Tuesday, 10 November 2020

ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು : ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿಸಾಧಿಸಿದ್ದಾರೆ.

 

ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು : ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿಸಾಧಿಸಿದ್ದಾರೆ.

ನವದೆಹಲಿ : ರಾಜ್ಯದಲ್ಲಿನ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.

ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್​ ನಲ್ಲಿ ಕನ್ನಡದಲ್ಲಿಯೇ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. 'ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅತ್ಯಂತ ವಿಶೇಷವಾದದ್ದು. ಕೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದ ಸುಧಾರಣಾ ಕಾರ್ಯಸೂಚಿಗಳ ಮೇಲೆ ಜನರು ಹೊಂದಿರುವ ಸ್ಥಿರ ವಿಶ್ವಾಸವನ್ನು ಇದು ಪುನಃ ದೃಢೀಕರಿಸುತ್ತದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

'ನಮ್ಮ ಕಾರ್ಯಕರ್ತರ ಶ್ರಮ ಹಾಗೂ ಜನರ ಬೆಂಬಲಕ್ಕೆ ನನ್ನ ಧನ್ಯವಾದಗಳು' ಎಂದಿದ್ದಾರೆ.ಇನ್ನು ದೇಶದೆಲ್ಲೆಡೆ ಬಿಜೆಪಿಗೆ ಗೆಲುವು ನೀಡಿದ ಜನರಿಗೆ ಪ್ರಧಾನಿ ಮೋದಿ ಶುಭ ಕೋರಿದ್ದಾರೆ.


SHARE THIS

Author:

0 التعليقات: