Tuesday, 24 November 2020

ಕಾಂಗ್ರೆಸ್ ನ ಹಿರಿಯ ನಾಯಕ `ಅಹ್ಮದ್ ಪಟೇಲ್' ವಿಧಿವಶ


ಕಾಂಗ್ರೆಸ್ ನ ಹಿರಿಯ ನಾಯಕ `ಅಹ್ಮದ್ ಪಟೇಲ್' ವಿಧಿವಶ


ನವದೆಹಲಿ : ಕಾಂಗ್ರೆಸ್ ನ ಹಿರಿಯ ನಾಯಕ ಅಹ್ಮದ್ ಪಟೇಲ್(71) ಅವರು ಇಂದು ಮುಂಜಾನೆ ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಅಕ್ಟೋಬರ್ 1ರಂದು ಫರೀದಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಗುರುಗ್ರಾಮದ ಮೇದಂತಾ ಮೆಡಿಸಿಟಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ.

ಇಂದು ಮುಂಜಾನೆ 3.30ಕ್ಕೆ ಅಹ್ಮದ್ ಪಟೇಲ್ ಅವರು ಕೊನೆಯುಸಿರೆಳೆದರು ಎಂದು ಅವರ ಪುತ್ರ ಫೈಸಲ್ ಪಟೇಲ್ ಟ್ವಿಟರ್ ನಲ್ಲಿ ಹೇಳಿಕೆ ನೀಡಿದ್ದಾರೆ. 'ಒಂದು ತಿಂಗಳ ಹಿಂದೆ ಕೋವಿಡ್-19 ಗೆ ಪಾಸಿಟಿವ್ ಪರೀಕ್ಷೆ ನಡೆಸಿದ ನಂತರ, ಬಹು ಅಂಗಾಂಗ ವೈಫಲ್ಯದಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು' ಎಂದು ಅವರು ಹೇಳಿದರು.

ರಾಜಕೀಯ ವಲಯದಲ್ಲಿ 'ಅಹ್ಮದ್ ಭಾಯಿ' ಅಥವಾ 'ಆಪ್' ಎಂದೇ ಜನಪ್ರಿಯರಾಗಿದ್ದ ಪಟೇಲ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರಬಲ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.SHARE THIS

Author:

0 التعليقات: