ಜಿಲ್ಲಾ ಸುನ್ನೀ ನಾಯಕರ ಸ್ನೇಹ ಸಮ್ಮಿಲನ: ಎಸ್.ಎಸ್.ಎಫ್ ನೊಂದಿಗೆ ಕೈ ಜೋಡಿಸಿ- ಅಬೂಸುಫ್ಯಾನ್ ಮದನಿ
ಉಡುಪಿ: ಜಿಲ್ಲೆಯ ಸುನ್ನೀ ನಾಯಕರಾದ ಎಸ್.ವೈ.ಎಸ್, ಎಸ್.ಜೆ.ಎಂ, ಕೆ.ಎಂ.ಜೆ, ಎಸ್.ಎಂ.ಎ ಹಾಗೂ ಎಸ್.ಎಸ್.ಎಫ್ ನ ಹಳೆಯ ಕಾಲದ ನಾಯಕರನ್ನೊಳಗೊಂಡ ಮಹಾ ಸಮ್ಮಿಲನವೂ ಅಜ್ಜರಕಾಡು ಸುನ್ನೀ ಕಛೇರಿಯಲ್ಲಿ ನಡೆಯಿತು.
ಮುಖ್ಯ ಭಾಷಣದೊಂದಿಗೆ ವಿಷಯ ಮಂಡಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಅಬೂಸುಫ್ಯಾನ್ ಮದನಿಯವರು, ಎಲ್ಲಾ ನಾಯಕರು ಎಸ್.ಎಸ್.ಎಫ್ ನ ಸದಸ್ಯತ್ವ ಅಭಿಯಾನದಲ್ಲಿ ಸಹಕರಿಸಿ, ಸುನ್ನತ್ ಜಮಾಅತಿನೊಂದಿಗೆ ಕೈ ಜೋಡಿಸಬೇಕೆಂದು ಕರೆ ಇತ್ತರು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದ ಎಸ್.ಎಸ್.ಎಫ್ ಉಡುಪಿ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ, ಯುವ ಜನತೆ ಪ್ರಸಕ್ತ ಸನ್ನಿವೇಶಗಳಲ್ಲಿ ಮಾದಕ ದ್ರವ್ಯಗಳಿಂದ ಮುಕ್ತಿ ಹೊಂದುವAತಾಗಲು ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಸುನ್ನೀ ಪಡೆಯ ಆವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಎಸ್.ಎಸ್.ಎಫ್ ಸರ್ವರ ಬೆಂಬಲ ಕೋರಿದರು. ಬಳಿಕ ನಡೆದ ಚರ್ಚಾ ಕೂಟದಲ್ಲಿ ಎಸ್.ಎಂ.ಎ ಪ್ರಧಾನ ಕಾರ್ಯದರ್ಶಿ ಮಜೂರು ಸಖಾಫಿ, ರಾಜ್ಯ ಎಸ್.ಎಸ್.ಎಫ್ ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ, ಎಸ್.ವೈ.ಎಸ್ ನಾಯಕ ಅಡ್ವಕೆಟ್ ಹಚಿಝತ್ ಹೆಜಮಾಡಿ, SSF ಹಿರಿಯ ನಾಯಕ ಸಿದ್ದೀಕ್ ಮಾಸ್ಟರ್ ಕುಂದಾಪುರ ಭಾಗವಹಿದರು.
ಸಭೆಯಲ್ಲಿ ಮುಸ್ಲಿಂ ಜಮಾತ್ ಜಿಲ್ಲಾ ಕಾರ್ಯಾಧ್ಯಕ್ಷ ಸುಬ್ಹಾನ್ ಹೊನ್ನಾಳ, ಗುಡ್ವಿಲ್ಹಾಜಿ ಉಡುಪಿ, ಮನ್ಸೂರ್ ಹಾಜಿ ಕೋಡಿ, SJM ನಾಯಕ ಕಾಸಿಮಿ ಉಸ್ತಾದ್ , ಜಿಲ್ಲಾ SSF ನಾಯಕರಾದ ಮಜೀದ್ ಹನೀಫಿ, ಇಮ್ರಾನ್ ಬಶೀರ್, ಇಬ್ರಾಹಿಮ್ ಮಜೂರ್ ಹಾಜರಿದ್ದರು. SSF ಜಿಲ್ಲಾ ಪ್ರ.ಕಾರ್ಯದರ್ಶಿ NC ರಹೀಂ ಹೊಸ್ಮಾರ್ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಮುಸ್ಲಿಯಾರ್ ಧನ್ಯವಾದ ಸಲ್ಲಿಸಿದರು. ಕೊನೆಯಲ್ಲಿ ತಹ್ಲೀಲ್ಹೇಳಿ ಅಗಲಿದ ಸುನ್ನೀ ನಾಯಕರಿಗಾಗಿ ದುಆ ನಡೆಸಲಾಯಿತು.
0 التعليقات: