Sunday, 22 November 2020

ವಿಜಯಪುರ : ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ


 ವಿಜಯಪುರ : ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

ವಿಜಯಪುರ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ವಿಜಯಪುರ ಜಿಲ್ಲಾ ಸಮಿತಿಯನ್ನು ನಾಗರಬೌಡಿ ಅನ್ವಾರೇ ಮುಸ್ತಫಾ ಸಭಾಂಗಣದಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಧ್ಯಕ್ಷತೆ ವಹಿಸಿದ ಸಭೆಯನ್ನು ಸಯ್ಯಿದ್ ತ್ವಾಹಿರ್ ಹುಸೈನ್ ಜಿಸ್ತಿ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಮುಸ್ತಫಾ ನಈಮಿ ಹಾವೇರಿ ದಿಕ್ಸೂಚಿ ಭಾಷಣ ಮಾಡಿದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಕೋಶಾಧಿಕಾರಿ ಅಬ್ದುರ್ರವೂಫ್ ಕುಂದಾಪುರ, ರಾಜ್ಯ ನಾಯಕ ಮುನೀರ್ ಸಖಾಫಿ ಉಳ್ಳಾಲ ಮಾತನಾಡಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಇಸ್ಮಾಯಿಲ್ ಮಾಸ್ಟರ್, ಅಶ್ರಫ್ ಅಮ್ಜದಿ ಉಡುಪಿ, ಮುಬಶ್ಶಿರ್ ಅಹ್ಸನಿ, ಎಕೆ ರಝಾ ಅಮ್ಜದಿ, ಸಫ್ವಾನ್ ಚಿಕ್ಕಮಗಳೂರು, ಮುನೀರ್ ಮದನಿ ಮೈಸೂರು, ರಫೀಕ್ ಮಾಸ್ಟರ್, ಶರೀಫ್ ಕೊಡಗು ಉಪಸ್ಥಿತರಿದ್ದರು.

ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ಮೌಲಾನಾ ಅಬ್ದುಲ್ ಅಝೀಝ್ ಹಝ್ರತ್ , ಪ್ರಧಾನ ಕಾರ್ಯದರ್ಶಿಯಾಗಿ ಉಮರುಲ್ ಫಾರೂಖ್ ಸಖಾಫಿ ಹಾಗೂ ಕೋಶಾಧಿಕಾರಿಯಾಗಿ ಖಾಸಿಂ ರವರನ್ನು ಆಯ್ಕೆ ಮಾಡಲಾಯಿತು.‌

ಉಪಾಧ್ಯಕ್ಷರುಗಳಾಗಿ ಸಯ್ಯಿದ್ ತ್ವಾಹಿರ್ ಹುಸೈನ್, ಝಿಯಾಉದ್ದೀನ್ ಸಾಬ್, ಹಾಗೂ ಮೌಲಾನಾ ಶಾಕಿರ್ ತಾಂಬಾನಗರ್ ರವರನ್ನೂ ಕಾರ್ಯದರ್ಶಿಗಳಾಗಿ ಉಮರುಲ್ ಫಾರೂಖ್, ಹಸೈನಾರ್ ಝುಹ್ರಿ, ಝಮೀರ್ ಅಹ್ಮದ್, ಹಾಗೂ ಫಿರೋಜ್ ಖಾನ್ ರವರನ್ನು ಹಾಗೂ 12 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.

SHARE THIS

Author:

0 التعليقات: