Thursday, 19 November 2020

ಮನಮೋಹನ್ ಸಿಂಗ್, ರಾಹುಲ್ ಗಾಂಧಿಗೆ ಅಪಮಾನ - ಒಬಾಮ ವಿರುದ್ಧ ದೂರು ದಾಖಲು

 

ಮನಮೋಹನ್ ಸಿಂಗ್, ರಾಹುಲ್ ಗಾಂಧಿಗೆ ಅಪಮಾನ - ಒಬಾಮ ವಿರುದ್ಧ ದೂರು ದಾಖಲು

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಪಮಾನ ಮಾಡಿದ ಕುರಿತಾಗಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ದೂರು ದಾಖಲಾಗಿದೆ.

ಬರಾಕ್ ಒಬಾಮ ಅವರ ಪುಸ್ತಕ 'ದಿ ಪ್ರಾಮಿಸ್ಡ್ ಲ್ಯಾಂಡ್' ನಲ್ಲಿ ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರನ್ನು ಅವಮಾನಿಸಲಾಗಿದೆ ಎಂದು ವಕೀಲ ಪ್ರಕಾಶ್ ಶುಕ್ಲಾ ಅವರು ಲಾಲ್ ಗಂಜ್ ಸಿವಿಲ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದಾರೆ.

ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಒಬಾಮ ಅಪಮಾನಕರವಾಗಿ ಬರೆದಿದ್ದು, ಅವರ ಬೆಂಬಲಿಗರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಹೀಗಾಗಿ ಎಫ್‌ಐಆರ್ ದಾಖಲಿಸಬೇಕು. ಇಲ್ಲದಿದ್ದರೆ ದೆಹಲಿಯ ಅಮೆರಿಕ ರಾಯಭಾರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದು, ಮೊಕದ್ದಮೆ ವಿಚಾರಣೆಯನ್ನು ಡಿಸೆಂಬರ್ 1 ಕ್ಕೆ ನಿಗದಿಪಡಿಸಲಾಗಿದೆ.


SHARE THIS

Author:

0 التعليقات: