Thursday, 12 November 2020

ವೈದ್ಯಕೀಯ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ದಂತ- ವೈದ್ಯಕೀಯ ಸೀಟು ಶುಲ್ಕ ಹೆಚ್ಚಳ?

 

ವೈದ್ಯಕೀಯ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 

 ಬಿಗ್ ಶಾಕ್ : ದಂತ- ವೈದ್ಯಕೀಯ ಸೀಟು ಶುಲ್ಕ ಹೆಚ್ಚಳ?


ಬೆಂಗಳೂರು : ವೈದ್ಯಕೀಯ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಪ್ರಸಕ್ತ ಸಾಲಿನಲ್ಲಿ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಶುಲ್ಕ ಶೇ. 15 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಶುಲ್ಕ ಹೆಚ್ಚಳ ಸಂಬಂಧ ಸರ್ಕಾರ ಮತ್ತು ಖಾಸಗಿ ವೈದ್ಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಶುಲ್ಕ ಹೆಚ್ಚಳದ ಅಧಿಕೃತ ಆದೇಶ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಶುಲ್ಕ ಏರಿಕೆಯಿಂದ 2020-21 ರ ಶೈಕ್ಷಣಿಕ ವರ್ಷಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 1.11 ಲಕ್ಷ ರೂ. ಇದ್ದ ಸರ್ಕಾರಿ ಕೋಟಾ ಸೀಟುಗಳ ಶುಲ್ಕ 1.28 ಲಕ್ಷ ರೂ.ಗಳಿಗೆ 7.85 ಲಕ್ಷ ರೂ. ಇರುವ ಆಡಳಿತ ಮಂಡಳಿ ಕೋಟಾ ಸೀಟುಗಳ ಶುಲ್ಕ 9.81 ಲಕ್ಷ ರೂ.ಗಳಿಗೆ ಹೆಚ್ಚಳವಾಗಲಿದೆ.

ದಂತ ವೈದ್ಯಕೀಯ ಕಾಲೇಜುಗಳಲ್ಲಿ 72 ಸಾವಿರ ರೂ. ಇರುವ ಸರ್ಕಾರಿ ಕೋಟಾದ ಸೀಟುಗಳ ಶುಲ್ಕ 83 ಸಾವಿರ ರೂ.ಗಳಿಗೆ ಹಾಗೂ 5.32 ಲಕ್ಷ ರೂ. ಇರುವ ಆಡಳಿತ ಮಂಡಳಿ ಸೀಟುಗಳ ಶುಲ್ಕ 6.66 ಲಕ್ಷ ರೂ. ಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.SHARE THIS

Author:

0 التعليقات: