ಗೂಗಲ್ ಪೇಗೂ ಪೇ ಮಾಡ್ಬೇಕು; ಹಣ ಕಳಿಸೋದಕ್ಕೂ ಸದ್ಯದಲ್ಲೇ ಚಾರ್ಜ್
ನವದೆಹಲಿ: ಒಂದರಿಂದ ಸಾವಿರಾರು ರೂಪಾಯಿಗಳವರೆಗೆ ಕುಳಿತಲ್ಲಿಂದಲ್ಲೇ ಕ್ಷಣಮಾತ್ರದಲ್ಲಿ ಖರ್ಚಿಲ್ಲದೆ ಕಳುಹಿಸಲು ಅದೆಷ್ಟೋ ಮಂದಿ ಗೂಗಲ್ ಪೇ ಬಳಸುತ್ತಿದ್ದಾರೆ. ಆದರೆ ಹೀಗೆ ಗೂಗಲ್ ಪೇ ಮೂಲಕ ಉಚಿತವಾಗಿ ಹಣ ಕಳುಹಿಸುವ ವ್ಯವಸ್ಥೆ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ!
ಹೌದು.. ಸದ್ಯದಲ್ಲೇ ಗೂಗಲ್ ಪೇ ಮೂಲಕ ಹಣ ಕಳುಹಿಸುವುದಕ್ಕೂ ಶುಲ್ಕ ಪಡೆಯಲಾಗುತ್ತದೆ. ಮುಂದೆ ಹಣ ಕಳುಹಿಸುವುದಕ್ಕೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ಬಗ್ಗೆ ಗೂಗಲ್ ಪೇ ಸ್ಪಷ್ಟವಾಗಿ ಹೇಳದಿದ್ದರೂ, ಗೂಗಲ್ ಪೇ ವ್ಯವಸ್ಥೆ ಮುಂದೆ ಉಚಿತವಾಗಿ ಲಭಿಸುವುದಿಲ್ಲ ಎಂಬ ಮಾಹಿತಿಯನ್ನು ಅದು ಬಿಟ್ಟುಕೊಟ್ಟಿದೆ. ಅಮೆರಿಕದ ಬಳಕೆದಾರರಿಗೆ ಸಾಕಷ್ಟು ಹೊಸ ಫೀಚರ್ಸ್ ಒದಗಿಸಿರುವ ಗೂಗಲ್ ಪೇ ಅಲ್ಲಿನ ತನ್ನ ಲೋಗೋ ಕೂಡ ಬದಲಿಸಿದೆ.
2021ರ ಜನವರಿಯಿಂದ ಗೂಗಲ್ ಪೇ ಸದ್ಯದ ಹಣ ವರ್ಗಾವಣೆ ವ್ಯವಸ್ಥೆ ಸ್ಥಗಿತಗೊಳಿಸಲಿದ್ದು, ಬದಲಿಗೆ ಇನ್ಸ್ಟಂಟ್ ಮನಿ ಟ್ರಾನ್ಸ್ಫರ್ ಸಿಸ್ಟಮ್ ಅಳವಡಿಸಲಿದೆ. ಆ ಬಳಿಕ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿದೆ.
0 التعليقات: