ಜಮ್ಮು ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ : ನಾಲ್ವರು ಯೋಧರು ಹುತಾತ್ಮ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಛಿಲ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಯನ್ನು ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದ್ದು, ಕಾರ್ಯಚರಣೆಯಲ್ಲಿ ಸೇನಾಧಿಕಾರಿ ಹಾಗೂ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಬಿಎಸ್ಎಫ್ ಯೋಧರು ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದಾಗ ಎಲ್ಒಸಿ ಬಳಿ ಉಗ್ರರ ಚಲನ ವಲನ ಪತ್ತೆಯಾಗಿದೆ. ಉಗ್ರರು ಸೇನೆ ಮೇಲೆ ದಾಳಿ ನಡೆಸಿದಾಗ , ಸೇನೆಯ ಪ್ರತಿದಾಳಿಯಲ್ಲಿ ಮೂವರ ಹತ್ಯೆ ಮಾಡಿದ್ದಾರೆ.
ಹತ್ಯೆಯಾದ ಉಗ್ರರ ಬಳಿಯಿಂದ ಅಪಾರ ಪ್ರಮಾಣ ಗುಂಡುಗಳು, ಎಕೆ-47 ರೈಫಲ್ಗಳು ಮತ್ತು ನಕ್ಷೆ-ದಾಖಲೆಗಳಿದ್ದ ಎರಡು ಬ್ಯಾಗ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇನ್ನು ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ, ದುರಾದೃಷ್ಟವಶಾತ್ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಕ್ಯಾಪ್ಟನ್ ಅಶುತೋಷ್ ಕುಮಾರ್, , ಹವಾಲ್ದಾರ್ ಪ್ರವೀಣ್ ಕುಮಾರ್, ರೈಫಲ್ಮ್ಯಾನ್ ಮಹೇಶ್ವರ್ ಹುತಾತ್ಮರಾಗಿದ್ದಾರೆ.
0 التعليقات: