Wednesday, 4 November 2020

ಅಮೆರಿಕ ಅಧ್ಯಕ್ಷ ಗದ್ದುಗೆಯತ್ತ ಬಿಡೆನ್, ಟ್ರಂಪ್ ಕಾನೂನು ಸಮರ

 

ಅಮೆರಿಕ ಅಧ್ಯಕ್ಷ ಗದ್ದುಗೆಯತ್ತ ಬಿಡೆನ್, ಟ್ರಂಪ್ ಕಾನೂನು ಸಮರ

ವಾಷಿಂಗ್ಟನ್/ನ್ಯೂಯಾರ್ಕ್, ನ.5- ಇಡೀ ವಿಶ್ವದಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫೋಟೋ ಫಲಿತಾಂಶ ನೀಡಿದ್ದು, ಅಧ್ಯಕ್ಷ ಗದ್ದುಗೆಗೇರಲು ಮಾಜಿ ಉಪಾಧ್ಯಕ್ಷ ಮತ್ತು ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಸಜ್ಜಾಗಿದ್ದಾರೆ.

ಮತಗಳ ಎಣಿಕೆ ಆರಂಭದಿಂದಲೂ ಬಿಡೆನ್‍ಗೆ ತೀವ್ರ ಪೈಪೋಟಿ ನೀಡುತ್ತಿದ್ದ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಉಮೇದುವಾರ ಡೊನಾಲ್ಡ್ ಟ್ರಂಪ್ ಗೆಲುವಿನ ಅಸೆ ಕಮರಿ ಹೋಗಿದೆ. ಅನೇಕ ರಾಜ್ಯಗಳಲ್ಲಿ ಬಿಡೆನ್ ಮತ್ತು ಅವರ ಬೆಂಬಲಿಗರು ಚುನಾವಣಾ ಅಕ್ರಮಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿರುವ ಟ್ರಂಪ್ ಕಾನೂನು ಸಮರ ಆರಂಭಿಸಿದ್ದಾರೆ.

ಇದೇ ವೇಳೆ ಭಾರತೀಯ ಮೂಲದ ಸೆನೆಟರ್ ಮತ್ತು ಪ್ರಭಾವಿ ನಾಯಕಿ ಕಮಲಾ ಹ್ಯಾರಿಸ್ ಅವರೂ ಕೂಡ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಲಿದ್ದಾರೆ. ಕಮಲಾ ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಮಣಿಸಿ ಉಪಾಧ್ಯಕ್ಷ ಗದ್ದುಗೆ ಏರಲು ಸನ್ನದ್ಧರಾಗಿದ್ದಾರೆ.

ಹೈವೋಲೇಜ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, 538 ಎಲೆಕ್ಟ್ರೋಲ್ ಕಾಲೇಜ್ ವೋಟ್‍ಗಳಲ್ಲಿ (ಪ್ರತಿನಿಗಳ ಮತ) ಬಿಡೆನ್ ಮ್ಯಾಜಿಕ್ 270 ಸಂಖ್ಯೆಗೆ ತೀರಾ ಸನಿಹದಲ್ಲಿದ್ದಾರೆ.

ಅವರು 264 ಪ್ರಾತಿನಿಕ ಮತಗಳನ್ನು ಗಳಿಸಿದ್ದು, ಬೆಳಗ್ಗೆ 10.30ರ ಮಾಹಿತಿ ಪ್ರಕಾರ ಶ್ವೇತಭವನದ ಕುರ್ಚಿಗೇರಲು ಆವರಿಗೆ ಕೇವಲ 6 ಸಂಖ್ಯೆಗಳ ಕೊರತೆ ಇತ್ತು.. ಆದರೆ ಡೊನಾಲ್ಡ್ ಟ್ರಂಪ್ 214 ಎಲೆಕ್ಟ್ರೋಲ್ ಕಾಲೇಜ್ ಮತಗಳನ್ನು ಗಳಿಸಿದ್ದು, ಅವರ ಗೆಲುವಿನ ಮಹತ್ವಾಕಾಂಕ್ಷೆ ನುಚ್ಚುನೂರಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಅಕೃತವಾಗಿ ಪ್ರಕಟಗೊಳ್ಳಬೇಕಿದೆ.

ಮತಗಳ ಎಣಿಕೆ ಆರಂಭದಿಂದಲೂ ಬಿಡೆನ್, ಅಧ್ಯಕ್ಷ-ರಿಪಬ್ಲಿಕ್ ಪಕ್ಷದ ಉಮೇದುವಾರ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಟ್ರಂಪ್ ಪ್ರಾಬಲ್ಯ ಇದ್ದ ಅನೇಕ ರಾಜ್ಯಗಳು ಮತ್ತು ಪ್ರಮುಖ ನಗರಗಳಲ್ಲಿ ಬಿಡೆನ್ ವಿಜಯಿಯಾಗಿದ್ದಾರೆ. ಅಮೆರಿಕ 50 ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ಕೆಲವೆಡೆ ಟ್ರಂಪ್ ಮತ್ತು ಬಿಡೆನ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.

ಟ್ರಂಪ್ ಅವರು ತಡರಾತ್ರಿ ಫಲಿತಾಂಶದ ಪ್ರಕಾರ ಪೆನ್ಸಿಲೆನ್ವಿಯಾ, ನಾರ್ತ್ ಕರೋಲಿನಾ, ಮಿಚಿಗನ್ ಮತ್ತು ಜಾರ್ಜಿಯಾಗಳಲ್ಲಿ ಗೆಲುವು ಸಾಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದಲ್ಲಿ ಮಹತ್ವದ ಪಾತ್ರ ವಹಿಸುವ ಕೆಲವು ರಾಜ್ಯಗಳಲ್ಲಿ ಟ್ರಂಪ್ ಮತ್ತು ಬಿಡೆನ್ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಫೋಟೋ ಫಿನಿಶ್ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತ್ತು.

ಗಗನಚುಂಬಿ ನಗರಿ ನ್ಯೂಯಾರ್ಕ್‍ನಲ್ಲಿ 10 ಲಕ್ಷ ಮತಗಳ ಅಂತರದಿಂದ ಟ್ರಂಪ್‍ರನ್ನು ಬಿಡೆನ್ ಮಣಿಸಿದ್ದಾರೆ. ಈ ನಗರದಲ್ಲಿ ಬಿಡೆನ್ ಪರ 2.2 ದಶಲಕ್ಷ ಮತಗಳು ಸಂದಾಯವಾದರೆ, ಟ್ರಂಪ್ ಬೆಂಬಲವಾಗಿ 1.2 ದಶಲಕ್ಷ ಮತಗಳು ಹಾಕಲ್ಪಟ್ಟವು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, 23.9 ಕೋಟಿ ಅಮೆರಿಕನ್ನರು ಮತದಾನದ ಹಕ್ಕುಗಳನ್ನು ಹೊಂದಿದ್ದರು. ಆರಂಭದಲ್ಲೇ 16 ಕೋಟಿ ಮಂದಿ ಮತ ಚಲಾಯಿಸಿರುವುದು ಹೊಸ ದಾಖಲೆಯಾಗಿದೆ.

ಭಾರೀ ಸಂಖ್ಯೆಯಲ್ಲಿ ಮತದಾನವಾಗಿರುವುದರಿಂದ ಫಲಿತಾಂಶ ನಿರೀಕ್ಷೆಗೂ ಮೀರಿ ವಿಳಂಬವಾಗಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರಾಯ್ಕೆಯಾಗುತ್ತಾರೋ ಅಥವಾ ಮಾಜಿ ಉಪಾಧ್ಯಕ್ಷ-ಡೆಮೊಕ್ರಾಟಿಕ್ ನಾಯಕ ಜೋ ಬಿಡೆನ್ ಗೆಲ್ಲುತ್ತಾರೆ ಎಂಬ ಕದನ ಕೌತುಕ ಮೂಡಿಸಿತ್ತು. ವಿಶ್ವದಾದ್ಯಂತ ಇದೇ ವಿಷಯ ಮುಖ್ಯವಾಗಿ ಚರ್ಚೆಗೆ ಗ್ರಾಸವಾಗಿತ್ತು.


 ಟ್ರಂಪ್ ಕಾನೂನು ಸಮರ :

ತಮ್ಮ ಪ್ರಾಬಲ್ಯವಿದ್ದ ಅನೇಕ ರಾಜ್ಯಗಳಲ್ಲಿ ಬಿಡೆನ್ ಜಯ ಸಾಸಿ ಗೆಲುವಿನತ್ತ ದಾಪುಗಾಲು ಹಾಕುತ್ತಿರುವಾಗಲೇ ಟ್ರಂಪ್ ಕಾನೂನು ಸಮರ ಆರಂಭಿಸಿದ್ದಾರೆ. ಈ ಚುನಾವಣೆಯಲ್ಲಿ ಭಾರೀ ಅಕ್ರಮ ಮತ್ತು ಅವ್ಯವಹಾರಗಳು ನಡೆದಿವೆ. ಅಮೆರಿಕನ್ನರಿಗೆ ಬಿಡೆನ್ ಮತ್ತು ಅವರ ಬೆಂಬಲಿಗರು ಮೋಸ ಮಾಡಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ತಾವು ಇದನ್ನು ಸುಪ್ರೀಂಕೋರ್ಟ್‍ವರೆಗೂ ತೆಗೆದುಕೊಂಡು ನ್ಯಾಯಕ್ಕಾಗಿ ಹೋರಾಡುವುದಾಗಿ ತಿಳಿಸಿದ್ದಾರೆ.


SHARE THIS

Author:

0 التعليقات: