ಕೊರೊನಾ ಲಸಿಕೆ : ದೇಶದ ಜನತೆಗೆ ಪ್ರಧಾನಿ ಮೋದಿ ಮತ್ತೊಂದು ಗುಡ್ ನ್ಯೂಸ್
ನವದೆಹಲಿ : ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕೊರೊನಾ ವೈರಸ್ ಗೆ ಲಸಿಕೆಯನ್ನು ದೇಶದ ಎಲ್ಲ ಜನರಿಗೂ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೊರೊನಾ ವೈರಸ್ ಹಾವಳಿ ಹೆಚ್ಚಿರುವ 8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸುದೀರ್ಘ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು ವೈರಸ್ ನಿಯಂತ್ರಣಕ್ಕೆ ರಾಜ್ಯಗಳು ಕೈಗೊಳ್ಳಬೇಕಾದ ಸಲಹೆ-ಸೂಚನೆ ನೀಡಿದ್ದಾರೆ.
ಕೊರೊನಾ ವೈರಸ್ ಗೆ ಲಸಿಕೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ತೀವ್ರ ನಿಗಾ ಇರಿಸಿದೆ. ಭಾರತ ಹಾಗೂ ವಿದೇಶಗಳ ಲಸಿಕೆ ಸಂಶೋಧಕರು ಹಾಗೂ ಉತ್ಪಾದಕರ ಜೊತೆ ಸರ್ಕಾರವು ಸಂಪರ್ಕದಲ್ಲಿದೆ. ಲಭಿಸಬಹುದಾದ ಲಸಿಕೆ ಎಲ್ಲ ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾಗಿ ನಾಗರಿಕರಿಗೆ ಲಭ್ಯವಾಗುವಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಹೇಳಿದರು.
0 التعليقات: