Wednesday, 25 November 2020

ಕೋವಿಡ್ : ಮೃತ ದೇಹ ಸಂಸ್ಕರಣಾ ನಿಯಮದಲ್ಲಿ ಸಡಿಲಿಕೆಗೊಳಿಸಿದ ಸರ್ಕಾರದ ತೀರ್ಮಾನ ಸಂತೋಷದಾಯಕ ಎಂದು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಉಸ್ತಾದ್


 ಕೋವಿಡ್ : ಮೃತ ದೇಹ  ಸಂಸ್ಕರಣಾ ನಿಯಮದಲ್ಲಿ ಸಡಿಲಿಕೆಗೊಳಿಸಿದ ಸರ್ಕಾರದ ತೀರ್ಮಾನ ಸಂತೋಷದಾಯಕ  ಎಂದು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ  ಉಸ್ತಾದ್

ಕಲ್ಲಿಕೋಟೆ: ಕೋವಿಡ್ ರೋಗದಿಂದ ಮರಣಹೊಂದಿದವರ ಮೃತ ದೇಹ ಸಂಸ್ಕರಣೆ ನಿಯಮ ಸಡಿಲಿಕೆಗೊಳಿಸಿದ ಕೇರಳ ಸರ್ಕಾರ. ಸರ್ಕಾರದ ತೀರ್ಮಾನವನ್ನು ಕೇರಳ ಆರೋಗ್ಯ ಮಂತ್ರಿ ಕೆ.ಕೆ ಶೈಲಜ ಟೀಚರ್ ರವರು ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಜನರಲ್ ಸೆಕ್ರೆಟರಿ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರಿಗೆ ಫೋನ್ ಮಾಡಿ ತಿಳಿಸಿದರು. ಮಯ್ಯಿತ್ ಕಫನ್ ಮಾಡಲು ಮತ್ತು ಧರ್ಮದ ನಿಯಮಾನುಸಾರ ಧಫನ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಮಂತ್ರಿ ಟೆಲಿಫೋನ್  ಮಾತುಕತೆಯ ವೇಳೆ ಹೇಳಿದರು.  

ಕೋವಿಡ್ ರೋಗದಿಂದ ಮರಣಹೊಂದಿದವರ ಮೃತ ದೇಹಗಳ ಮರಣಾನಂತರದ ಕಾರ್ಯಗಳು ಮಾಡಲಾಗದೆ ಧಫನ್ ಮಾಡಲಿರುವ ಬಗ್ಗೆ ತಿಂಗಳ ಹಿಂದೆಯೇ ಕಾಂತಪುರಂ ಉಸ್ತಾದ್ ರವರು ಮುಖ್ಯ ಮಂತ್ರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದರು ಮತ್ತು  ಫೋನ್ ಮೂಲಕ ಮುಖ್ಯ ಮಂತ್ರಿಗೆ ವಿಷಯ ಮನವರಿಕೆ ಮಾಡಿ ಕೊಟ್ಟಿದ್ದರು. ಈ ವಿಷಯದಲ್ಲಿ ಉತ್ತಮ ನಿರ್ಧಾರ ತೆಗೆಯುವುದಾಗಿ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ರವರು ಭರವಸೆ ನೀಡಿದ್ದರು. 

ಬಹಳಷ್ಟು ಸಂತೋಷ ನೀಡುವ ನಿರ್ಧಾರವಾಗಿದೆ ಮೃತ ದೇಹ ಸಂಸ್ಕರಣೆಯ ವಿಷಯದಲ್ಲಿ ಉಂಟಾದದ್ದು ಎಂದೂ, ವಿಶ್ವಾಸಿಗಳ ಆಗ್ರಹವನ್ನು ಪರಿಗಣಿಸಿ ಉತ್ತಮ ನಿರ್ಧಾರ ತೆಗೆದ ಕೇರಳ  ಮುಖ್ಯ ಮಂತ್ರಿಯನ್ನು ಮತ್ತು ಆರೋಗ್ಯ ಮಂತ್ರಿಯನ್ನು ಅಭಿನಂದಿಸುತ್ತೇನೆ ಎಂದು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್.


SHARE THIS

Author:

0 التعليقات: