Monday, 23 November 2020

ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ `ನಿವಾರ್' ಚಂಡಮಾರುತ : ರೆಡ್ ಅಲರ್ಟ್ ಘೋಷಣೆ


ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ `ನಿವಾರ್' ಚಂಡಮಾರುತ : ರೆಡ್ ಅಲರ್ಟ್ ಘೋಷಣೆ

ಚೆನ್ನೈ : ನಾಳೆ (ನವೆಂಬರ್ 25) ತಮಿಳುನಾಡು ಹಾಗೂ ದಕ್ಷಿಣ ಆಂಧ್ರ ಪ್ರದೇಶಕ್ಕೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ಮೈಲಾಡುತುರೈ ಜಿಲ್ಲೆ ಸೇರಿದಂತೆ ಮಾಮಲ್ಲಪುರಂ ಮತ್ತು ಕಾರೈಕಾಲ್ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ನಿವಾನ್ ಚಂಡಮಾರುತದ ಸಂದರ್ಭದಲ್ಲಿ ಗಾಳಿಯ ವೇಗ ವು ಗಂಟೆಗೆ 100 ಕಿ.ಮೀ. ಇರಲಿದ್ದು, ರಾಯಲಸೀಮಾ ಮತ್ತು ದಕ್ಷಿಣ ಕರಾವಳಿ ಜಿಲ್ಲೆಗಳ ನಿರ್ಜನ ಪ್ರದೇಶಗಳಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆ ಯನ್ನು ಉಂಟುಮಾಡಬಹುದು' ಎಂದು ಐಎಂಡಿಯ ಆಂಧ್ರ ಪ್ರದೇಶ ನಿರ್ದೇಶಕ ಎಸ್ ಸ್ಟೆಲ್ಲಾ ಹೇಳಿದ್ದಾರೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ವಿಶಾಖಪಟ್ಟಣ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಬೀಳುವ ಸಾಧ್ಯತೆ ಇದೆ. ವಿಪತ್ತು ನಿರ್ವಹಣೆ, ಪೊಲೀಸ್, ಅರಣ್ಯ, ಆರೋಗ್ಯ ಸೇವೆಗಳು ಸೇರಿದಂತೆ ಇನ್ನಿತರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ.SHARE THIS

Author:

0 التعليقات: