'ಹೆಂಡತಿಗೆ ದುಡಿಯುವ ಸಾಮರ್ಥ್ಯ'ವಿದೆ ಎಂದು 'ಜೀವಾಂಶ ಕಡಿತ'ಗೊಳಿಸಲಾಗದು - ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು
ನವದೆಹಲಿ : ಪತ್ನಿ ದುಡಿಯುತ್ತಿದ್ದಾಳೆ ಎನ್ನುವ ಕಾರಣಕ್ಕಾಗಿ ಅನೇಕ ಗಂಡಂದಿರು ಜೀವನಾಂಶ ಕಡಿತಗೊಳಿಸುವಂತೆ ಕೋರ್ಟ್ ಗೆ ಮನವಿ ಮಾಡುತ್ತಿದ್ದರು. ಇಂತಹ ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದೇ ಹೆಂಡತಿಗೆ ದುಡಿಯುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ, ಜೀವನಾಂಶ ಕಡಿತ ಮಾಡಲು ಸಮರ್ಪಕ ಕಾರಣವಲ್ಲ ಎಂಬುದಾಗಿ ಹೇಳಿದೆ.
ಬೆಂಗಳೂರಿನ ವ್ಯಕ್ತಿಯೊಬ್ಬರು ಹೆಂಡತಿಗೆ 50 ಸಾವಿರ ಜೀವನಾಂಶ ನೀಡಬೇಕು ಎಂಬ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯೊಂದರ ವಿಚಾರಣೆ ನಡೆಸಿದಂತ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ ರಿ ಅವರ ಪೀಠವು, ಹೆಂಡತಿಗೆ ದುಡಿಯುವ ಸಾಮರ್ಥ್ಯ ಇದೆ ಎಂಬುದು ಕುಟುಂಬ ನ್ಯಾಯಾಲಯವು ನಿಗದಿ ಮಾಡಿರುವ ಜೀವನಾಂಶವನ್ನು ಕಡಿತ ಮಾಡಲು ಸಮರ್ಪಕ ಕಾರಣ ಆಗುವುದಿಲ್ಲ ಎಂಬು ತಿಳಿಸಿದೆ.
ಅರ್ಜಿದಾರ ವ್ಯಕ್ತಿಯು ತಿಂಗಳಿಗೆ ₹1.68 ಲಕ್ಷ ದುಡಿಯುತ್ತಿದ್ದಾರೆ. ತಮ್ಮ ಹೆಂಡತಿಯು ಸ್ವತಂತ್ರವಾಗಿ ವಕೀಲಿಕೆ ಮಾಡಿ ಕೊಂಡಿದ್ದಾರೆ ಎಂದು ಆ ವ್ಯಕ್ತಿ ವಾದಿಸಿದ್ದರು. ಆದರೆ, ಹೆಂಡತಿಯು ಇದನ್ನು ನಿರಾಕರಿಸಿದ್ದಾರೆ. ವಕೀಲ ವೃತ್ತಿ ಕೈಗೊಳ್ಳುವ ಅರ್ಹತೆ ತಮಗೆ ಇದೆ. ಆದರೆ, ಸದ್ಯಕ್ಕೆ ತಾವು ಹೆತ್ತವರನ್ನೇ ಪೂರ್ಣವಾಗಿ ಅವಲಂಬಿಸಿರುವುದಾಗಿ ತಿಳಿಸಿದ್ದಾರೆ.
ಜೀವನಾಂಶಕ್ಕೆ ಸಂಬಂಧಿಸಿ, ಹೆಂಡತಿಗೆ ದುಡಿಯುವ ಸಾಮರ್ಥ್ಯ ಇದೆ ಎಂದು ವಾದಿ ಸಿದ ಅರ್ಜಿಗಳು ಈ ಹಿಂದೆಯೂ ಈ ನ್ಯಾಯಾಲಯದ ಮುಂದೆ ಬಂದಿದ್ದವು. ದುಡಿಯುವ ಸಾಮರ್ಥ್ಯ ಮತ್ತು ನಿಜವಾದ ದುಡಿಮೆ ಎರಡು ಭಿನ್ನ ವಿಷಯಗಳು ಎಂದು ದೆಹಲಿ ಹೈಕೋರ್ಟ್ ನ್ಯಾಯ ಪೀಠವು ತಿಳಿಸಿದೆ.
ವಿಚಾರಣಾ ನ್ಯಾಯಾಲಯದ ತೀರ್ಪನ್ನು ಬದಲಾಯಿಸದೆ ಇರಲು ಹೈಕೋರ್ಟ್ ನಿರ್ಧರಿಸಿದೆ. ಅರ್ಜಿದಾರ ವ್ಯಕ್ತಿಯ ತಿಂಗಳ ಸಂಬಳದ ಮೊತ್ತವನ್ನು ಮೂರು ಭಾಗ ಮಾಡಿ ಒಂದು ಭಾಗವನ್ನು ಹೆಂಡತಿಗೆ ಜೀವನಾಂಶವಾಗಿ ನೀಡಲು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವು ಸಂಪೂರ್ಣವಾಗಿ ಸಮರ್ಥನೀಯ ಎಂದು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.
0 التعليقات: