ಕಣಿವೆ ರಾಜ್ಯದಲ್ಲಿ ಉಗ್ರರ ಅಡಗುತಾಣ ಪತ್ತೆ : ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಸೇನೆ
ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಉಗ್ರರ ಅಡಗುತಾಣ ಪತ್ತೆ ಮಾಡಿರುವ ಭದ್ರತಾ ಪಡೆಗಳು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.
ಖಚಿತ ಮಾಹಿತಿ ಮೇರೆಗೆ ಗಡಿ ನಿಯಂತ್ರಣ ರೇಖೆಯ ಬಳಿ ಹುದುಗಿಸಿಡಲಾಗಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ದೊಡ್ಡ ಚೀಲ ಪತ್ತೆಯಾಗಿದೆ. ನಾಲ್ಕು ಎಕೆ-56 ರೈಫಲ್ಗಳು, 4 ಎಕೆ ಮ್ಯಾಗಜಿನ್, 141 ಎಕೆ ರೌಂಡ್ಗಳು ಮತ್ತು ಎರಡು ಎಜಿಎಲ್ ಗ್ರೆನೇಡ್ಗಳು, ಎರಡು ಹ್ಯಾಂಡ್ ಗ್ರೆನೆಡ್ಗಳು, ಡೈರಿಗಳು, ಒಂದು ಕ್ಯಾಮೆಲ್ ಬ್ಯಾಗ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಶಸ್ತ್ರಾಸ್ತ್ರಗಳನ್ನು ಲಷ್ಕರೆ ತಯ್ಬಾ ಉಗ್ರರಿಗೆ ನೀಡಲು ಕಾಶ್ಮೀರ ಕಣಿವೆಗೆ ಸಾಗಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
0 التعليقات: