Monday, 30 November 2020

ಮಧ್ಯಪ್ರದೇಶ: ಪತ್ನಿಗೆ ಮತಾಂತರವಾಗುವಂತೆ ಮತ್ತು ಉರ್ದು ಕಲಿಯಲು ಪೀಡಿಸುತ್ತಿದ್ದ ವ್ಯಕ್ತಿಯ ಬಂಧನ


 ಮಧ್ಯಪ್ರದೇಶ: ಪತ್ನಿಗೆ ಮತಾಂತರವಾಗುವಂತೆ ಮತ್ತು ಉರ್ದು ಕಲಿಯಲು ಪೀಡಿಸುತ್ತಿದ್ದ ವ್ಯಕ್ತಿಯ ಬಂಧನ

ಶಾದೋಲ್: 2018 ರಲ್ಲಿ ಪ್ರೀತಿಸಿ ವಿವಾಹವಾಗಿದ್ದ ಪತ್ನಿಯನ್ನು ಮತಾಂತರವಾಗಲು, ಉರ್ದು, ಅರೇಬಿಕ್ ಭಾಷೆಗಳನ್ನು ಕಲಿಯಲು ಪೀಡಿಸುತ್ತಿದ್ದ ಇರ್ಶಾದ್ ಖಾನ್ ನ್ನು ಮಧ್ಯಪ್ರದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 1968 ರ ಪ್ರಕಾರ ಬಂಧಿಸಲಾಗಿದೆ.

ಪ್ರೀತಿಸಿ ವಿವಾಹವಾಗಿದ್ದ ಯುವತಿ ಪ್ರಾಪ್ತ ವಯಸ್ಕಳಾಗಿದ್ದ ಕಾರಣ ಇರ್ಶಾದ್ ಖಾನ್ ಹಾಗೂ ಆ ಯುವತಿ ವಿವಾಹವಾಗಿದ್ದರು, ಪೊಲೀಸರು ಈ ಸಂಬಂಧ ಹೇಳಿಕೆಯನ್ನೂ ಪಡೆದಿದ್ದರು.

ಆದರೆ ನ.27 ರಂದು ಆಕೆ ತನ್ನ ಪೋಷಕರ ಮನೆಗೆ ಬಂದಿದ್ದಾಗ ಖಾನ್ ಪೊಲೀಸ್ ಠಾಣೆ ಮೆಟ್ಟಿಲೇರಿ ತನ್ನ ಪತ್ನಿಯನ್ನು ಬಲವಂತವಾಗಿ ತವರು ಮನೆಯಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ದೂರು ನೀಡಿದ್ದ. ಈ ಬಳಿಕ ಪೋಷಕರೂ ಸಹ ಪೊಲೀಸ್ ಠಾಣೆಗೆ ಬಂದು ಇರ್ಶಾದ್ ಖಾನ್ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದರು.

ಹಿಂದೂ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಪತಿ ತನಗೆ ಮತಾಂತರವಾಗುವುದಕ್ಕೆ ಹಾಗೂ ಅರೇಬಿಕ್, ಉರ್ದು ಭಾಷೆಗಳನ್ನು ಕಲಿಯುವುದಕ್ಕೆ ಒತ್ತಾಯಿಸುತ್ತಿದ್ದಾನೆ ಎಂದು ದೂರು ನೀಡಿದ್ದಾಳೆ

ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ 498ಎ, ಸೆಕ್ಷನ್ 3,4,5 ರ ಅಡಿಯಲ್ಲಿ ಇರ್ಶಾದ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.


SHARE THIS

Author:

0 التعليقات: