಎಂ ಕೃಷ್ಣ ಕುಟುಂಬಸ್ಥರು, ಸಂಬಂಧಿಕರಿಗೆ ಮಾತ್ರವೇ ಆಹ್ವಾನ ನೀಡಲಾಗಿದೆ.

ಅಂದಹಾಗೇ ಅಮೇರಿಕಾದಲ್ಲಿ ಶಿಕ್ಷಣ ಪಡೆದಿರುವಂತ ಅಮರ್ತ್ಯ, ತಂದೆ ಸಿದ್ಧಾರ್ಥ್ ಸಾವಿನ ಬಳಿಕ ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೇ ವ್ಯವಹಾರ ನಿರ್ವಹಿಸುತ್ತಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಇಂಜಿನಿಯರಿಂಗ್ ಪದವಿ ಮುಗಿಸಿ, ತಂದೆ ಸ್ಥಾಪಿಸಿರುವಂತ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇಂತಹ ಇವರಿಬ್ಬರ ನಿಶ್ಚಿತಾರ್ಥ ಕಳೆದ ಜೂನ್ 12ರಂದೇ ನಿಗಧಿ ಮಾಡಲಾಗಿತ್ತು. ಆದ್ರೇ ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದು, ಇದೀಗ ಇಂದು ನಡೆಯಲಿದೆ. 2021ರ ಫೆಬ್ರವರಿಯಲ್ಲಿ ಅಮರ್ತ್ಯ ಹಾಗೂ ಐಶ್ವರ್ಯಾ ವಿವಾಹ ನೆರವೇರಲಿದೆ ಎನ್ನಲಾಗಿದೆ.SHARE THIS

Author:

0 التعليقات: