Friday, 20 November 2020

ಅಮೇರಿಕಾದ ಮಾಲ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿಗೆ ಗಾಯ..!

 



ಅಮೇರಿಕಾದ ಮಾಲ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿಗೆ ಗಾಯ..!

ವಾಷಿಂಗ್ಟನ್ : ಅಮೇರಿಕಾದ ಮಾಲ್ ಒಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಎಂಟು ಮಂದಿಗೆ ಗಾಯಗಳಾಗಿದೆ.

ಅಮೇರಿಕಾದ ವಿಸ್ಕಾನ್ಸಿನ್ನ ಮಿಲ್ವಾಕಿ ಯಲ್ಲಿರುವ ಮೇಫೀಲ್ಡ್ ಶಾಪಿಂಗ್ ಮಾಲ್ನಲ್ಲಿ ಈ ಹಠಾತ್ ಗುಂಡಿನ ಚಕಮಕಿ ನಡೆದಿದೆ .ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆಯಲ್ಲಿ ಈವರೆಗೆ 8 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಶೂಟೌಟ್ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಸ್ಥಳೀಯ ಮೇಯರ್ ಡೆನ್ನಿಸ್ ಮೆಕ್ಬ್ರೈಡ್ ಅವರು ಸ್ಪಷ್ಟಪಡಿಸಿದ್ದಾರೆ.

ಘಟನೆ ನಡೆದ ಕೆಲವೇ ಕ್ಷಣದಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ. ಸುಮಾರು 75 ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಆದರೆ ಅಪರಾಧಿಯನ್ನು ಹಿಡಿಯಲು ವಿಫಲವಾಗಿದ್ದಾರೆ. ಆದರೆ ಅದಾಗಲೇ ದಾಳಿಕೋರ ತಪ್ಪಿಸಿಕೊಂಡಿದ್ದಾನೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ಕೆಲ ತುಣುಕುಗಳು ಲಭ್ಯವಾಗಿದ್ದು, ಗಾಯಾಳಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುವ ದೃಶ್ಯಾವಳಿಗಳು ಕಾಣಸಿಗುತ್ತಿವೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಶೂಟೌಟ್ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


SHARE THIS

Author:

0 التعليقات: