Sunday, 8 November 2020

ಬ್ಯಾಂಕ್ ಗ್ರಾಹಕರಿಗೆ 'ಬಿಗ್‌ ಶಾಕ್'‌ : ಸದ್ದಿಲ್ಲದೇ ಶುಲ್ಕ ವಸೂಲಿಗೆ ಸಿದ್ದತೆ.!?

 

ಬ್ಯಾಂಕ್ ಗ್ರಾಹಕರಿಗೆ 'ಬಿಗ್‌ ಶಾಕ್'‌ : ಸದ್ದಿಲ್ಲದೇ ಶುಲ್ಕ ವಸೂಲಿಗೆ ಸಿದ್ದತೆ.!?

ಡಿಜಿಟಲ್‌ಡೆಸ್ಕ್‌: ಕರೋನ ವೈರಸ್‌ ನಡುವೆ ತಲೆದೂರಿರುವ ಹಣಕಾಸಿನ ಬಿಕ್ಕಟ್ಟಿನಲ್ಲಿ ಬ್ಯಾಂಕ್‌ ಗ್ರಾಹಕರು ಹಾಗೂ ಬ್ಯಾಂಕ್‌ಗಳು ಎರಡು ಕೂಡ ಸುಸ್ತಾಗಿ ಹೋಗಿದ್ದಾವೆ. ಈ ನಡುವೆ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳು ಹಣ ಮಾಡಲು ಹೊಸ ಮಾರ್ಗಗಳನ್ನು ಹುಡುಕುತ್ತಿವೆ.ಈ ನಡುವೆ ಕೆಲವು ದಿನಗಳ ಹಿಂದೆ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಂದ ಸಾಮಾನ್ಯ ದಿನಗಳಲ್ಲಿ ಮತ್ತು ಬ್ಯಾಂಕ್ ರಜಾದಿನಗಳಲ್ಲಿ ವ್ಯಾಪಾರದ ನಂತರ ಮರುಬಳಕೆ ಯಂತ್ರಗಳಲ್ಲಿ ನಗದು ಠೇವಣಿ ಮಾಡಿದರೆ, ಗ್ರಾಹಕರಿಂದ ಅನುಕೂಲಶುಲ್ಕವನ್ನು ವಿಧಿಸಲು ಪ್ರಾರಂಭಿಸಿದ್ದು. ಈ ಹೊಸ ನಿಯಮಗಳು ನವೆಂಬರ್ ನಲ್ಲಿ ಜಾರಿಗೆ ಬಂದಿದ್ದಾವೆ.

ಬ್ಯಾಂಕ್ ಆಫ್ ಬರೋಡಾ ಕೂಡ ಗ್ರಾಹಕರಿಗೆ ಹೆಚ್ಚಿನ ನಗದು ನಿರ್ವಹಣೆ ಶುಲ್ಕ ವಿಧಿಸುವುದಾಗಿ ಘೋಷಿಸಿತ್ತಾದರೂ, ನಂತರ ಬ್ಯಾಂಕ್ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ.ಸಾರ್ವಜನಿಕ ವಲಯದ ಯಾವುದೇ ಬ್ಯಾಂಕ್ ಇತ್ತೀಚೆಗೆ ಇಂತಹ ಶುಲ್ಕಗಳನ್ನು ಹೆಚ್ಚಿಸಿಲ್ಲ ಮತ್ತು ಭವಿಷ್ಯದಲ್ಲಿ ಶುಲ್ಕ ಗಳನ್ನು ಹೆಚ್ಚಿಸುವ ಬಗ್ಗೆ ಬ್ಯಾಂಕ್ ಗಳು ನಿರ್ಧರಿಸಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ. ಕೆಲವು ಖಾಸಗಿ ಬ್ಯಾಂಕ್ ಗಳು ಸಾಲದ ಬಾಕಿಯ ಶೇ 0.5ರಷ್ಟು ಶುಲ್ಕ ವಸೂಲಿ ಮಾಡುತ್ತಿರುವುದನ್ನು ಇಲ್ಲಿ ಗಮನಿಸಬಹುದು ಎಂದು ಬ್ಯಾಂಕಿಂಗ್ ವಲಯದ ಮೂಲಗಳು ತಿಳಿಸಿವೆ. ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ ಗಳು ಕೂಡ ಸಾಲ ಮರುವಸೂಲಿಗಾಗಿ ಹೆಚ್ಚಿನ ಬಡ್ಡಿ ದರ ಗಳನ್ನು ವಸೂಲಿ ಮಾಡುತ್ತಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಹೆಚ್ಚುವರಿ 35 ಬೇಸಿಸ್ ಪಾಯಿಂಟ್ (ಬಿಪಿಎಸ್) ಶುಲ್ಕ ವಿಧಿಸಿದ್ದರೆ, ಬಹುತೇಕ ಖಾಸಗಿ ಬ್ಯಾಂಕ್ ಗಳು 50 ಬಿಪಿಎಸ್ ಗಿಂತ ಹೆಚ್ಚಿನ ದರ ವಸೂಲಿ ಗೆ ಶುಲ್ಕ ವಿಧಿಸುತ್ತಿವೆ.



SHARE THIS

Author:

0 التعليقات: